
ಬೆಂಗಳೂರು: ಸಾರಿಗೆ ನೌಕರರು ಕರೆ ಕೊಟ್ಟ ಮುಷ್ಕರದ ಡೆಡ್‌ಲೈನ್ ಇಂದಿಗೆ ಅಂತ್ಯವಾಗುತ್ತಿದೆ. ವಿವಿಧ ಬೇಡಿಕರಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಮೇ 20 ರಿಂದ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಸರ್ಕಾರಕ್ಕೆ ಸಂಜೆಯೊಳಗೆ ಡೆಡ್‌ಲೈನ್ ನೀಡಲಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಅಂದುಕೊಂಡಿರುವಾಗಲೇ ಮುಷ್ಕರಕ್ಕೆ ಕರೆಕೊಟ್ಟ ಜಂಟಿ ಕ್ರಿಯಾ ಸಮಿತಿಗೆ ಶಾಕ್ ಎದುರಾಗಿದೆ.
ಹೌದು. ಮುಷ್ಕರದಿಂದ ಹಿಂದೆ ಸರಿಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ನಿರ್ಧರಿಸಿದೆ. ಈ ಬಗ್ಗೆ ಅಧ್ಯಕ್ಷ ಕೆ.ಆರ್ ಜಗದೀಶ್ ಅಧಿಕೃತ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.

ನಿನ್ನೆ ಸಂಧಾನ ಸಭೆಯಲ್ಲೂ ಭಾಗಿಯಾಗಿದ್ದ ಕೆಎಸ್‌ಆರ್‌ಟಿಸಿ ನೌಕರರ ಸಂಘ ಇಂದು ಏಕಾಏಕಿ ಮುಷ್ಕರದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ. ಅಲ್ಲದೇ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನ ಭೇಟಿಯಾಗಿ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದೆ. ಜೊತೆಗೆ ತನ್ನ ಸಂಘಟನೆ ನೌಕರರಿಗೆ ಮುಷ್ಕರದಲ್ಲಿ ಭಾಗಿಯಾಗದಂತೆ ಮನವಿ ಮಾಡಿದೆ.











