Exclusive : ಮೂಗು ಮುಚ್ಕೊಳಿ, ಇಂಜೆಕ್ಷನ್ ಚುಚ್ಚಿಸ್ಕೊಳ್ಳದಿರಿ ; ಮೂಲಭೂತ ಸೌಕರ್ಯದ ಕೊರತೆಯಿಂದ ಬಳಲುತ್ತಿದೆ ಪುತ್ತೂರಿನ ಸರಕಾರಿ ಆಸ್ಪತ್ರೆ – ಕಹಳೆ ನ್ಯೂಸ್
ಪುತ್ತೂರು : ಸರಕಾರಿ ಆಸ್ಪತ್ರೆ ಇದೀಗ ಸಮಸ್ಯೆಗಳ ಆಗರವಾಗಿ ಬೆಳೆದು ನಿಂತಿದೆ. ಸಿಬ್ಬಂದಿಗಳ ಕೊರತೆ ಇಲ್ಲಿನ ಸಾಮಾನ್ಯ ಸಮಸ್ಯೆಯಾಗಿದ್ದು, ಆಸ್ಪತ್ರೆಗೆ ಬೇಕಾದ ಮೂಲಭೂತ ಅವಶ್ಯಕತೆಗಳ ಕೊರತೆಯೂ ಇಲ್ಲಿ ಎದ್ದು ಕಾಣುತ್ತಿದೆ. ತುರ್ತು ಚಿಕಿತ್ಸೆ ಹಾಗೂ ಡಯಾಲಿಸೀಸ್ ಮೊದಲಾದ ವಿಭಾಗಗಳಿರುವ ಈ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಅತೀ ಅವಶ್ಯಕವಾಗಿ ಬೇಕಾದ ಜನರೇಟರ್ ಇಲ್ಲಿ ಕೆಟ್ಟು ಹೋಗಿ ಆರು ತಿಂಗಳುಗಳೇ ಕಳೆದಿದೆ. ಹೀಗೆ ಕೈಗೆಲ್ಲಾ ಪೈಪ್ ಚುಚ್ಚಿಕೊಂಡು ಇರುವವರು ಪುತ್ತೂರಿನ...







