Recent Posts

Saturday, April 25, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ : ರಕ್ತದಾನವೇ ಜೀವದಾನ : ಡಾ. ಪ್ರಭಾಕರ ಭಟ್ ಕಲ್ಲಡ್ಕ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇದರ ರೆಡ್ ಕ್ರಾಸ್ ಘಟಕ, ಆಂತರಿಕ ಗುಣಮಟ್ಟ ಭರವಸಾಕೋಶ ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ನಡೆಯಿತು.

ವೈದ್ಯಾಧಿಕಾರಿ ಡಾ. ಅಂಕಿತ್ ಇವರು ಕಾಲೇಜಿನ ರೆಡ್‍ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಹಾಗೂ ರಕ್ತದಾನ ಶಿಬಿರದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ನೆರವೇರಿಸಿ ರಕ್ತದಾನದ ಮಹತ್ವವನ್ನು ತಿಳಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರೂ ಆದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ರಕ್ತದಾನವೇ ಮಹಾದಾನ, ಇದು ಜೀವದಾನದ ಪುಣ್ಯದ ಕೆಲಸ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪಾಂಚಜನ್ಯ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಸುಧೆಕಾರ್, ಕಲ್ಲಡ್ಕದ ಆಟೋಚಾಲಕ- ಮಾಲಕ ಸಂಘದ ಅಧ್ಯಕ್ಷ ಶ್ರೀ ರವೀಂದ್ರ ಸುಧೆಕಾರ್, ಶ್ರೀರಾಮ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ನಾರಾಯಣ ಶೆಟ್ಟಿ ಕುಲ್ಯಾರ್, ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು ಇದರ ಅಧ್ಯಕ್ಷ ಶ್ರೀ ಲೋಕಾನಂದ ಏಳ್ತಿಮಾರ್, ನೇತಾಜಿ ಯುವಕ ಮಂಡಲ ಕಲ್ಲಡ್ಕ ಇದರ ಕಾರ್ಯದರ್ಶಿ ಅಜಿತ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ, ರೆಡ್ ಕ್ರಾಸ್ ಘಟಕದ ನಿರ್ದೇಶಕಿ ಶ್ರೀಮತಿ ಅಶ್ವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶ್ರೀ ಯತಿರಾಜ್ ಪೆರಾಜೆ ಸ್ವಾಗತಿಸಿ, ರೆಡ್ ಕ್ರಾಸ್ ಘಟಕದ ನಿರ್ದೇಶಕಿ ಶ್ರೀಮತಿ ಅಶ್ವಿತಾ ವಂದಿಸಿ, ವಿದ್ಯಾರ್ಥಿ ಯತೀಶ್ ಕಾರ್ಯಕ್ರಮ ನಿರ್ವಹಿಸಿದರು. ಕು. ಮನ್ವಿತಾ ಪ್ರಾರ್ಥಿಸಿದರು.