
ಚೆನ್ನೈ: ಮೀನು ಬೇಟೆಯಾಡಲು ಹೋದ ಯುವಕನೊಬ್ಬ ಬೇಟೆಯಾಡಿದ ಮೀನಿನಿಂದಲೇ ಜೀವ ಕಳೆದುಕೊಂಡಿರುವ ಭಯಾನಕ ಘಟನೆಯೊಂದು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಅರಯಪಕ್ಕಂ ಗ್ರಾಮದ ಮಣಿಗಂಡನ್(29) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ:
ಮಣಿಗಂಡನ್ ಓರ್ವ ದಿನ ಕೂಲಿ ಕಾರ್ಮಿಕನಾಗಿದ್ದ ಜೊತೆಗೆ ಈತ ಬಲೆ, ಗಾಳ ಇಲ್ಲದೆ ಬರಿಗೈಯಲ್ಲೇ ಮೀನುಗಳನ್ನು ಬೇಟೆಯಾಡುವುದರಲ್ಲಿ ನಿಸ್ಸಿಮನಾಗಿದ್ದ ಅದೇ ರೀತಿ ಕಳೆದ ಮಂಗಳವಾರ ತನ್ನದೇ ಊರಿನಲ್ಲಿರುವ ಕೀಳವಳಮ್ ಕೆರೆಗೆ ಮೀನು ಬೇಟೆಗೆ ಹೋಗಿದ್ದ ತನ್ನ ಚಾಣಾಕ್ಷತನದಿಂದ ಒಂದು ಮೀನನ್ನು ಬೇಟೆಯಾಡಿದ್ದ ಇದರ ಜೊತೆಗೆ ಇನ್ನೊಂದು ಮೀನನ್ನು ಬೇಟೆಯಾಡಲು ಮುಂದಾಗಿದ್ದಾನೆ ಆದರೆ ಕೈಯಲ್ಲಿದ್ದ ಬೇಟೆಯಾಡಿದ ಮೀನನ್ನು ಬಾಯಿಯಲ್ಲಿ ಕಚ್ಚಿ ಹಿಡಿದುಕೊಂಡು ಇನ್ನೊಂದು ಮೀನಿನ ಬೇಟೆಗೆ ಮುಂದಾಗಿದ್ದ ಈ ವೇಳೆ ಬಾಯಿಯಲ್ಲಿ ಕಚ್ಚಿ ಹಿಡಿದಿದ್ದ ಮೀನು ಒಮ್ಮೆಲೇ ಬಾಯಿಯೊಳಗೆ ನುಗ್ಗಿ ಗಂಟಲಲ್ಲಿ ಸಿಲುಕಿಕೊಂಡಿದೆ.
ಗಂಟಲಲ್ಲಿ ಸಿಲುಕಿದ ಮೀನನ್ನು ಹೊರತೆಗೆಯಲಾಗದೆ ಒದ್ದಾಡಿದ ಮಣಿಗಂಡನ್ ಉಸಿರಾಡಲು ಒದ್ದಾಡಿದ್ದಾನೆ, ಈ ವೇಳೆ ಆತನ ಜೊತೆಗಿದ್ದ ಇತರರು ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಆದರೆ ಆಸ್ಪತ್ರೆ ದಾರಿ ಮಧ್ಯೆ ಮಣಿಗಂಡನ್ ಕೊನೆಯುಸಿರೆಳೆದಿದ್ದಾನೆ.











