Monday, June 22, 2026
ಜಿಲ್ಲೆಸುದ್ದಿ

ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚುತ್ತಿದ್ದಂತೆ ಭೀಕರ ಸ್ಫೋಟ – ಸಾಕುನಾಯಿ ದಾರುಣ ಸಾವು -ಕಹಳೆ ನ್ಯೂಸ್

ದಾವಣಗೆರೆ:ಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚುತ್ತಿದ್ದಂತೆ ಭೀಕರ ಸ್ಫೋಟಗೊಂದು ಸಾಕುನಾಯಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ  ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು

ಗ್ರಾಮದ ಅರೆಕೇರೆ ರುದ್ರೇಶ್ ಎನ್ನುವವರಿಗೆ ಸೇರಿದ ನಾಯಿ ಇದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ನಡೆದ ದಿನ ರುದ್ರೇಶ್‌ ಅವರು ಜಮೀನಿನಲ್ಲಿ ದನ ಮೇಯಿಸಲು ಹೋಗುತ್ತಿದ್ದಾಗ ನಾಯಿ ಸಹ ಅವರ ಜೊತೆಗೆ ಹೋಗುತ್ತಿತ್ತು. ಈ ವೇಳೆ ರಸ್ತೆ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಂಡ ನಾಯಿ ಅದರಲ್ಲಿ ಯಾವುದೋ ಆಹಾರ ಇರಬಹುದೆಂದು ಭಾವಿಸಿ, ಬಾಯಿಯಿಂದ ಕಚ್ಚಿದೆ. ಕೂಡಲೇ ಸ್ಫೋಟಗೊಂಡಿದ್ದು, ಪರಿಣಾಮ ನಾಯಿಯ ಮುಖ ಛಿದ್ರವಾಗಿ ಸಾವನ್ನಪ್ಪಿದೆ.