ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ನಗರದ ವತಿಯಿಂದ ವಿವೇಕಾನಂದ ಕ್ಯಾಂಪಸ್ ನ ABVP ಕಾರ್ಯಲಯದಲ್ಲಿ ವಿದ್ಯಾರ್ಥಿ ದಿವಸ್ ನ ಕಾರ್ಯಕ್ರಮ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ನಗರದ ವತಿಯಿಂದ ವಿವೇಕಾನಂದ ಕ್ಯಾಂಪಸ್ ನ ABVP ಕಾರ್ಯಲಯದಲ್ಲಿ ವಿದ್ಯಾರ್ಥಿ ದಿವಸ್ ನ ಕಾರ್ಯಕ್ರಮವನ್ನು ಧ್ವಜಾರೋಹಣ ಹಾಗೂ ಗಿಡ ನೆಡುವುದರೊಂದಿಗೆ ಆಚರಿಸಲಾಯಿತು .
ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕರು ಹಾಗೂ ನ್ಯಾಯವಾದಿಗಳಾದ ಶ್ರೀ ಶ್ರೀ ಮುರಳಿ ಕೃಷ್ಣ ಕೆ ಎಂ ಇವರು ಧ್ವಜಾರೋಹಣವನ್ನು ನೆರವೇರಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ವೆಂಕಟರಮಣ ಮಂಕಡೆ ಇವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಲಕ್ಷ್ಮೀಪ್ರಸಾದ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಕುಮಾರಿ ಮಂದಾರ, ರಾಷ್ಟ್ರೀಯ ಕಲಾ ಮಂಚ್ ಪ್ರಾಂತ ಪ್ರಮುಖ್ ಹಾಗೂ ಅ.ಬ.ವಿ.ಪ ಪುತ್ತೂರು ನಗರ ಉಪಾಧ್ಯಕ್ಷೆ ಕುಮಾರಿ ದೀಪಿಕಾ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಕುಮಾರಿ ಅಮೃತಾಂಬಾ, ಪುತ್ತೂರು ಜಿಲ್ಲಾ ಸಂಚಾಲಕ ಶ್ರೀ ಸಮನ್ವಿತ್, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಕುಮಾರಿ ಸಿಂಚನ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದೇವಿಚರಣ್ ರೈ, ವಿವೇಕಾನಂದ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುರಾಜ್, ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕರು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಪುತ್ತೂರು ನಗರದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.









