ಕಾಂಪೌಂಡ್ ಗೋಡೆ ಹಾರಿ ಸಂಸತ್ ಭವನ ಪ್ರವೇಶಿಸಲು ಯತ್ನ – ಆರೋಪಿ ಬಂಧನ -ಕಹಳೆ ನ್ಯೂಸ್

ನವದೆಹಲಿ : ಸಂಸತ್ ಭವನದೊಳಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಗಳು ಬಂಧಿಸರುವ ಘಟನೆ ಶುಕ್ರವಾರ ನಡೆದಿದೆ. ಈ ಬೆನ್ನಲ್ಲೇ ಸಂಸತ್ ಭವನದಲ್ಲಿ ಭದ್ರತಾ ಲೋಪದ ಆರೋಪವೂ ಕೇಳಿಬಂದಿದೆ.
ಆರೋಪಿಯು ರೈಲ್ ಭವನದ ಕಡೆಗಿರುವ ಗೋಡೆಯನ್ನು ಮರದಿಂದ ಹತ್ತಿ ಆವರಣದೊಳಗೆ ಧುಮುಕಿ ಗರುಡ ಗೇಟ್ ಕಡೆಗೆ ಓಡಲು ಯತ್ನಿಸಿದ್ದ ಎನ್ನಲಾಗಿದೆ.
ಬೆಳಗ್ಗೆ 6.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಭದ್ತಾ ಸಿಬ್ಬಂದಿಗಳು ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸಂಸದೀಯ ವ್ಯವಹಾರಗಳು ಪ್ರತಿಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿರುವ ಮಾನ್ಸೂನ್ ಅಧಿವೇಶನದ ಮುಕ್ತಾಯಕ್ಕೆ ಒಂದು ದಿನ ಬಾಕಿ ಇರುವಂತೆಯೇ ಈ ಘಟನೆ ನಡೆದಿದೆ.
ಕಳೆದ ವರ್ಷವೂ ಇದೇ ರೀತಿಯ ಘಟನೆಯೊಂದು ನಡೆದಿತ್ತು. 20 ರ ವಯಸಿನ ಯುವಕನೊಬ್ಬ ಸಂಸತ್ ಭವನದಲ್ಲಿ ಕಾಂಪೌಂಡ್ ಜಿಗಿದು ಆವರಣದೊಳಗೆ ಪ್ರವೇಶ ನೀಡಿದ್ದ. ಟಿ.ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದ ಈತನ ವಿಡಿಯೋ ಕೂಡ ಹರಿದಾಡಿತ್ತು. ಬಳಿಕ ಸಿಎಐಎಸ್‌ಎಫ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದರು. ಆದರೆ ಆತನ ಬಳಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿರಲಿಲ್ಲ.
ಸಂಸತ್ ಭವನದ ಮೇಲೆ 2021 ರಲ್ಲಿ ದಾಳಿ ನಡೆದ ಸಂದರ್ಭದ ವಾರ್ಷಿಕೋತ್ಸವ ನಡೆಸುತ್ತಿರುವಾಗ 2023 ರಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂಬ ಇಬ್ಬರು ಯುವಕರು ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರೆಡೆಗೆ ನುಗ್ಗಿ ಕಲರ್ ಬಾಂಬ್ ಗಳನ್ನು ಸಿಡಿಸಿ ಆತಂಕ ಸೃಷ್ಟಿಸಿದ್ದರು. ಈ ವೇಳೆ ಸದನದಲ್ಲಿ ಶೂನ್ಯವೇಳೆಯ ಚರ್ಚೆ ನಡೆಯುತ್ತಿತ್ತು. ಜೊತೆಗೆ ಅಮೋಲ್ ಶಿಂದೆ ಮತ್ತು ನೀಲಂ ಅಜಾದ್ ಎಂಬ ಇಬ್ಬರು ಯುವಕರು “ಸರ್ವಾಧಿಕಾರ ನಡೆಯುವುದಿಲ್ಲ” ಎಂದು ಘೋಷಣೆ ಕೂಗಿದ್ದರು. ಇದೇ ಪ್ರಕರಣದಲ್ಲಿ ನಾಲ್ವರೂ ಆರೋಪಿಗಳೊಡನೆ ಮಹೇಶ್ ಕುಮಾವತ್ ಮತ್ತು ಲಲಿತ್ ಜ್ಹಾ ಎಂಬುವರೂ ಸೇರಿ ಆರು ಮಂದಿಯನ್ನು ಬಂಧಿಸಲಾಗಿತ್ತು.









