ಬಿಸಿಲ ನಡುವೆ ದೆಹಲಿಯಲ್ಲಿ ತಂಪೆರೆದ ಮಳೆರಾಯ : ಇತ್ತ ತಾಪಮಾನ ಹೆಚ್ಚಳದಿಂದ ಆಂಧ್ರ, ಯುಪಿಯಲ್ಲಿ ರೆಡ್ ಅಲರ್ಟ್-ಕಹಳೆ ನ್ಯೂಸ್

ನವದೆಹಲಿ: ಬಿಸಿಲ ಬೇಗೆಯಿಂದ ಬೇಸತ್ತಿದ್ದ ದೆಹಲಿ ಜನರಿಗೆ ಮಳೆರಾಯ ತಂಪೆದರೆ, ಇತ್ತ ಆಂಧ್ರಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ತಾಪಮಾನ ಹೆಚ್ಚಳದಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಇಂದು (ಮೇ 23) ಮುಂಜಾನೆ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ದಿಢೀರ್ ಮಳೆಯಾಗಿ, ತಂಪು ವಾತಾವರಣ ಸೃಷ್ಟಿಯಾಗಿದೆ. ಆದರೆ ಇದರ ನಡುವೆಯೂ ಹವಾಮಾನ ಇಲಾಖೆ ನಗರದಲ್ಲಿ ಮೇ 28ರವರೆಗೆ ಹೀಟ್‌ವೇವ್ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದೆ.
ಈಗಾಗಲೇ ಉತ್ತರ ಪ್ರದೇಶದ ಕೆಲವು ಭಾಗಗಳು ಮತ್ತು ವಿದರ್ಭದಲ್ಲಿ ದಾಖಲೆಯ ಶಾಖದ ಅಲೆ ವರದಿಯಾಗಿದೆ. ಅಲ್ಲದೇ ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶದ ಪೂರ್ವ ಭಾಗ, ಉತ್ತರಾಖಂಡ, ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿಯೂ ತೀವ್ರ ತಾಪಮಾನ ದಾಖಲಾಗುತ್ತಿದೆ.










