ಪೂರ್ವ ಪ್ರಾಥಮಿಕ ಹಂತವು ಶಿಕ್ಷಣದ ಮೊದಲ ಮೆಟ್ಟಿಲು, ಈ ಹಂತದಲ್ಲಿ ಪಡೆದ ಶಿಕ್ಷಣವು ಭವಿಷ್ಯದ ತಳಹದಿಯಾಗಿರುತ್ತದೆ : ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ -ಕಹಳೆ ನ್ಯೂಸ್

ಕಲ್ಲಡ್ಕ : ಪೂರ್ವ ಪ್ರಾಥಮಿಕ ಹಂತವು ಶಿಕ್ಷಣದ ಮೊದಲ ಮೆಟ್ಟಿಲು, ಈ ಹಂತದಲ್ಲಿ ಪಡೆದ ಶಿಕ್ಷಣವು ಭವಿಷ್ಯದ ತಳಹದಿಯಾಗಿರುತ್ತದೆ ಎಂದು ಕಲ್ಲಡ್ಕ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಹೇಳಿದರು.
ಅವರು ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿ ಪೂರ್ವ ಪ್ರಾಥಮಿಕ ( ಎಲ್ ಕೆ ಜಿ ಮತ್ತು ಯು ಕೆ ಜಿ ) ಮಕ್ಕಳಿಗೆ ಸರಕಾರದಿಂದ ದೊರೆತ ಪಠ್ಯ ಪುಸ್ತಕಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಆಟದ ಜೊತೆಗೆ ಪಾಠವನ್ನು ಕಲಿಸುವುದರ ಜೊತೆಗೆ ಮಕ್ಕಳಿಗೆ ಪಠ್ಯಪುಸ್ತಕಗಳ ಮಹತ್ವವನ್ನು ತಿಳಿಸಿ ಅವುಗಳನ್ನು ಸ್ವಚ್ಛವಾಗಿ ಹಾಗೂ ಸುರಕ್ಷಿತವಾಗಿ ಬಳಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ, ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ ಜಿ, ಶಿಕ್ಷಕ ಅಹ್ಮದ್ ತೌಸೀಫ್, ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕಿಯರಾದ ಪಲ್ಲವಿ, ಸುಷ್ಮ, ಆಯಾ ಮೀನಾಕ್ಷಿ ಉಪಸ್ಥಿತರಿದ್ದರು.











