Tuesday, July 14, 2026
ಸುದ್ದಿ

14 ಬಾರಿ ತಲೆಮರೆಸಿಕೊಂಡ ಆರೋಪಿ ಬಾಳೆ ಹೊನ್ನೂರು ಬಳಿ ಬಂಧನ- ಕಹಳೆ ನ್ಯೂಸ್

ಮಂಗಳೂರು: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ನ್ಯಾಯಾಲಯದಿಂದ 14 ಬಾರಿ ದಸ್ತಗಿರಿ ವಾರೆಂಟ್ ಹೊರಡಿಸಿದ್ದರೂ, ವಿಳಾಸ ಬದಲಾಯಿಸಿ ಬಂಧನಕ್ಕೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಂಕನಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿಯ ಸಂತೆ ಮೈದಾನ ಬೋವಿ ಕಾಲನಿ ನಿವಾಸಿ ಚಂದ್ರಶೇಖರ್ ಲಿಂಗರಾಜ್ ಬೋವಿ (26) ಬಂಧಿತ ಆರೋಪಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಂಕನಾಡಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು, ಒಂದೂವರೆ ವರ್ಷದಿಂದ ತಲೆ ಮರೆಸಿಕೊಂಡಿದ್ದ. ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 14 ಬಾರಿ ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಆದರೆ ಆರೋಪಿ ವಿಳಾಸ ಬದಲಾಯಿಸಿ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದ.

ಖಚಿತ ಮಾಹಿತಿ ಮೇರೆಗೆ ಜು.11ರಂದು ಕಂಕನಾಡಿ ನಗರ ಠಾಣಾ ವಾರಂಟ್ ಸಿಬಂದಿ ಬಾಲರಾಜ್ ಮತ್ತು ರವಿಕುಮಾರ್ ಅವರು ಬಾಳೆ ಹೊನ್ನೂರು ಬಳಿಯ ಮಲ್ಲಿಗೇಹಳ್ಳಿ ಮೈದಾಳು ಎಂಬಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.