Friday, April 24, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ ಕಲ್ಲಕಟ್ಟ ಶ್ರೀ ಮಂಜುನಾಥ ಸಂಕೀರ್ಣದಲ್ಲಿ “ರಕ್ಷಾ ಕ್ಲಿನಿಕ್” ನ ಎರಡನೇ ಶಾಖೆ ಶುಭಾರಂಭ – ಕಹಳೆ ನ್ಯೂಸ್

ವಿಟ್ಲ: ಆರೋಗ್ಯಕರ ಸಮಾಜ ನಿರ್ಮಿಸಲು ಕ್ಲಿನಿಕ್ ಸಹಕಾರಿಯಾಗಿದೆ. ಬೆಳೆಯುತ್ತಿರುವ ವಿಟ್ಲಕ್ಕೆ ಅಗತ್ಯವಾಗಿ ಬೇಕಾದ ಕ್ಲಿನಿಕ್ ಶುಭಾರಂಭಗೊಂಡಿದೆ. ಇಂದಿನ ಜೀವನಶೈಲಿಯ ರೋಗವನ್ನು ಕಂಡು ಹಿಡಿಯುವ ವ್ಯವಸ್ಥೆ ಇಲ್ಲಿದೆ ಎಂದು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಕಲ್ಲಕಟ್ಟ ಶ್ರೀ ಮಂಜುನಾಥ ಸಂಕೀರ್ಣದಲ್ಲಿ ರಕ್ಷಾ ಕ್ಲಿನಿಕ್ ನ ಎರಡನೇ ಶಾಖೆಯ ಉದ್ಘಾಟನೆ ನಡೆಸಿ ಆಶೀರ್ವಚನ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಸ್ಥಾಯೀ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಟ್ಟಡದ ಮಾಲಕಿ ಭವಾನಿ ರೈ, ಹಿರಿಯ ವೈದ್ಯ ಡಾ. ರಾಮಭಟ್, ಸುರಕ್ಷಾ ಕ್ಲಿನಿಕ್ ನ ಗೀತಾಪ್ರಕಾಶ, ಬೆನಕಾ ಕ್ಲಿನಿಕ್ ನ ಡಾ. ಅರವಿಂದ್, ಉದ್ಯಮಿಗಳಾದ ಬಾಲಕೃಷ್ಣ, ಸುಧೀರ್, ನಟೇಶ್ ವಿಟ್ಲ, ಕೃಷ್ಣಪ್ರಸಾದ್ ಪುತ್ತೂರು, ದೀಪಾ ಕ್ಲೀನಿಕ್ ವೈದ್ಯ ಉದಯಶಂಕರ ಟಿ., ದೀಪಾ ಭಟ್, ರಕ್ಷಾ ಕ್ಲಿನಿಕ್ ಮಾಲಕ ಚಿನ್ಮಯ ಕೃಷ್ಣ, ಸ್ಮಿತಾ ಚಿನ್ಮಯ, ಮಾಲಕರ ತಂದೆ ಗೋಪಾಲಕೃಷ್ಣ ಭಟ್ ಆಲಂಗಾರು, ತಾಯಿ ಚಂದ್ರಮತಿ, ಕ್ಲಿನಿಕ್ ವೈದ್ಯ ಡಾ. ಜಾರ್ಜ್ ಷಾಜಿ, ಸಿಬ್ಬಂದಿಗಳಾದ ಮೋನಿಷಾ, ಭಾಗ್ಯವತಿ, ಜಲಜಾಕ್ಷಿ, ಪುಣ್ಯಶ್ರೀ, ಶರಣ್ಯ, ಪ್ರಣಮ್ಯ, ಪುಷ್ಪಾವತಿ, ವಿದ್ಯಾಶ್ರೀ, ಈಶ್ವಮಂಗಲ ರಕ್ಷಾ ಕ್ಲಿನಿಕ್ ನ ವೈದ್ಯ ಡಾ. ಅಜಿತ್ ಪಿ. ಬಿ. ಮತ್ತಿತರರು ಹಾಜರಿದ್ದರು.

ಕ್ಲಿನಿಕ್ ನಲ್ಲಿ 24 ಗಂಟೆ ಸೇವೆಯನ್ನು ನೀಡುವ ತಜ್ಞರನ್ನು ನೇಮಿಸಲಾಗಿದೆ. ಹಾಸಿಗೆ ಸೌಲಭವನ್ನು ಹೊಂದಿದ್ದು, ಡ್ರಿಪ್ಸ್ ವ್ಯವಸ್ಥೆ ಮಾಡಲಾಗಿದೆ. ಇಸಿಜಿ, ಎಕ್ಸ ರೇ, ಆಕ್ಸಿಜನ್, ನೆಬಲೈಸೇಶನ್ ಸೌಲಭ್ಯಗಳನ್ನು ನೀಡಲಾಗಿದೆ. ರಕ್ತಪರೀಕ್ಷೆಯಲ್ಲಿ ಬಯೋಕೆಮಿಸ್ಟ್ರಿ ಪರೀಕ್ಷೆ, ಲಿವರ್ ಫಂಕ್ಷನ್ ಪರೀಕ್ಷೆ, ಥೈರಾಯ್ಡ್ ಪರೀಕ್ಷೆಯನ್ನು ಒಳಗೊಂಡಿದೆ.
ಚಿನ್ಮಯ ಕೃಷ್ಣ