
ಬೆಂಗಳೂರು: ಬಿಎಂಟಿಸಿಯ ಇಟಿಎಂ ಮಷೀನ್‌ನಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡಿದೆ. ಕಳೆದ 4-5 ದಿನಗಳಿಂದ ನಿಗಮಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಆಗ್ತಿದೆ. ಇದನ್ನ ತಡೆಗಟ್ಟಬೇಕಾದ ಡಿಪೋ ಮ್ಯಾನೆಜರ್, ಇತರೆ ಅಧಿಕಾರಿಗಳು ಗೊತ್ತಿದ್ರೂ ಸೈಲೆಂಟ್ ಆಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಬಿಎಂಟಿಸಿಯ ಇಟಿಎಂ ಮಷೀನ್‌ನಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಇದರಿಂದ ನಿತ್ಯ ಸಾವಿರಾರು ರೂಪಾಯಿ ನಿಗಮಕ್ಕೆ ನಷ್ಟ ಉಂಟಾಗ್ತಿದೆ. ಬೊಮ್ಮಸಂಧ್ರ – ಜಿಗಣಿ ಮಾರ್ಗದ ಬಸ್‌ನಲ್ಲಿ ನಿಗದಿತ ಸ್ಟೇಜ್ ಗಳಿಗಿಂತ ಒಂದು ಸ್ಟೇಜ್ ಕಡಿಮೆ ಬರ್ತಿದ್ದು, ಒಬ್ಬ ಪ್ರಯಾಣಿಕನಿಂದ ನಿಗಮಕ್ಕೆ 5 ರೂಪಾಯಿ ನಷ್ಟ ಉಂಟಾಗ್ತಿದೆ.












