ಸಜಿಪ ಸಮೀಪದ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದ ಯುವತಿ ಚೆನೈನಲ್ಲಿ ಕ್ರಿಶ್ಚಿಯನ್ ಯುವಕನೊಂದಿಗೆ ಲಿವಿಂಗ್ ಇನ್..! – ಕಹಳೆ ನ್ಯೂಸ್

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದೇನೆ ಎಂದು ಹೇಳಿ ಪಬ್ ನಲ್ಲಿ ಪರಿಚಯವಾದ ಯುವಕನೊಂದಿಗೆ ಚೆನೈನಲ್ಲಿ ಡಿಂಗ್ ಡಾಂಗ್ ; ವಿಷಯ ತಿಳಿದ ತಂದೆ – ತಾಯಿ ಸಹಿತ ಕುಟುಂಬಸ್ಥರಿಗೆ ಶಾಕ್..!!!
ದಕ್ಷಿಣ ಕನ್ನಡ : ಕರಾವಳಿಯಲ್ಲಿ ಬ್ರಾಹ್ಮಣ ಸಮುದಾಯದ ಕೃಷಿಯನ್ನು ಅವಲಂಬಿತವಾಗಿದೆ ತಲೆಮಾರುಗಳಿಂದ ಬದುಕು ಕಟ್ಟಿಕೊಂಡು ಬಂದಿದೆ. ಆದರೆ, ಇಂದು ಸಮುದಾಯದ ಬಹುತೇಕ ಯುವಕ – ಯುವತಿಯರು ಕೃಷಿಗೆ ಗುಡ್ ಬಾಯ್ ಹೇಳಿ ಸಾಫ್ಟ್‌ವೇರ್ ಉದ್ಯೋಗ, ಹೆಚ್ಚು ಹೆಚ್ಚು ಹಣಗಳಿಸುವ ಉದ್ಯೋಗಗಳತ್ತ ಮುಖಮಾಡಿದ್ದಾರೆ. ತಂದೆ – ತಾಯಿಗೂ ತಮ್ಮ ಮಕ್ಕಳು ಬೆಂಗಳೂರು, ಹೊರದೇಶದಲ್ಲಿ ಇದ್ದಾರೆ ಎಂದರೆ ಅದು ಒಂದು ಪ್ರತಿಷ್ಠಿಯ ಸಂಕೇತವಾಗಿ ಮಾರ್ಪಾಡಾಗಿರುವುದು ದುರದೃಷ್ಟಕರ. ಇಂತಹದ್ದೇ ಒಂದು ಹವ್ಯಕ ಬ್ರಾಹ್ಮಣ ಕೃಷಿ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು ದಾರಿತಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನಲೆ :
ಸಜಿಪ ಸಮೀಪದಲ್ಲಿ ವಾಸವಾಗಿರುವ ಈ ಕುಟುಂಬದ ಯುವತಿ ಬಾಲ್ಯದಲ್ಲಿ ಕಲಿಯುವಿಕೆಯಲ್ಲಿ ಉತ್ತಮ ಗುಣಮಟ್ಟದ ಅಂಕಗಳನ್ನು ಪಡೆಯುತ್ತಿದ್ದಳು ಹಾಗೂ ಕೃಷಿ ಚಟುವಟಿಕೆಯಲ್ಲೂ ಆಸಕ್ತಿ ಹೊಂದಿದ್ದಳು. ನಂತರ ಉದ್ಯೋಗ ನಿಮಿತ್ತ ಬೆಂಗಳೂರಿನ ಕಡೆ ಮುಖ ಮಾಡಿದ ಯುವತಿಗೆ ಊರಿನಲ್ಲಿ ತಂದೆ – ತಾಯಿ ಮದುವೆ ಮಾಡುವ ಸಲುವಾಗಿ ಅನೇಕ ಕಡೆ ಸಂಬಂಧಗಳನ್ನು ಹೊಂದಿಕೆ ಮಾಡುತ್ತಿದ್ದರು. ಆದರೆ ಅವೆಲ್ಲವನ್ನೂ ಆಕೆ ನಿರಾಕರಿಸುತ್ತಾ ಬಂದಳು. ಯಾಕೋ ಮಗಳ ನಡವಳಿಕೆಯಿಂದ ಅನುಮಾನಗೊಂಡ ತಂದೆ ಹಾಗೂ ತಮ್ಮ ಬೆಂಗಳೂರಿಗೆ ತೆರಳಿ ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಮಂಗಳೂರಿನ ಮುಡಿಪುವಿನಲ್ಲಿರುವ ಪ್ರತಿಷ್ಠಿತ ಸ್ವಾಪ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಬಳಿಕ ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಇರುವುದಾಗಿ ತಂದೆ – ತಾಯಿಗೆ ಆಕೆ ತಿಳಿಸಿದ್ದಳು ಎನ್ನಲಾಗಿದೆ. ಹೀಗೆ ತಂದೆ ಬೆಂಗಳೂರಿಗೆ ಬಂದು ವಿಚಾರಿಸಿದಾಗ ಈಕೆ ಚೆನ್ನೈ ನಲ್ಲಿ ಫ್ಲಾಟ್ ಒಂದರಲ್ಲಿ ಕ್ರಿಶ್ಚಿಯನ್ ಯುವಕನೊಬ್ಬನೊಂದಿಗೆ ಇರುವುದು ಬೆಳಕಿಗೆ ಬಂದಿದೆ. ಬಳಿಕ ಅಲ್ಲಿಗೆ ತಂದೆ ಹಾಗೂ ತಮ್ಮ ತೆರಳಿ ಪರಿ ಪರಿಯಾಗಿ ವಿನಂತಿಸಿದರು, ಕೊನೆಗೆ ಸ್ವತಃ ಹೆತ್ತತಾಯೇ ಕಣ್ಣೀರು ಹಾಕಿ ಬೇಡಿಕೊಂಡರು ಆತನನ್ನು ಬಿಟ್ಟು ಬರಲು ಈಗೆ ನಿರಾಕರಿಸಿದ್ದಾಳೆ ಎನ್ನಲಾಗಿದೆ.
