Wednesday, September 9, 2026
ಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಉತ್ಸವ “ಬಿಝ್‍ಬ್ಲೂಮ್ ಫೆಸ್ಟ್ 2026“ – ಕಹಳೆ ನ್ಯೂಸ್

 

ಜಾಹೀರಾತು

“ಗುರಿತಲುಪಲು ಸಿಗುವ ಅವಕಾಶಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದನ್ನು ಅರಿತುಕೊಳ್ಳಬೇಕು.ಗುರಿಯ ಕಡೆಗೆ ಇಡುವ ಪ್ರತಿಯೊಂದು ಹೆಜ್ಜೆಯೂ ಆ ದೂರವನ್ನುಒಂದು
ಹೆಜ್ಜೆಯಷ್ಟು ಕಡಿಮೆ ಮಾಡುತ್ತದೆ.ಸಿಗುವ ಸಣ್ಣ ಪುಟ್ಟ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಕುಶಲತೆಯನ್ನು ಮೈಗೂಡಿಸಿಕೊಳ್ಳಬೇಕು.ಸಾವಿರ ಮೈಲಿಯ ಪ್ರಯಾಣವೂ ಮೊದಲ ಹೆಜ್ಜೆಯಿಂದಲೇ ಪ್ರಾರಂಭವಾಗುತ್ತದೆ.ಇಂತಹ ಅವಕಾಶಗಳು ಯಶಸ್ಸನ್ನು ತಲುಪುವ ಏಣಿ ಇದ್ದಂತೆ.ವಿದ್ಯಾರ್ಥಿಗಳಿಗೆ ಹೊಸ ಜಗತ್ತಿನ ನಿಯಮಗಳ ಪರಿಚಯ ಮಾಡುವಜೊತೆಗೆ ಸೂಕ್ತ ಜ್ಞಾನ ನೀಡುವುದು ಅವಶ್ಯಕವಾಗಿದೆ.ಇಂದಿನ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿವರ್ತನೆತಂದುಕಲಿಕೆಯಲ್ಲಿ ಆಸಕ್ತಿ ಮೂಡಿಸವಂತೆ ಮಾಡುತ್ತದೆ.ಸಮಾಜಕ್ಕೆಒಬ್ಬ ಪರಿಣಿತ ಶಕ್ತಿಯಾಗಿ ಬದುಕು ಸಾಗಿಸಬೇಕು.ಎಂದು ಬಾಲವಿಕಾಸ ಟ್ರಸ್ಟ್ (ರಿ.) ಮಾಣಿ ಇದರ ಕಾರ್ಯದರ್ಶಿಗಳಾದ ಮಹೇಶ್ ಶೆಟ್ಟಿ ಜೆ. ಇವರು ಹೇಳಿದರು.
ಸೆ. 9 ರಂದು ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಕಾಮರ್ಸ್ ಅಸೋಸಿಯೇಷನ್ ಮತ್ತು ವಿದ್ಯಾರ್ಥಿಗಳ ಉದ್ಯಮ  ಕ್ಷೇತ್ರದ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸುವ ರಿಟೈಲ್ ಬ್ಯುಸಿನೆಸ್ ತರಬೇತಿ ಕಾರ್ಯಕ್ರಮ “ವ್ಯವಹಾರ “ ಇದರ ಸಹಯೋಗದೊಂದಿಗೆ ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಉತ್ಸವ ಬಿಝ್‍ಬ್ಲೂಮ್ ಫೆಸ್ಟ್ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

“ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ರಚನಾತ್ಮಕ ಕಾರ್ಯಗಳಲ್ಲಿ ಪ್ರೇರೇಪಿಸುತ್ತದೆ.ಅಂಕಗಳೊಂದಿಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಇದೆ.
ಸ್ಪರ್ಧಾತ್ಮಕಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನ ಸಂಪನ್ನರಾಗಿ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆ ನೀಡಬೇಕು “ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯಅತಿಥಿಯಾದ ಹಿಂದೂ ಇಕಾನೊಮಿಕ್ ಫೋರಂ ಪುತ್ತೂರು ಇದರ ಅಧ್ಯಕ್ಷರು ಆದ ಮೋಹನ ಕೆ. ಇವರು ಮಾತನಾಡುತ್ತ, ಈ ಕಾರ್ಯಕ್ರಮವು ಕೇವಲ ಪ್ರತಿಭೆಯ ಪ್ರದರ್ಶನ ಮಾತ್ರವಲ್ಲದೆ ಬದಲಾಗಿ ವಿದ್ಯಾರ್ಥಿಗಳು ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು, ತಮ್ಮ ಉತ್ಸಾಹಗಳನ್ನು ಕಂಡುಕೊಳ್ಳಲು ಮತ್ತು ಮರೆಯಲಾಗದ ನೆನಪುಗಳನ್ನು ರೂಪಿಸಿಕೊಳ್ಳಲು ಒಂದು ವೇದಿಕೆಯಾಗಿದೆ. ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಅಪರಿಮಿತ ಸಾಧ್ಯತೆಗಳನ್ನು ಅರಿತುಕೊಳ್ಳಲು ಅವಕಾಶವನ್ನು ನೀಡುತ್ತದೆ.ವಿದ್ಯಾರ್ಥಿಗಳು ಪಾಠದ ಜೊತೆಗೆ ಇತರ ಚಟುವಟಿಕೆ ಗಳಲ್ಲಿಯೂ ಭಾಗವಹಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಅನಾವರಣಗೊಳಿಸಬೇಕು.ವಿದ್ಯಾರ್ಥಿಗಳು ಆರೋಗ್ಯಪೂರ್ಣ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನದ ಪರಿಪೂರ್ಣತೆಯ ಕಡೆಗೆ ಸಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಸಂಪತ್ ಕುಮಾರ್ ಇವರು ಮಾತನಾಡುತ್ತಾ ವ್ಯಕ್ತಿ ಬದುಕನ್ನುರೂಪಿಸುವುದರಲ್ಲಿ ಶಿಕ್ಷಣಕ್ಕೆ ಪ್ರಮುಖ ಪಾತ್ರವಿದೆ. ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿಕೊಳ್ಳಲು ಶಿಕ್ಷಣದ ಜೊತೆಗೆ ಇಂತಹ

