Saturday, April 25, 2026
ಜಿಲ್ಲೆರಾಜ್ಯಸುದ್ದಿ

ಶಬರಿಮಲೆಯಿಂದ 900 ಕಿ.ಮೀ ಕ್ರಮಿಸಿ ಮರಳಿ ಗೂಡು ಸೇರಿದ ಪಾರಿವಾಳ – ಕಹಳೆ ನ್ಯೂಸ್

ಚಿತ್ರದುರ್ಗ: ಶಬರಿಮಲೆಯಲ್ಲಿ ಹಾರಿಬಿಟ್ಟ ಪಾರಿವಾಳವೊಂದು 900 ಕಿಲೋ ಮೀಟರ್ ಕ್ರಮಿಸಿದ ಬಳಿಕ ಮರಳಿ ಗೂಡು ಸೇರಿರುವ ಅಚ್ಚರಿ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ತಳವಾರಹಟ್ಟಿಯಲ್ಲಿ ಬೆಳಕಿಗೆ ಬಂದಿದೆ.

ಈ ಗ್ರಾಮದ ರಾಜು ಎಂಬವರು ಸಾಕಿದ್ದ ‘ಮದಕರಿ’ ಎಂಬ ಪಾರಿವಾಳವನ್ನು ಶಬರಿಮಲೆಗೆ ತೆರಳುವ ಮಾಲಾಧಾರಿಗೆ ನೀಡಿದ್ದರು. ಶಬರಿಮಲೆಯಿಂದ ಪಾರಿವಾಳವನ್ನು ಹಾರಿಬಿಡಲು ತಿಳಿಸಿದ್ದರು. ಹೀಗಾಗಿ ಆ ಮಾಲಾಧಾರಿಯು ಡಿ.31ರಂದು ಶಬರಿಮಲೆಯಲ್ಲಿ ಪಾರಿವಾಳವನ್ನು ಹಾರಿಬಿಟ್ಟಿದ್ದು, ಜ.21ರಂದು ಪಾರಿವಾಳ ಮರಳಿ ತಳವಾರಹಟ್ಟಿಯಲ್ಲಿರುವ ತನ್ನ ಗೂಡು ಸೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸತತ 900 ಕಿಲೋ ಮೀಟರ್ ಕ್ರಮಿಸಿರುವ ಪಾರಿವಾಳ 21 ದಿನಗಳ ಬಳಿಕ ಮರಳಿ ಗೂಡು ಸೇರಿದೆ. ಹೀಗಾಗಿ ಪಾರಿವಾಳದ ದಿಕ್ಕು ಪತ್ತೆ, ತೀಕ್ಷ÷್ಣ ದೃಷ್ಠಿ ಹಾಗು ನೆನಪಿನ ಶಕ್ತಿ ಬಗ್ಗೆ ಗ್ರಾಮಸ್ಥರಲ್ಲಿ ಭಾರೀ ಅಚ್ಚರಿ ಮೂಡಿದೆ.