ಧರ್ಮಸ್ಥಳ ಠಾಣೆಯಲ್ಲಿ ‘ಕುಡ್ಲಾ ರಾಂ ಪೇಜ್’ ನ ಯೂಟ್ಯೂಬರ್ ಹಾಗೂ ಇತರ ಇಬ್ಬರ ವಿರುದ್ಧ FIR – ಕಹಳೆ ನ್ಯೂಸ್

ಬೆಳ್ತಂಗಡಿ, ಆ. 11: ವಿಡಿಯೊ ಚಿತ್ರೀಕರಣದ ವಿಚಾರವಾಗಿ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ, ಯೂಟ್ಯೂಬರ್ ಒಬ್ಬರು ಹಾಗೂ ಆತನ ಇಬ್ಬರು ಸಹಚರರು ಸೇರಿ ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲ್ಲೂಕಿನ ಉಜಿರೆ ನಿವಾಸಿ ಹರೀಶ್ ನಾಯ್ಕ (16) ಹಲ್ಲೆಗೊಳಗಾದವರು. ಅಗಸ್ಟ್ 6 ರಂದು ಪ್ರಕರಣ ದಾಖಲಾಗಿದೆ. ಈ ಸಂಬಂಧ, ಕುಡ್ತಾ ರಾಂ ಪೇಜ್’ ಎಂಬ ಯೂಟ್ಯೂಬ್ ಚಾನೆಲ್‌ನ ಯೂಟ್ಯೂಬರ್ ಹಾಗೂ ಇತರ ಇಬ್ಬರ ವಿರುದ್ಧ ಅವರು ಕೇಸ್ ದಾಖಲಿಸಿದ್ದಾರೆ.
ಘಟನೆಯ ವಿವರ: ಹರೀಶ್ ನಾಯ್ಕ ಅವರು ತಮ್ಮ ದೂರಿನಲ್ಲಿ ವಿವರಿಸಿರುವಂತೆ, ಬುಧವಾರ
ಮಧ್ಯಾಹ್ನ ತಮ್ಮ ಮೋಟಾರ್ ಸೈಕಲ್‌ನಲ್ಲಿ ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಈ ವೇಳೆ, ವಿಡಿಯೊ ಕ್ಯಾಮರಾ ಹಿಡಿದು ನಿಂತಿದ್ದ ಮೂವರು ಅವರನ್ನು ತಡೆದು ನಿಲ್ಲಿಸಿದ್ದಾರೆ.
ತಮ್ಮನ್ನು ‘ರಾಂ ಪೇಜ್’ ಯೂಟ್ಯೂಬರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯು. ‘ಧರ್ಮಸ್ಥಳ ಪರಿಸರದಲ್ಲಿ ಹೆಣಗಳನ್ನು ಹೂತಿರುವ ಬಗ್ಗೆ’ ಮಾಹಿತಿ ಕೇಳಿ ವಾಗ್ವಾದ ಆರಂಭಿಸಿದ್ದಾನೆ. ಹರೀಶ್ ಅವರು ಇದಕ್ಕೆ ತಕರಾರು ವ್ಯಕ್ತಪಡಿಸಿದಾಗ. ಮಾತಿಗೆ ಮಾತು ಬೆಳೆದು, ಯೂಟ್ಯೂಬರ್ ಹಾಗೂ ಆತನೊಂದಿಗಿದ್ದ ಇನ್ನಿಬ್ಬರು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹರೀಶ್ ನಾಯ್ಕ ನೀಡಿದ ದೂರಿನ ಅನ್ವಯ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 50/2025 ರಂತೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಲಂ 126(2), 115(2), 352 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಘಟನೆ ನಡೆದ ದಿನದಂದೆ ಕುಡ್ಲಾ ರಾಂ ಪೇಜ್’ ಯೂ ಟೂಬ್ ಚಾನೆಲ್ ನ ಯೂಟ್ಯೂಬರ್ ಸೇರಿದಂತೆ ಮೂವರು ಯೂಟ್ಯೂಬರ್ ಗಳ ಗುಂಪೊಂದು ಹಲ್ಲೆ ನಡೆಸಿದ ಬಗ್ಗೆ ಅದೇ ದಿನ ಪ್ರಕರಣ ದಾಖಲಾಗಿತ್ತು ಹಾಗೂ ಹಲ್ಲೆಯ ವಿಡಿಯೋಗಳು ವೈರಲ್ ಆಗಿತ್ತು.