ಕಾರ್ಯಕ್ರಮದ ಅವಶ್ಯಕತೆಯಿದೆ.ಶಿಕ್ಷಣ ಕ್ಷೇತ್ರದಲ್ಲಿಅಪರಿಮಿತ  ಅವಕಾಶಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಾಜದ ಆಸ್ತಿಗಳಾಗಿ ಹೊರಹೊಮ್ಮಬೇಕಾಗಿದೆ. ಎಂದು ಹೇಳಿದರು. ಕಾರ್ಯಕ್ರಮದಲ್ಲಿಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ರವರು ಸ್ವಾಗತಿಸಿ, ಮಾತನಾಡುತ್ತಾ,” ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕಾಗಿ ತನ್ನ ಜೀವನದಲ್ಲಿ ಏಕಾಗ್ರತೆ , ಬದ್ಧತೆ,ಗುರಿಗಳನ್ನು ಅಳವಡಿಸಿಕೊಳ್ಳಬೇಕು.ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮೊದಲು ಆ ಬಗೆಗೆ ನಿರ್ಧಿಷ್ಟವಾದ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು.ಗುರಿಯ ದಿಕ್ಕಿನಲ್ಲಿ ಶ್ರಮವಹಿಸಿದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ “ಎಂದು ಹೇಳಿದರು.
ಕಾಲೇಜಿನಲ್ಲಿರುವ ವ್ಯವಹಾರ ಕ್ಲಬ್ ಇದರ ವಿಶೇಷತೆಗಳ ಬಗ್ಗೆ ಉಪನ್ಯಾಸಕರಾದ ಶ್ರೀಮತಿ ಸೌಮ್ಯ ರವರು ತಿಳಿಸುತ್ತಾ “ ವ್ಯವಹಾರ “ ಎಂಬ ರಿಟೈಲ್ ಬ್ಯುಸಿನೆಸ್ ತರಬೇತಿ ಕಾರ್ಯಕ್ರಮದ ಮೂಲಕ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಕೌಶಲ್ಯ ಮತ್ತುಜ್ಞಾನವನ್ನು ಸುಧಾರಿಸಲು ಅವಕಾಶಗಳನ್ನು ನೀಡಲಾಗುತ್ತಿದೆ.ಈ ತರಬೇತಿಯಲ್ಲಿ ವಿವಿಧ ತಜ್ಞರಿಂದ ವಿಶೇಷ ಉಪನ್ಯಾಸಗಳು, ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವ ಅವಕಾಶ, ಸೇಲ್ಸ್, ಅಕೌಂಟಿಂಗ್, ಮಾರ್ಕೆಟಿಂಗ್ ಮುಂತಾದ ವ್ಯಾಪಾರ ಆವರಣಗಳ ಭೇಟಿ, ಸಾಫ್ಟ್ ಸ್ಕಿಲ್ ತರಬೇತಿ
ಮತ್ತುಇನ್ನಿತರಕೌಶಲ್ಯಾಧಾರಿತ ತರಬೇತಿಗಳ ಮೂಲಕ ವಾಣಿಜ್ಯಕ್ಷೇತ್ರದಉದ್ಯಮಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.ಈ“ ವ್ಯವಹಾರ “ ವಿಭಾಗದ ಸಹಯೋಗದಲ್ಲಿ ಈ
ಬಿಝ್‍ಬ್ಲೂಮ್ ಫೆಸ್ಟ್ 2026 ಕಾರ್ಯಕ್ರಮವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ. ಮತ್ತು ಬಿಝ್‍ಬ್ಲೂಮ್ ಫೆಸ್ಟ್ 2026 ಇದರ ವಿದ್ಯಾರ್ಥಿ ಸಂಯೋಜಕರಾದ ದ್ವಿತೀಯ ವಿಜ್ಞಾನ ವಿಭಾಗದ ಕು.ಲೋಚನಾ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ನೈಜ ಜಗತ್ತಿನ ಕೌಶಲ್ಯ ಮತ್ತು ಜ್ಞಾನವನ್ನು ಸಂಯೋಜಿಸುವ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ
ನಿಟ್ಟಿನಲ್ಲಿ ವಿನ್ಯಾಸಗೊಳಿಸಿದ ಈ ಕಾರ್ಯಕ್ರಮದಲ್ಲಿ ಒಟ್ಟು 10 ವಿವಿಧ ಮಾದರಿಯ ಸ್ಪರ್ಧೆಗಳಲ್ಲಿ ವಿವಿಧ ಶಾಲೆಗಳ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ನಿರ್ದೇಶಕರಾದ ಶ್ರೀಮತಿ ಮಹಾಲಕ್ಷ್ಮೀ ಕೆ.
ಇವರು ಮಾತನಾಡುತ್ತಾ ಶಿಕ್ಷಣ , ಕ್ರೀಡೆ,ಚಿತ್ರಕಲೆ,ಸಂಗೀತ , ನಾಟಕ, ಹೀಗೆ ಪ್ರತೀ ಕ್ಷೇತ್ರದ ಚಟುವಟಿಕೆಗಳಲ್ಲಿಯೂ ನಿತ್ಯಭಾಗಿಯಾಗುವ ಮೂಲಕ ವಿದ್ಯಾರ್ಥಿಗಳು ತಮ್ಮ
ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತಾ ಸಾಗಬೇಕು.ಆಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ.ಎಲ್ಲರೂ ದಿನನಿತ್ಯ ಒಂದೊಂದು ಗುಣಾತ್ಮಕ ಚಿಂತನೆಯನ್ನು
ಮೈಗೂಡಿಸಿಕೊಳ್ಳಬೇಕು. ಉತ್ತಮ ಆಲೋಚನೆಗಳಿಂದ  ಜೀವನದ ಯಾವುದೇ ಸವಾಲನ್ನು ಧೈರ್ಯವಾಗಿ ಎದುರಿಸಬಹುದು.ಜೀವನದಲ್ಲಿಎದುರಾಗುವ ಸವಾಲನ್ನು ಎದುರಿಸಿ
ಸೋಲಲ್ಲೂ ಗೆಲುವನ್ನುಕಾಣುವ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು.ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಸಂಪತ್ ಕುಮಾರ್ ಇವರು ಮಾತನಾಡುತ್ತಾ “ಪ್ರತೀ ವ್ಯಕ್ತಿಯು ತನ್ನಲ್ಲಿರುವ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಬೇಕಾಗುತ್ತದೆ.ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಪೂರಕವಾದ ವೇದಿಕೆ ಇಂತಹ ಕಾರ್ಯಕ್ರಮಗಳಿಂದ ದೊರೆಯುತ್ತದೆ.ಪಠ್ಯ ಚಟುವಟಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗುವುದರಿಂದ ಅವರ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಸಹಕಾರಿಯಾಗುತ್ತದೆ.“ಎಂದು ಹೇಳಿದರು.

ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಪ್ರತೀ ವರ್ಷವು ಇಂತಹ ಅವಕಾಶ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗಲಿ ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.ಪ್ರತೀ ಸ್ಪರ್ಧೆಯ ವಿಜೇತರಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದು ವಿನ್ನರ್ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ದ್ವಿತೀಯ ಸ್ಥಾನ ಪಡೆದು ರನ್ನರ್ ಅಪ್ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.ಬಹುಮಾನ ವಿಜೇತರ ವಿವರಗಳನ್ನು ಉಪನ್ಯಾಸಕರಾದ ಶ್ರೀಮತಿ ಸೌಮ್ಯ ಇವರುವಾಚಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಸೌಮ್ಯ ಸ್ವಾಗತಿಸಿ, ಶ್ರೀಮತಿ ರೇಖಾ ವಂದಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀಮತಿ ರುಚಿತಾ ಕೃಷ್ಣ,ಶ್ರೀಮತಿ ರೇಣುಕಾ
ನಿರೂಪಿಸಿದರು.