ನಾಳೆ 21ರಂದು ದ್ವಾರಕಾ ಕಾರ್ಪ್ ಪ್ರೈ. ಲಿ. ನ ಉಜ್ಜೀವನ ಲೋಕಾರ್ಪಣ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ದ್ವಾರಕಾ ಕಾರ್ಪ್ ಪ್ರೈ. ಲಿ. ನ ನೂತನ ಉಜ್ಜೀವನ ಬಡಾವಣೆ, ದ್ವಾರಕಾ ನೆಸ್ಟ್, ದ್ವಾರಕಾ ರಿಫೆಪ್ಟೆಂಟ್, ದ್ವಾರಕಾ ಮಾರ್ಟ್ ಇದರ ಲೋಕಾರ್ಪಣ ಕಾರ್ಯಕ್ರಮವು ಜೂ.21 (ನಾಳೆ) ಉಪ್ಪಿನಂಗಡಿಯ ಕೆಮ್ಮಾರ ಉಜ್ಜೀವನ ಬಡಾವಣೆಯಲ್ಲಿ ನಡೆಯಲಿದೆ.
ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ಟ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ನಡೆಯಲಿದ್ದು, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉಜ್ಜೀವನ ಬಡಾವಣೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಪುತ್ತೂರು ವಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ದ್ವಾರಕಾ ನೆಸ್ಟ್ ಇದರ ಲೋಕಾರ್ಪಣೆ ನೇರವೇರಿಸಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರು ದ್ವಾರಕಾ ರಿಫ್ರೆಶ್ಮೆಂಟ್ ಇದರ ಲೋಕಾರ್ಪಣೆ ನಡೆಸಲಿದ್ದಾರೆ. ದ್ವಾರಕಾ ಮಾರ್ಟ್ ಅನ್ನು ಕರ್ನಾಟಕ ವಿಧಾನ ಪರಿಷತ್ ನ ಶಾಸಕರಾದ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಉದ್ಘಾಟಿಸಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಪುತ್ತೂರಿನ ಮಾಸ್ಟರ್ ಪ್ಲಾನರಿ ಇದರ ಎಸ್.ಕೆ. ಆನಂದ ಕುಮಾರ್, ಬೆಂಗಳೂರಿನ ಭಟ್ ಬಯೋಟೆಕ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ಯಾಮ ಭಟ್ , ಖ್ಯಾತ ಸಂಗೀತ ವಿದ್ವಾಂಸರಾದ ಶ್ರೀಮತಿ ಕಾಂಚನ ರೋಹಿಣಿ ಸುಬ್ಬುರತ್ನಮ್, ಉಪ್ಪಿನಂಗಡಿಯ ಖ್ಯಾತ ಮಕ್ಕಳ ತಜ್ಞರಾದ ಡಾ. ಎಂ. ಎನ್. ಭಟ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ ಉಪ್ಪಂಗಳ, ಬೆಂಗಳೂರಿನ ಉದ್ಯಮಿಗಳಾದ ಡಾ. ಹೇಮಂತ ರೈ ಮನವಳಿಕೆ, ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಇದರ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ. ಎಸ್., ಪುತ್ತೂರು ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ನವೀನ ಭಂಡಾರಿ, ನಗರ ಯೋಜನಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಯಾದ ಗುರುಪ್ರಸಾದ್ ಎ. ಬಿ., ಮಂಗಳೂರು ಗ್ರಾಮಾಂತರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕರಾದ ಶ್ರೀಮತಿ ಸ್ವಾತಿ ಎನ್. ಸ್ವಾಮಿ, ಹಿರೇಬಂಡಾಡಿ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷ ಸದಾನಂದ ಶೆಟ್ಟಿ, ಹಿರೇಬಂಡಾಡಿ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ಹಾಗೂ ಮತ್ತಿತ್ತರ ಗಣ್ಯರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ರಾಹುಲ್ ವೆಲ್ಲಾಲ್, ಬೆಂಗಳೂರು ಮತ್ತು ಬಳಗದವರಿಂದ ಭಕ್ತಿ ಸಂಗೀತ ಸುಧಾ ನಡೆಯಲಿದೆ.










