ಗಣೇಶ ಮಂದಿರ ಲೋಕಾರ್ಪಣೆ ಮತ್ತು 43 ನೇ ವರುಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ- ಕಹಳೆ ನ್ಯೂಸ್

ಶ್ರೀ ಗಣೇಶ ಮಂದಿರ ಲೋಕಾರ್ಪಣಾ ಮಹೋತ್ಸವದ ಮತ್ತು 43ನೇ ವರುಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೀಪ ಪ್ರಜ್ವಲನೆ ಮತ್ತು ಭಾರತ ಮಾತೆಯ ಪಾದಕಮಲಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಕರಕಮಲಗಳಿಂದ ಶ್ರೀ ಗಣೇಶ ಮಂದಿರ ದಲ್ಲಿ ಸಂಪನ್ನಗೊಂಡಿತು.
ಹಿರಿಯ ತಾಳಮದ್ದಳೆ ಕಲಾವಿದ ಮತ್ತು ವಿದ್ವಾನ್ ಶ್ರೀ ವೆಂಕಟೇಶ್ ಭಟ್ ಹಿರಣ್ಯ ಮತ್ತು ಹೆದ್ದಾರಿ ಶಾಲಾ ಸಂಚಾಲಕರು ಶ್ರೀ ರಾಜೇಶ್ ನಿಡುವಜೆ ಇವರು ಸ್ವಾಮಿಜೀಯವರನ್ನ ಪೂರ್ಣ ಕುಂಭ ಸ್ವಾಗತದಿಂದ ಬರಮಾಡಿಕೊಂಡಿದ್ದು ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ರವಿಶಂಕರ್ ಬದಿಯಾರು ಸಹಿತ ಎಲ್ಲ ಸದಸ್ಯರು ಮತ್ತು ಮಹಿಳಾ ಘಟಕ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಬಳಿಕ ದೀಪ ಪ್ರಜ್ವಲನೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ವೇದಿಕೆಯಲ್ಲಿ ಆಮಂತ್ರಣ ಪತ್ರಿಕೆ ವಿಧ್ಯುಕ್ತವಾಗಿ ಬಿಡುಗಡೆಗೊಳಿಸಿ ಪರಮ ಪೂಜ್ಯಶ್ರೀ ಸ್ವಾಮಿಜೀಯವರು ಗ್ರಾಮದ ಜನರ ಒಗ್ಗಟ್ಟು ಮತ್ತು ಪರಿಶ್ರಮದ ಬಗ್ಗೆ ತಿಳಿಸುತ್ತ ಈ ಮಂದಿರ ಮುಂದಿನ ದಿನಗಳಲ್ಲಿ ಬೆಳಗಲಿ ಎಂದು ಅಶೀರ್ವದಿಸಿದರು.
ಈ ಸಮಾರಂಭಕ್ಕೆ ಆಗಮಿಸಿ ತಮ್ಮ ಅಮೂಲ್ಯ ಉಪಸ್ಥಿತಿಯಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಊರಿನ ಗ್ರಾಮಸ್ಥರು , ಗಣ್ಯರು, ಭಕ್ತಾದಿಗಳು, ದಾನಿಗಳು, ಸಮಿತಿಯ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಬಂಧು-ಬಳಗದ ಪ್ರತಿಯೊಬ್ಬರಿಗೂ “ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.), ಬಾಯಾರು ಮುಳಿಗದ್ದೆ” ವತಿಯಿಂದ ಹೃತ್ಪೂರ್ವಕ ವಂದನೆಗಳನ್ನ ಸಮರ್ಪಿಸಲಾಯಿತು
ಸಮಾರಂಭವನ್ನ ಶೇಖರ್ ಶೆಟ್ಟಿ ಕುಲ್ಯಾರು ನಿರೂಪಿಸಿದರು, ಶ್ಯಾಮ ಸೂರ್ಯ ಮುಳಿಗದ್ದೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷರಾದ ರಾಜೇಶ್ ಮಾರು, ತಂತ್ರಿಗಳಾದ ಶ್ರೀನಿವಾಸ ಅನಲತ್ತಾಯ ಮತ್ತು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ವಸಂತ ಕಲ್ಲಗದ್ದೆ ವೇದಿಕೆಯಲ್ಲಿ ಉಪಸ್ತಿತರಿದ್ದರು










