ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಎಸ್. ಸಿ ಮೋರ್ಚಾದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಬಂಟ್ವಾಳ ಮಂಡಲ ಎಸ್.ಸಿ ಮೋರ್ಚಾದ ವತಿಯಿಂದ ಮಾಣಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಅನಂತಾಡಿ ಶಕ್ತಿ ಕೇಂದ್ರದ ಶ್ರೀ ದೇವಿ ಮಂದಿರ ದೇವಿ ನಗರ ಈ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಬಂಟ್ವಾಳ ಮಂಡಲ ಎಸ್.ಸಿ ಮೋರ್ಚಾದ ವತಿಯಿಂದ “ಸೇವಾ ಈ ಪಾಕ್ಷಿಕ” ಎಂಬ ಪಕ್ಷದ ಕಾರ್ಯಕ್ರಮದ ಅಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದೆ.
ಈ ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು. ಶಾಸಕ ಶ್ರೀ ರಾಜೇಶ್ ನಾಯ್ಕ್ ಮಾತನಾಡಿ ಎಸ್. ಸಿ ಮೋರ್ಚಾದ ಈ ಕಾರ್ಯ ಶ್ಲಾಘನೀಯವಾದದ್ದು ಎಂದರು
ಮಂಡಲ ಬಿಜೆಪಿ ಎಸ್. ಸಿ ಮೋರ್ಚಾದ ಅಧ್ಯಕ್ಷರಾದ ರಮೇಶ್ ಕುದ್ರೆಬೆಟ್ಟು , ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಮಾಣಿ ಮಹಾಶಕ್ತಿ ಕೇಂದ್ರದ ಎಲ್ಲಾ ಪ್ರಮುಖರಿಗೆ ಹಾಗೂ ಕಾರ್ಯಕರ್ತರಿಗೆ ಎಸ್. ಸಿ ಮೋರ್ಚಾದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಲ ಮಂಡಳದ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ವಹಿಸಿದ್ದರು.
ವೇದಿಕೆಯಲ್ಲಿ ಬಂಟ್ವಾಳ ಮಂಡಳ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಮಂಡಲ ಕಾರ್ಯದರ್ಶಿ ಸನತ್ ಕುಮಾರ್ ರೈ, ಮಾಣಿ ಮಹಾಶಕ್ತಿ ಕೇಂದ್ರ ಪ್ರದಾನ ಕಾರ್ಯದರ್ಶಿ ನಾಗೇಶ್ ಭಂಡಾರಿ, ಎಸ್.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗೋಪಾಲ ಕಾರಗುಡ್ಡೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದಿನೇಶ್ ಅಮ್ಟೂರು, ಅನಂತಾಡಿ ಶಕ್ತಿ ಕೇಂದ್ರದ ಪ್ರಮುಖ್ ಶ್ರೀ ಮಹಾಬಲ ಪೂಜಾರಿ, ಪ್ರದಾನ ಕಾರ್ಯದರ್ಶಿ ಶ್ರೀ ಅಶೋಕ್ ಗೋಳಿ ಕೊಟ್ಟೆ, ಮಂಡಲ ಸಹಕಾರ ಸಂಘಪ್ರಕೋಷ್ಟ ಸಂಚಾಲಕ ಶ್ರೀ ಜಯರಾಮ್ ರೈ, ನೆಟ್ಲಮುಡ್ಣೋರು ಶಕ್ತಿ ಕೇಂದ್ರ ಪ್ರಮುಖ್ ಧನಂಜಯ ಗೌಡ, ನೇರಳಕಟ್ಟೆ ಸಹಕಾರಿ ಸಂಘದ ಉಪಾಧ್ಯಕ್ಷ ತನಿಯಪ್ಪ ಗೌಡ, ನಿರ್ದೇಶಕರಾದ ವೆಂಕಟೇಶ್ ಕೋಟ್ಯಾನ್, ಅಶೋಕ್ ರೈ, ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶ್ರೀಮತಿ ಗೀತಾ, ಮಹಿಳಾ ಪ್ರಮುಖ್ ಶ್ರೀಮತಿ ಸುಶೀಲಾ ಆನಂದ್, ಬೂತ್ ಅಧ್ಯಕ್ಷ ನವೀನ್ ಆಚಾರ್, ಪ್ರಮುಖರಾದ ಪ್ರವೀಣ್ ಅಮ್ಟೂರು, ಕೃಷ್ಣಪ್ಪ ಗೌಡ, ಸುರ್ಬಹ್ಮಣ್ಯ ಭಟ್, ದಿನೇಶ್ ಪಿಳಿಚಂಡಿಗುಡ್ಡೆ, ಮಹಾಬಲ ಆಳ್ವ, ಕಿರಣ್ ಗೋಳಿ ಕೊಟ್ಟೆ, ಶಿವರಾಮ್ ಶೆಟ್ಟಿ, ಮೋನಪ್ಪ ಕೂಡು ರಸ್ತೆ ಅನಂತಾಡಿ, ಶ್ರೀ ದೇವಿ ಟ್ರಸ್ಪ್ ಸದಸ್ಯರಾದ ಸಂಜೀವ್ ದೇವಿ ನಗರ, ಗಂಗಾಧರ್, ಶಿವಪ್ರಸಾದ್ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ನಾಗೇಶ್ ಭಂಡಾರಿ ಸ್ವಾಗತಿಸಿ, ಗೋಪಾಲ ಕಾರಗುಡ್ಡೆ ವಂದಿಸಿದರು.











