ಎ ಜೆ ಆಸ್ಪತ್ರೆ ಮಂಗಳೂರು ಇವರಿಂದ ಮುತ್ತೂರು ಗ್ರಾಮ ಪಂಚಾಯತ್ ನಲ್ಲಿ ಇಂದು ಉಚಿತ ವೈದ್ಯಕೀಯ ಶಿಬಿರ – ಕಹಳೆ ನ್ಯೂಸ್

ಮಂಗಳೂರು : ಎ ಜೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್, ಮಂಗಳೂರು, ಲಕ್ಷ್ಮಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಪ್ರಾಥಮಿಕ ಆರೋಗ್ಯ ಕೇಂದ್ರ ಕುಪ್ಪೆಪದವು, ಗ್ರಾಮ ಪಂಚಾಯತ್ ಮುತ್ತೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಇವರ ಸಹಯೋಗದೊಂದಿಗೆ ಇಂದು ಮುತ್ತೂರು ಗ್ರಾಮ ಪಂಚಾಯತ್ ನಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು.
ಕಣ್ಣಿನ ತಪಾಸಣೆ, ಇಸಿಜಿ ಮುಂತಾದ ಉಚಿತ ಆರೋಗ್ಯ ತಪಾಸಣೆ ನಡೆಯಿತು.

ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಜನರ ಆರೋಗ್ಯ ದೃಷ್ಟಿಯಿಂದ ಈ ಶಿಬಿರವನ್ನು ಏರ್ಪಡಿಸಿದ್ದು ವಿವಿಧ ರೀತಿಯಲ್ಲಿ ಉಚಿತವಾಗಿ ವೈದ್ಯಕೀಯ ತಪಾಸಣೆಯನ್ನು ನಡೆಸುತ್ತಿದ್ದು ಇದರ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಸುಶ್ಮಾ, ಸದಸ್ಯರುಗಳಾದ ಪುಷ್ಪಾ ನಾಯ್ಕ್, ಸತೀಶ್ ಪೂಜಾರಿ ಬಳ್ಳಾಜೆ, ಜಗದೀಶ್ ದುರ್ಗಾಕೋಡಿ ,ತೋಮಸ್ ಹೆರಾಲ್ಡ್ ರೋಸರಿಯೋ, ತಾರಾನಾಥ ಕುಲಾಲ್, ರುಕ್ಮಿಣಿ, ಮಾಲತಿ, ಶಶಿಕಲಾ, ವನಿತಾ ಉಪಸ್ಥಿತರಿದ್ದರು . ಎ ಜೆ ಸಂಸ್ಥೆ ವೈದ್ಯಾಧಿಕಾರಿ ಅನುಶ್ ಶೆಟ್ಟಿ, ಅನ್ವಿತಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಎಸ್ ನಾಯ್ಕ್ ಸ್ವಾಗತಿಸಿದರು, ಕಾರ್ಯದರ್ಶಿ ವಸಂತಿ ಹಾಗೂ ಸಿಬ್ಬಂದಿ ವರ್ಗದವರು ಜತೆಗಿದ್ದರು.









