ಜು.05ರಂದು (ನಾಳೆ) ದಾಸ್ ಪ್ರಮೋಷನ್ಸ್ ಹೋಂ ನರ್ಸಿಂಗ್ ಕೇರ್ ಇದರ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನಾ ಸಮಾರಂಭ – ಕಹಳೆ ನ್ಯೂಸ್

ಮಂಗಳೂರು : ದಾಸ್ ಪ್ರಮೋಷನ್ಸ್ ಹೋಂ ನರ್ಸಿಂಗ್ ಕೇರ್ ಇದರ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನಾ ಸಮಾರಂಭವು ಜು.05ರಂದು ಗಣ ಹೋಮ ಮತ್ತು ಲಕ್ಷ್ಮಿ ಪೂಜೆಯೊಂದಿಗೆ ಮಂಗಳೂರಿನ ಕಂಕನಾಡಿಯಲ್ಲಿರುವ ಎಂಪೋರಿ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿ ನಡೆಯಲಿದೆ.
ಕಟೀಲು ಶ್ರೀ ಕ್ಷೇತ್ರದ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ್ ಅಸ್ರಣ್ಣರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಜೇಶ್ ಚೌಟ ಅವರು ನಾಮ ಫಲಕ ಅನಾವರಣಗೊಳಿಸಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು ಟಿ ಖಾದರ್ ಅವರು ಕೇಂದ್ರ ಕಚೇರಿ ಉದ್ಘಾಟನೆ ಮಾಡಲಿದ್ದಾರೆ.
ಇನ್ನು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ, ವಿಧಾನ ಪರಿಷತ್ತು ಸದಸ್ಯರಾದ ಐವನ್ ಡಿಸೋಜ, ಕೆ.ಪಿ.ಸಿ.ಸಿ., ಪ್ರಧಾನ ಕಾರ್ಯದರ್ಶಿಯಾಗಿರುವ ಮಿಥುನ್ ರೈ, ಹಾಗೂ ಡೈಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು 2ನೇ ಮಹಿಳಾ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಕುಮಾರಿ ಧನಲಕ್ಷ್ಮಿ ಅವರನ್ನು ಸನ್ಮಾನಿಸಿದ್ದಾರೆ.









