Thursday, May 14, 2026

archivekahale news

ಸುದ್ದಿ

ವರ್ಣರಂಜಿತ ಮಂಗಳೂರು ದಸರಾ ಸಂಪನ್ನ ; ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು – ಕಹಳೆ ನ್ಯೂಸ್

ಬೀದಿಯುದ್ದಕ್ಕೂ ಝಗಮಗಿಸುವ ವಿದ್ಯುತ್ ದೀಪ, ತಾಸೆ ಪೆಟ್ಟಿಗೆ ಕುಣಿಯುವ ಹುಲಿ ವೇಷಧಾರಿಗಳ ತಂಡ, ವೈವಿಧ್ಯಮಯ ಕಥೆ, ಘಟನೆಗಳನ್ನು ಪ್ರಸ್ತುತಪಡಿಸುವ ಸ್ತಬ್ಧಚಿತ್ರಗಳು ಹಿಂದಿನಿಂದ ಸರ್ವಾಲಂಕೃತ ವಾಹನದಲ್ಲಿ ಸಾಗಿ ಬರುವ ಶಾರದಾ ಮೂರ್ತಿ, ನವದುರ್ಗೆಯರು…ಭಕ್ತ ವೃಂದದ ಜಯಕಾರ… – ಇದು ಶುಕ್ರವಾರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಆರಂಭಗೊಂಡ ಮಂಗಳೂರು ದಸರಾ ಮೆರವಣಿಗೆಯ ವೈಭವ. ನವದುರ್ಗೆಯರ ಸಂಭ್ರಮದ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಕುದ್ರೋಳಿ ದೇವಸ್ಥಾನದಿಂದ ಎಂ.ಜಿ.ರೋಡ್‌ವರೆಗೆ ಜನ ಸಾಗರವೇ ನೆರೆದಿತ್ತು. ಶುಕ್ರವಾರ ಮುಂಜಾನೆ ದೇವಸ್ಥಾನದಲ್ಲಿ...
ಸುದ್ದಿ

#MeToo ಸುಳಿಯಲ್ಲಿ ಕೇಂದ್ರ ಸಚಿವ ಸದಾನಂದಗೌಡರ ಹೆಸರು ದುರ್ಬಳಕೆ ; ಕಹಳೆ ನ್ಯೂಸ್ ಗೆ ಆರೋಪದ ಬಗ್ಗೆ ಡಿವಿಎಸ್ ಹೇಳಿದ್ದೇನು ಗೊತ್ತಾ ? – ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ವಿರುದ್ಧ ಮೀಟೂ ಆರೋಪ ಕೇಳಿ ಬಂದಿದೆ. ಬಿಜೆಪಿಯಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ ಮಾಧುರಿ ಎಂಬವರು ಈ ಆರೋಪ ಮಾಡಿದ್ದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಒಬ್ಬ ಸಿಎಂ ಆಗಿದ್ದವರು ಯಾವ ರೀತಿ ವರ್ತನೆ ಮಾಡಬೇಕು ಎನ್ನುವುದು ಗೊತ್ತಿರುತ್ತದೆ. ಬಿಜೆಪಿಯಲ್ಲಿ ಹಲವು ಮಂದಿ ಅವರವರ ಸ್ಟೇಟಸ್‍ನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಷ್ಟೋ ಕೆಲಸ ಇರುತ್ತದೆ. ಆದರೆ ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಅಂತಾ ಹೇಳೋದು, ನಿಮ್ಮನ್ನು...
ಸುದ್ದಿ

Breaking News : ಸುರತ್ಕಲ್ ಬಳಿ ಆಸಿಡ್ ತುಂಬಿದ್ದ ಟ್ಯಾಂಕರ್‌ನಲ್ಲಿ ಬಿರುಕು ; ರಸ್ತೆಯುದ್ದಕ್ಕೂ ಆವರಿಸಿದ ಬೆಂಕಿ, ದಟ್ಟ ಹೊಗೆ – ಕಹಳೆ ನ್ಯೂಸ್

ಮಂಗಳೂರು, ಅ19 : ಮಂಗಳೂರು ಕಡೆಗೆ ಉಡುಪಿಯಿಂದ ಬರುತ್ತಿದ್ದ ಆಸಿಡ್ ತುಂಬಿದ್ದ ಟ್ಯಾಂಕರ್‌ನಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ರಸ್ತೆಯುದ್ದಕ್ಕೂ ಬೆಂಕಿ, ದಟ್ಟ ಹೊಗೆ ಆವರಿಸಿದ ಘಟನೆ ನಡೆದಿದೆ.  ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಈ ಅವಘಡ ನಡೆದಿದೆ. ಟ್ಯಾಂಕರ್‌ನಲ್ಲಿ ಕಾಣಿಸಿಕೊಂಡ ಬಿರುಕು ಚಾಲಕನಿಗೆ ತಿಳಿಯದೇ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿದೆ. ಟ್ಯಾಂಕರ್ ಬಿರುಕಿನಿಂದಾಗಿ ಆಸಿಡ್ ರಸ್ತೆಗೆ ಚೆಲ್ಲಿ ಬೆಂಕಿ ಮತ್ತು ಭಾರಿ ಹೊಗೆ ಕಾಣಿಸಿಕೊಂಡಿದೆ. ಸುರತ್ಕಲ್ ಟೋಲ್ ಗೇಟ್...
ಸುದ್ದಿ

