Monday, April 27, 2026
ದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಕವಿ ಕಟ್ಟತ್ತಿಲ ಗೋಪಾಲ ಕೃಷ್ಣ ಭಟ್ ನಿಧನ – ಕಹಳೆ ನ್ಯೂಸ್

ಸಾಲೆತ್ತೂರು ಸಮೀಪದ ಕಟ್ಟತ್ತಿಲ ನಿವಾಸಿ ಕಟ್ಟತ್ತಿಲ ಗೋಪಾಲ ಕೃಷ್ಣ ಭಟ್ಟ್( 51 ವರ್ಷ) ಶುಕ್ರವಾರ ಸಂಜೆ 9.2.24ರಂದು ಮಂಗಳೂರು ವೆನ್ಲೋಕ್ ಆಸ್ಪತ್ರೆ ಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವಿವಾಹಿತ ರಾಗಿದ್ದ ಅವರು ಪುತ್ತೂರು ಸಾಹಿತ್ಯ ವೇದಿಕೆಯನ್ನು ಕಟ್ಟಿ ಬೆಳೆಸಿದ್ದರು.

ಹಲವಾರು ಕವಿಗೋಷ್ಟಿಗಳನ್ನು ನಡೆಸಿ ಕಿರಿಯ ಹಿರಿಯ ಕವಿಸಾಧಕರಿಗೆ ಸನ್ಮಾನಿಸಿ ಗೌರವಿಸಿದ್ದರು.ಹಲವು ಕಿರುಚಿತ್ರಗಳಲ್ಲಿ ನಟಿಸಿದ್ದು ಕಾಂತಾರ ಸಿನಿಮಾ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಸಹ ನಟರಾಗಿ ಅಭಿನಯಿಸಿದ್ದರು.ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಕೆಲವು ಕೃತಿಗಳನ್ನು ಬಿಡುಗಡೆಗೊಳಿಸಿದ್ದರು. ಹಿರಿಯ ಸಹೋದರ ಕಟ್ಟತ್ತಿಲ ವೆಂಕಟರಮಣ ಭಟ್ ಸೇರಿದಂತೆ ಇಬ್ಬರು ಅಣ್ಣಂದಿರು,ಮೂವರು ಅಕ್ಕಂದಿರು, ಅಪಾರ ಬಂಧುಗಳನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು