Saturday, April 25, 2026
ಸುದ್ದಿ

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ 13ರ ಹರೆಯದ ಬಾಲಕಿ – ಕಹಳೆ ನ್ಯೂಸ್

ಮೂಡುಬಿದಿರೆ : ತೆಂಕಮಿಜಾರು ಗ್ರಾ .ಪಂ . ವ್ಯಾಪ್ತಿಯ ಅಶ್ವತ್ಥಪುರದ 13ರ ಹರೆಯದ ಬಾಲಕಿಯೋರ್ವಳು ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಅಶ್ವತ್ಥಪುರ ಮೂಡುಪಲ್ಲ ಮನೆಯ ಜೋಯ್ ಐವನ್ ಡಿ’ಸೋಜ-ವಿನೋದ ದಂಪತಿಯ ಪುತ್ರಿಯಾಗಿರುವ ಜೆಸ್ವಿಟಾ ಡಿ’ಸೋಜಾ ತನ್ನ ಉದ್ದನೆಯ ಕೂದಲಿನ ಅರ್ಧದಷ್ಟನ್ನು ಕತ್ತರಿಸಿ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದಾಕೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ರಿಕೆ ಸಹಿತ ಇತರ ಮಾಧ್ಯಗಳಲ್ಲಿ ಕೆಲ ದಾನಿಗಳು ಕ್ಯಾನ್ಸರ್ ಪೀಡಿತರಿಗೆ ಕೂದಲನ್ನು ನೀಡಿ ಸಹಕಾರ ನೀಡುತ್ತಿರುವುದನ್ನು ಗಮನಿಸಿರುವ ಜೊಸ್ವಿಟಾ ತಾನು ಕೂಡಾ ಕ್ಯಾನ್ಸರ್ ಪೀಡಿತರಿಗೆ ಕೂದಲನ್ನು ನೀಡಿ ಸಹಾಯ ಮಾಡಬೇಕೆಂಬ ಸಂಕಲ್ಪವನ್ನು ಕೈಗೊಂಡಿದ್ದಳು ಅದರಂತೆ ಬೆಳ್ಮಣಿನ ಹ್ಯೂಮಾನಿಟಿ ಸಂಸ್ಥೆಗೆ ತನ್ನ ಕೇಶವನ್ನು ನೀಡಿ ಗಮನ ಸೆಳೆದಿದ್ದಾರೆ. ಹ್ಯುಮಾನಿಟಿ ಸಂಸ್ಥೆಯು ಕೂದಲನ್ನು ಕ್ಯಾನ್ಸರ್ ರೋಗಿಗೆ ಕೂದಲನ್ನು ತಲುಪಿಸಲಿದೆ.