ನವಿಲು ಗರಿ ಬಳಸಿ ರೀಲ್ಸ್ ಮಾಡಿದ್ದ ಬಿಗ್ಬಾಸ್ ಮಾಜಿ ಸ್ಪರ್ಧಿ ಕಿಶನ್ ಹಾಗೂ ನಟಿ ನಿವೇದಿತಾ ಗೌಡ ವಿರುದ್ಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ರೀಲ್ಸ್ನಲ್ಲಿ ಸದಾ ಮಿಂಚುವ ನಿವೇದಿತಾ ಗೌಡ ಡ್ಯಾನ್ಸರ್ ಕಿಶನ್ ಜೊತೆ ಹೇ ನವಿಲೇ ಹಾಡಿಗೆ ಮಾದಕ ಹೆಜ್ಜೆ ಹಾಕಿದ್ದರು. ಇದೀಗ ಈ ಸಂಬAಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ, ರೀಲ್ಸ್ ಮಾಡುವಾಗ ಯಥೇಚ್ಛವಾಗಿ ನವಿಲುಗರಿ ಬಳಸಿದ್ದಾರೆ. ಹೀಗಾಗಿ ಇದನ್ನು ತನಿಖೆ ಮಾಡುವಂತೆ ಉಲ್ಲೇಖಿಸಿದ್ದಾರೆ.
ರೀಲ್ಸ್ನಲ್ಲಿ ಇಬ್ಬರು ನವಿಲು ಗರಿ ಬಳಸಿ ಮಾಡಲಾದ ಉಡುಗೆಯನ್ನು ಧರಿಸಿ ಸಖತ್ತಾಗಿ ಮಿಂಚಿದ್ದರು. ಸರಳ, ಆಕರ್ಷಕ ಹೆಜ್ಜೆಯೊಂದಿಗೆ ರೀಲ್ಸ್ಗೆ ಹೆಜ್ಜೆ ಹಾಕಿದ್ದರು. ರೀಲ್ಸ್ ಅಪ್ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟ್ಟೆ ವೀವ್ಸ್ ಕೂಡ ಪಡೆದುಕೊಂಡಿತ್ತು. ಸದ್ಯ ಇಬ್ಬರು ತಮ್ಮ ಅಕೌಂಟ್ನಿAದ ಈ ರೀಲ್ನ್ನು ಡಿಲೀಟ್ ಮಾಡಿದ್ದಾರೆ.
You Might Also Like
ಉಡುಪಿ: ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ : ಸದಸ್ಯತ್ವದ ಕಾರ್ಡ್ ವಿತರಣೆ -ಕಹಳೆ ನ್ಯೂಸ್
ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ...
ಮಂಜನಾಡಿ ಭೀಕರ ಗುಡ್ಡ ಕುಸಿತ: ನೊಂದ ಅಶ್ವಿನಿ ಮನೆಗೆ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ ಭೇಟಿ ; ನ್ಯಾಯದ ಹೋರಾಟದಲ್ಲಿ ಸದಾ ಜೊತೆಗಿರುವ ಅಭಯ – ಕಹಳೆ ನ್ಯೂಸ್
ಮಂಗಳೂರು: ಕಳೆದ ವರ್ಷ ಮಂಗಳೂರು ಸಮೀಪದ ಮಂಜನಾಡಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ತನ್ನ ಇಡೀ ಪ್ರಪಂಚವನ್ನೇ ಕಳೆದುಕೊಂಡು, ಅತೀವ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ನೊಂದ ಮಹಿಳೆ...
ಕೆಆರ್ ಪುರಂ ತ್ರಿವಳಿ ಹತ್ಯೆ ಕೇಸ್ : ಪುದುಚೇರಿಯಲ್ಲಿ ಹಂತಕಿ ಶ್ವೇತಾ ಬಂಧನ -ಕಹಳೆ ನ್ಯೂಸ್
ಬೆಂಗಳೂರು: ಕೆಆರ್ ಪುರಂ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಶ್ವೇತಾಳನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತಂದೆ, ತಾಯಿ, ತಂಗಿಯನ್ನ ಕೊಲೆ ಮಾಡಿ ಆರೋಪಿ ಶ್ವೇತಾ...
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ ಹೊಸದಾಗಿ ಸೇರ್ಪಡೆಗೊಂಡಂತಹ ವಿದ್ಯಾರ್ಥಿಗಳಿಗೆ ನಡೆದ ಆಗತ ಸ್ವಾಗತ ಕಾರ್ಯಕ್ರಮ-ಕಹಳೆ ನ್ಯೂಸ್
ಕಲ್ಲಡ್ಕ: ಜೂನ್ 23 ರಂದು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ 2026-27ನೇ ಸಾಲಿನ ಹೊಸದಾಗಿ ಸೇರ್ಪಡೆಗೊಂಡಂತಹ ವಿದ್ಯಾರ್ಥಿಗಳಿಗೆ ಆಗತ ಸ್ವಾಗತ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಹೊಸದಾಗಿ...











