Sunday, July 5, 2026
ಸುದ್ದಿ

ಜಾಗತಿಕ ವೇದಿಕೆಯಲ್ಲಿ ಭಾರತದ ಕೃಷಿ ಕ್ರಾಂತಿ: 18 ಲಕ್ಷ ಆಂಧ್ರ ರೈತರಿಗೆ ಕೃಷಿ ಕ್ಷೇತ್ರದ ‘ಆಸ್ಕರ್’ ಗರಿ – ಕಹಳೆ ನ್ಯೂಸ್

ಭಾರತೀಯ ಕೃಷಿ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಆಂಧ್ರಪ್ರದೇಶದ ಬರೋಬ್ಬರಿ **18 ಲಕ್ಷ ರೈತರ** ಧೀರ ಸೇನೆ ಜಾಗತಿಕ ಮಟ್ಟದ ಅತ್ಯುನ್ನತ **’ಫುಡ್ ಪ್ಲಾನೆಟ್ ಪ್ರೈಸ್ 2026′ (Food Planet Prize 2026)** ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸ್ವೀಡನ್‌ನ ಬಾಸ್ಟಾಡ್‌ನಲ್ಲಿ ನಡೆದ ಜಾಗತಿಕ ಮಟ್ಟದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಇಡೀ ವಿಶ್ವವೇ ಇಂದು ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದೆ.

ಸ್ವೀಡನ್‌ನ ಪ್ರಖ್ಯಾತ “‘ಕರ್ಟ್ ಬರ್ಗ್‌ಫೋರ್ಸ್ ಫೌಂಡೇಶನ್'” ನೀಡುವ ಈ ಪ್ರಶಸ್ತಿಯನ್ನು ಕೃಷಿ ಮತ್ತು ಪರಿಸರ ಕ್ಷೇತ್ರದ ‘ಆಸ್ಕರ್’ ಎಂದೇ ಪರಿಗಣಿಸಲಾಗುತ್ತದೆ. ಪ್ರಶಸ್ತಿಯು ಬರೋಬ್ಬರಿ **1.5 ಮಿಲಿಯನ್ ಯುಎಸ್ ಡಾಲರ್ (ಸುಮಾರು ₹12.5 ಕೋಟಿಗೂ ಹೆಚ್ಚು) ನಗದು ಬಹುಮಾನವನ್ನು ಒಳಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆಂಧ್ರಪ್ರದೇಶ ಸರ್ಕಾರದ ‘ಕಮ್ಯುನಿಟಿ ಮ್ಯಾನೇಜ್ಡ್ ನ್ಯಾಚುರಲ್ ಫಾರ್ಮಿಂಗ್’ (APCNF – ಸಮುದಾಯ ಆಧಾರಿತ ನೈಸರ್ಗಿಕ ಕೃಷಿ) ಯೋಜನೆಯು ಇಂದು ಜಗತ್ತಿನ ಅತಿ ದೊಡ್ಡ ಪರಿಸರಸ್ನೇಹಿ ಕೃಷಿ ಆಂದೋಲನವಾಗಿ ಮಾರ್ಪಟ್ಟಿದೆ.

ರಾಸಾಯನಿಕ ಮುಕ್ತ ಕ್ರಾಂತಿ:  ವಿಷಕಾರಿ ಕೃತಕ ಗೊಬ್ಬರ ಹಾಗೂ ಕೀಟನಾಶಕಗಳಿಗೆ ಸಂಪೂರ್ಣ ಬ್ರೇಕ್ ಹಾಕಿ, ಕೇವಲ ಸಾಂಪ್ರದಾಯಿಕ ಮತ್ತು ನೈಸರ್ಗಿಕ ಪದ್ಧತಿಗಳ ಮೂಲಕ ಭೂಮಿಯ ಫಲವತ್ತತೆಯನ್ನು ಮರಳಿ ತರಲಾಗಿದೆ.

ವಿಶ್ವ ದಾಖಲೆಯ ವ್ಯಾಪ್ತಿ: ರಾಜ್ಯದ ಸುಮಾರು 8,000ಕ್ಕೂ ಹೆಚ್ಚು ಹಳ್ಳಿಗಳ 1.8 ಮಿಲಿಯನ್ (18 ಲಕ್ಷ) ರೈತ ಕುಟುಂಬಗಳು ಈ ಯೋಜನೆಯಡಿ ಒಂದಾಗಿ, ಹಸಿರು ಕ್ರಾಂತಿಗೆ ಹೊಸ ಭಾಷ್ಯ ಬರೆದಿದ್ದಾರೆ

ಹವಾಮಾನ ಬದಲಾವಣೆಗೆ ಸಡ್ಡು ಹೊಡೆದ ನೈಸರ್ಗಿಕ ಕೃಷಿ

ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನಾದ್ಯಂತ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಆದರೆ, ಆಂಧ್ರದ ರೈತರ ಈ ನೈಸರ್ಗಿಕ ಕೃಷಿ ಪದ್ಧತಿಯು ಭೀಕರ ಚಂಡಮಾರುತ ಮತ್ತು ಬರಗಾಲದ ಸಂದರ್ಭದಲ್ಲೂ ದೃಢವಾಗಿ ನಿಂತು ಉತ್ತಮ ಇಳುವರಿ ನೀಡುವ ಮೂಲಕ ವಿಜ್ಞಾನಿಗಳನ್ನು ಬೆರಗುಗೊಳಿಸಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುವ ಜೊತೆಗೆ, ಇದು ಗ್ರಾಹಕರಿಗೆ ವಿಷಮುಕ್ತ ಶುದ್ಧ ಆಹಾರವನ್ನು ಖಾತರಿಪಡಿಸಿದೆ.

ವಿಶ್ವಕ್ಕೆ ಮಾದರಿಯಾದ ‘ಆಂಧ್ರ ಮಾಡೆಲ್’ ಆಂಧ್ರಪ್ರದೇಶದ ಈ ಯಶಸ್ಸಿನ ಮಾದರಿಯನ್ನು ಅಳವಡಿಸಿಕೊಳ್ಳಲು ಇಂದು ಜಗತ್ತಿನಾದ್ಯಂತ ಪೈಪೋಟಿ ಶುರುವಾಗಿದೆ. ಭಾರತದಲ್ಲಿ: ದೇಶದ 22 ರಾಜ್ಯಗಳು ಈಗಾಗಲೇ ಈ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿ ತಮ್ಮಲ್ಲಿ ಜಾರಿಗೆ ತರುತ್ತಿವೆ. ಈ ರೀತಿಯ ಕ್ರಾಂತಿ ಕರ್ನಾಟಕ ದಲ್ಲೂ ಆದಿತೆ, ಇಲಾಖೆ ಯಲ್ಲಿ ಅಧಿಕಾರಿ ಗಳ ಕೊರತೆ ಇರುವ ಕರಾ ವ ಳಿ ರೈತನ ಕೃಷಿ ಗೆ ಬೆಳಕು ಚೆಲ್ಲಿತೆ ಎಂಬ ಆಶಾ ಬಾವ ನಮ್ಮ ರೈತ ರದು