
ಮಂಗಳೂರು : ಅಡ್ಡ ಮತದಾನ ಮಾಡಿದ ಆರೋಪದ ಬೆನ್ನಲ್ಲೇ ಬೇಲೂರು ಶಾಸಕ ಎಚ್.ಕೆ. ಸುರೇಶ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದರು. ನೂರಾರು ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಕೆ. ಸುರೇಶ್, ಸಂಪ್ರದಾಯದಂತೆ ನೇತ್ರಾವತಿ ನದಿ ನೀರನ್ನು ಸಂಪ್ರೋಕ್ಷಣೆ ಮಾಡಿಕೊಂಡು ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿದರು.











