ಕರಾವಳಿಯಲ್ಲಿಲ್ಲ ನಿಫಾ ನಿರಾತಂಕವಾಗಿರಿ ವೈರಸ್, ವದಂತಿಗಳನ್ನು ನಂಬಬೇಡಿ – ಜಿಲ್ಲಾಧಿಕಾರಿ ಸೆಂಥಿಲ್
ಮಂಗಳೂರು : ಕರಾವಳಿಯಲ್ಲಿ ನಿಫಾ ವೈರಸ್ ಪತ್ತೆಯಾಗಿಲ್ಲ, ಜನರು ಭಯಪಡಬೇಕಾಗಿಲ್ಲ ಎಂದು ದ,ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಮೇ ೨೪ ರ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರಕ್ಕೆ ಚಿಕಿತ್ಸೆಗಾಗಿ ಬಂದಿದ್ದ ಕಲ್ಲಿಕೋಟೆಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯಾಗಿದ್ದ ಕಾರಣ ಅನುಮಾನದ ಮೇರೆಗೆ ಹಾಗೂ ಇನ್ನೊಬ್ಬ ರೋಗಿಯ ಕಫದ ಮಾದರಿಯನ್ನು ತಪಾಸಣೆಗಾಗಿ ಕಳುಹಿಸಲಾಗಿತ್ತು. ಆದರೆ ಇದೀಗ ವರದಿ ದೊರಕಿದ್ದು, ಜಿಲ್ಲೆಯಲ್ಲಿ ಯಾರಿಗೂ ವೈರಸ್ ತಗುಲಿಲ್ಲ ಎಂದು...