30 ಲಕ್ಷಕ್ಕೂ ಅಧಿಕ ಸಾಲ ಮಾಡಿದ ಯುವತಿ :
ಹೌದು, ಯುವತಿಯೂ ವಿವಿಧ ಬ್ಯಾಂಕ್ ನಲ್ಲಿ 30 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದು, ತನ್ನ ಪ್ರೀತಿಯ ಯುವಕನ ಬೆಟ್ಟಿಂಗ್ ಚಟಕ್ಕೆ ನೀಡಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಇತ್ತೀಚೆಗಷ್ಟೆ ಯುವಕನ ಜನ್ಮದಿನಕ್ಕೆ ಕಾರ್ ಒಂದನ್ನು ಉಡುಗೊರೆಯಾಗಿ ನೀಡದ್ದಾಳೆ ಎಂದು ಹೇಳಲಾಗುತ್ತಿದೆ.
ಯುವಕನ ಹಿನ್ನಲೆ ಬಗ್ಗೆಯೂ ಭಾರೀ ಆತಂಕ :
ಯುವಕ ಈ ಹಿಂದೆಯೇ ಒಬ್ಬಳು ಯುವತಿಯ ಜೊತೆ ಇದೇ ರೀತಿ ಮಾಡಿದ್ದಾನೆ ಎಂಬ ಆರೋಪವೂ ಇದೆ. ಹಾಗೂ ಯುವಕ ಯುವತಿಗಿಂತ 2 ವರ್ಷ ಚಿಕ್ಕವನೂ ಆಗಿದ್ದು, ಮದ್ಯಪಾನ ಸೇರಿದಂತೆ ಎಲ್ಲಾ ವ್ಯಸನಗಳು ಇದ್ದು, ಡ್ರಗ್ಸ್ , ಈ – ಸಿಗರೇಟ್ ನಂತಹ ಅಪಾಯಕಾರಿ ಮತ್ತು ಕಾನೂನು ಬಾಹಿರ ವಸ್ತುಗಳ ಸೇವನೆ ಮಾಡುತ್ತಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಹಾಗೂ ಯುವಕ ಬೆಟ್ಟಿಂಟ್ ಆಪ್ ಗಳನ್ನು ಲಕ್ಷಕ್ಕೂ ಅಧಿಕ ಹಣ ಹೂಡಿಕೆ ಮಾಡಿರುವ ಬಗ್ಗೆ ಹಾಗೂ ವಿವಿಧ ಜೂಜು ಆಟಗಳನ್ನು ಆಡುವ ಬಗ್ಗೆಯೂ ನಂಬಲರ್ಹ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ಅಪ್ಪಟ್ಟ ಸಂಪ್ರದಾಯಸ್ಥ ಮನೆಯ ಯುವತಿಯೊಬ್ಬಳು ಇಂತಹ ತಪ್ಪು ನಿರ್ಧಾರ ತೆಗೆದುಕೊಂಡ ಬಗ್ಗೆ ಕರಾವಳಿಯಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಹಣ ಮಾಡುವ ಹಾಗೂ ಜಾಸ್ತಿ ಜಾಸ್ತಿ ಅಂಕಗಳಿವ ಬಯಕೆಯಲ್ಲಿ ಮಕ್ಕಳನ್ನು ಬೆಂಗಳೂರು, ವಿದೇಶಕ್ಕೆ ಕಳುಹಿಸುವ ಪೋಷಕರು ಎಚ್ಚರಿಕೆಯಿಂದ ಇಲ್ಲದ್ದಿರುವುದೇ ಇದಕ್ಕೆ ಕಾರಣ ಎಂದು ಒಂದಷ್ಟು ಹಿತಚಿಂತಕರು ಹಿಡಿಶಾಪ ಹಾಕುತ್ತಿದ್ದಾರೆ.
Note : ಈ ವರದಿಯನ್ನು ಸಾರ್ವಜನಿಕ ವಲಯದಲ್ಲಿ ಹರಿದಾಡುವ ಮಾಹಿತಗಳ ಪ್ರಕಾರ ಪ್ರಕಟಿಸಲಾಗಿದೆ. ಇದರ ಸತ್ಯಾಸತ್ಯತೆ ಬಗ್ಗೆ ನಿಖರವಾದ ಮಾಹಿತಿ ಲಭ್ಯ ಇಲ್ಲ. ಹಾಗೂ ಯಾರನ್ನೂ ನೋಯಿಸುವ ಹಾಗೂ ಕೆಟ್ಟರೀತಿಯಲ್ಲಿ ಬಿಂಬಿಸುವ ಉದ್ದೇಶ ನಮಗಿಲ್ಲ ಮತ್ತು ಸಾಂದರ್ಭಿಕವಾಗಿ ಬಳಸಿದ ಫೋಟೋ AI ಆಗಿರುತ್ತಿದೆ.











