ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ನೀರು ಕುಡಿಯುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು – ಕಹಳೆ ನ್ಯೂಸ್

ಹೌದು ನೀರು ಕುಡಿಯುತ್ತಿದ್ದಾಗ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಹೃದಯಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ನೀರು ಕುಡಿಯುವಾಗಲೇ ಬಿದ್ದು ಪುಟ್ಟಸ್ವಾಮಿ (55) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ.ಮಳವಳ್ಳಿ ತಾಲೂಕಿನ ಅಟ್ಟುವನಹಳ್ಳಿಯಲ್ಲಿ ಈ ಒಂದು ದುರಂತ ನಡೆದಿದೆ. ಜಮೀನಿನಿಂದ ಮೇಕೆಗೆ ಮೇವಿಗೆ ತಂದಿರುತ್ತಾರೆ. ಈ ವೇಳೆ ಮನೆಯವರ ಬಳಿ ನೀರು ಪಡೆದು ನೀರು ಕುಡಿಯುವಾಗಲೇ ಪುಟ್ಟಸ್ವಾಮಿ ಏಕಾಏಕಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ.











