Recent Posts

Sunday, June 7, 2026
ಸುದ್ದಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಕಟಪಾಡಿ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘ ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ – ಕಹಳೆ ನ್ಯೂಸ್

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಕಟಪಾಡಿ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘ ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಸ್.ವಿ.ಎಸ್‌. ವಿದ್ಯಾಸಂಸ್ಥೆಯ ಆವರಣದಲ್ಲಿ ಅರಣ್ಯ ಇಲಾಖೆ ಯಿಂದ ರ್ ಫ್ ಓ ಅನುಷಾ ಭಟ್ ವದ ಗಿಸಿರುವ 200 ಗಿಡಗಳನ್ನು ಶುಕ್ರವಾರ ನಾಟಿ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ. ಸತ್ಯೇಂದ್ರ ಪೈ, ಕಾಡು ನಾಶವಾಗಿ ನಾಡಾಗಿ ಪರಿವರ್ತನೆಗೊಂಡ ಕಾರಣ ಪರಿಸರದಲ್ಲಿ ಪ್ರತಿಕೂಲ ವಾತಾವರಣ ನಿರ್ಮಾಣವಾಗಿದೆ. ಮರಗಳನ್ನು ನಾಶ ಮಾಡಿದ ಪರಿಣಾಮ ಈ ಬಾರಿ ಅತಿ ಹೆಚ್ಚು ತಾಪಮಾನ ಉಡುಪಿ ಜಿಲ್ಲೆಯಲ್ಲಿ ಕಂಡು ಬಂದಿದೆ. ಮಳೆ ಕೂಡಾ ಕಾಲಕ್ಕೆ ಸರಿಯಾಗಿ ಬರುತ್ತಿಲ್ಲ
​ಪ್ರಪಂಚದ ಸರ್ವ ಜೀವಸಂಕುಲವು ಬದುಕಲು ಬೇಕಾದ ಉಸಿರು, ಉಣ್ಣಲು ಬೇಕಾದ ಆಹಾರ ಮತ್ತು ಉತ್ತಮ ಆರೋಗ್ಯಕ್ಕೆ ಸಂಪೂರ್ಣವಾಗಿ ಅವಲಂಬಿತವಾಗಿರುವುದು ಈ ಸುಂದರ ಪರಿಸರ ಮಾತ್ರ. ಇಂತಹ ಅಮೂಲ್ಯವಾದ ಪರಿಸರವನ್ನು ಉಳಿಸುವ, ಬೆಳೆಸುವ ಮತ್ತು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

​ಇಂದು ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಒಂದು ದಿನದ ಆಚರಣೆಯಲ್ಲ, ಅದು ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು.
​ಆದರೆ ಇವತ್ತು ಸ್ವಾರ್ಥಕ್ಕಾಗಿ ನಾವು ಪ್ರಕೃತಿಯನ್ನು ನಾಶ ಮಾಡುತ್ತಿದ್ದೇವೆ. ಇದನ್ನು ತಡೆಯುವ, ಗಿಡಮರಗಳನ್ನು ಬೆಳೆಸುವ ಅತಿ ದೊಡ್ಡ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಕೇವಲ ಮಾತುಗಳಿಂದ ಪರಿಸರ ಉಳಿಯುವುದಿಲ್ಲ, ಕೃತಿಯಿಂದ ಮಾತ್ರ ಸಾಧ್ಯ.
​ಈ ನಿಟ್ಟಿನಲ್ಲಿ, ನಮ್ಮ ಎಸ್. ವಿ. ಎಸ್. ವಿದ್ಯಾ ಸಂಸ್ಥೆಯು ಕೇವಲ ಅಂಕಗಳನ್ನು ಕೊಡುವ ಶಿಕ್ಷಣ ಸಂಸ್ಥೆಯಾಗಿ ಉಳಿದಿಲ್ಲ. ಪರಿಸರವನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತದೆ ಮತ್ತು ಮುಂದೆಯೂ ಮಾಡಲಿದೆ ಎಂದು ನಾನು ಈ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳಲು ಬಯಸುತ್ತೇನೆ. ನಮ್ಮ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವುದೇ ನಮ್ಮ ಮುಖ್ಯ ಗುರಿ. ಕಟಪಾಡಿ ಎಸ್‌.ವಿ.ಎಸ್‌. ಕ್ರೀಡಾಂಗಣದ ಸುತ್ತ ಗಿಡಗಳನ್ನು ನೆಡುವ ಉದ್ದೇಶ ಸಾರ್ವಜನಿಕರಿಗೆ, ಕ್ರೀಡಾಳುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸ-ಲಾಗುವುದು ಎಂದರು.

ಜಾಹೀರಾತು

ಅರಣ್ಯ ಇಲಾಖೆ ಉಪ ಅರಣ್ಯಧಿಕಾರಿರವೀಂದ್ರ ಕುಮಾ‌ರ್ ಮಾತನಾಡಿ, ವಿದ್ಯಾರ್ಥಿಗಳು, ಸಾರ್ವಜನಿಕಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಅರಣ್ಯ ಇಲಾಖೆ ಮೂಲಕ ಸಾವಿರಾರು ಗಿಡಗಳನ್ನು ನೆಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿನೆಟ್ಟ ಗಿಡಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ವರ ಸಹಕಾರ ಅಗತ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ನಾಗರಾಜ್‌ ಶೆಟ್ಟಿ ಮಾತನಾಡಿ, ಗಿಡ ನಾಟಿ ಮಾಡುವ ಜೊತೆಗೆ ನಿರಂತರ ಅವುಗಳ ಪೋಷಣೆ ಮಾಡುವುದೂ ಅಗತ್ಯ ಎಂದರು.

ಸಾಮಾಜಿಕ ಅರಣ್ಯ ವಿಭಾಗದ ಕೃಷ್ಣಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಮತಾ ಶೆಟ್ಟಿ, ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಎಸ್‌.ವಿ.ಎಸ್ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರಾದ ಶ್ರೀನಿವಾಸ್ ಕಿಣಿ, ವೆಂಕಟರಮಣ ಭಟ್, ಬಿ.ಸಿ.ಪೈ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ದಯಾನಂದ ಪೈ, ಆಡಳಿತಾಧಿಕಾರಿ ಸುಧಾಕ‌ರ್ ಬ್ರಹ್ಮಾವರ, ವಿವೇಕಾನಂದ, ದೇವೇಂದ್ರ ಸರ್ , ಆಶಾಲತಾ, ಹಸಿರೇ ಉಸಿರು ಸಂಸ್ಥೆಯ ಸಂತೋಷ್ ಶೆಟ್ಟಿಗಾರ್, ನಾಗೇಶ್ ಕಾಮತ್ ಕಟಪಾಡಿ ಭಾಗವಹಿಸಿದ್ದರು. ಸುಜಾ ಡಿಸೋಜ ಸ್ವಾಗತ ನಿರ್ವಹಣೆ, ಶಿಲ್ಪ ಉದಯ್ ನಿರೂಪಣೆ, ಪಿಯಾನೋ ಪುಟಡೋ ಧನ್ಯವಾದ ಮುಗಿಸಿ ದರು