Breaking News : ವಿಜಯದಶಮಿ ದಿನವೇ ಪ್ರಮೋದಾ ದೇವಿಯ ತಾಯಿ ವಿಧಿವಶ ; ಅರಮನೆಯಲ್ಲಿ ಸೂತಕ – ಕಹಳೆ ನ್ಯೂಸ್

ಮೈಸೂರು: ಇಂದು ಸಮಸ್ತ ನಾಡಿನ ಜನತೆಯೂ ಜಂಬೂಸವಾರಿಗೆ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ವಿಜಯದಶಮಿ ದಿನವೇ ಪ್ರಮೋದಾ ದೇವಿ ಅವರ ತಾಯಿ ವಿಧಿವಶರಾಗಿದ್ದಾರೆ. ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ(98) ಅವರು ನಿಧನರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುಟ್ಟಚಿನ್ನಮ್ಮಣಿ ಅವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಪುಟ್ಟಚಿನ್ನಮ್ಮಣಿ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅರಮನೆಯಲ್ಲಿ ಜಂಬೂಸವಾರಿಯ...
ಸುದ್ದಿ

Big News : ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಯತ್ನಿಸಿದ ಕವಿತಾ ಜಕ್ಕಾಲ ಮತ್ತು ರಹನಾ ಫಾತಿಮಾ ; ಕೊನೆ ಕ್ಷಣದಲ್ಲಿ ಯತ್ನ ವಿಫಲ – ಕಹಳೆ ನ್ಯೂಸ್

ತಿರುವನಂತಪುರಂ, ಅ19 : ಸುಮಾರು 200 ಪೊಲೀಸರ ಸರ್ಪಗಾವಲಿನಲ್ಲಿ ಕೊಚ್ಚಿ ಮೂಲದ ಇಬ್ಬರು ಮಹಿಳೆಯರು ಹಿಂದೂ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದತ್ತ ಹೆಜ್ಜೆ ಹಾಕಿದ್ದು. ದೇಗುಲದ ಆವರಣವನ್ನು ಮಹಿಳೆಯರು ತಲುವಷ್ಟರಲ್ಲಿ ಭಕ್ತಾದಿಗಳ ಪ್ರತಿಭಟನೆ ಹೆಚ್ಚಾದ ಹಿನ್ನಲೆ, ದೇವಾಲಯ ಪ್ರವೇಶಿಸದೇ ಮಹಿಳೆಯರು ವಾಪಸ್ ಬಂದಿದ್ದಾರೆ ಎನ್ನುವ ಮಾಹಿತಿ ವರದಿಯಾಗಿದೆ. ಸೆ.28ರಂದು 10ರಿಂದ-50 ವರ್ಷದವರೆಗಿನ ಎಲ್ಲರೂ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆಯಬಹುದೆಂಬ ಮಹತ್ವದ ತೀರ್ಪು ಕೋರ್ಟ್ ನೀಡಿತ್ತು. ಈ ಹಿನ್ನೆಲೆ, ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಹೆಲ್ಮೆಟ್ ಧರಿಸಿ,...
ಸುದ್ದಿ

ನಾಡಬಾಂಬ್ ಸಿಡಿಸಿ ಮನೆ ಧ್ವಂಸಗೊಳಿಸಲು ಯತ್ನ: ಆರೋಪಿಯ ಪತ್ತೆಗಾಗಿ ವ್ಯಾಪಕ ಶೋಧನೆ – ಕಹಳೆ ನ್ಯೂಸ್

ಪುತ್ತೂರು: ಮನೆ ಮಂದಿ ಮಲಗಿದ್ದ ವೇಳೆಯಲ್ಲಿ ಮನೆಯ ಸುತ್ತ ನಾಡಬಾಂಬ್ ಸಿಡಿಸಿ ಮನೆಯನ್ನು ಧ್ವಂಸಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಯ ಪತ್ತೆಗಾಗಿ 5 ಪೋಲೀಸ್ ತಂಡವನ್ನು ರಚಿಸಲಾಗಿದೆ. ಈ ಪೈಕಿ 2 ತಂಡಗಳು ಕೇರಳಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ. ಸೋಮವಾರ ತಡರಾತ್ರಿ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ನಾರಾಯಣ ಪ್ರಸಾದ್ ಅವರ ಮನೆಯಲ್ಲಿ ಈ ಘಟನೆ ನಡೆದಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ಕೇರಳದ ವ್ಯಕ್ತಿ...
ಸುದ್ದಿ

ಶಬರಿಮಲೆ ರಕ್ಷಣಾ ಸಮಿತಿ 12 ಗಂಟೆಗಳ ಕಾಲ ಕೇರಳ ಬಂದ್ ಗೆ ಕರೆ – ಕಹಳೆ ನ್ಯೂಸ್

ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಷಯ ಕೇರಳದಲ್ಲಿ ಭಾರೀ ಬಿಗುವಿನ ವಾತಾವರಣಕ್ಕೆ ಕಾರಣವಾಗಿದ್ದು, ಶಬರಿಮಲೆ ರಕ್ಷಣಾ ಸಮಿತಿ 12 ಗಂಟೆಗಳ ಕಾಲ ಕೇರಳ ಬಂದ್ ಗೆ ಗುರುವಾರ ಕರೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬುಧವಾರ ಸಂಜೆಯಿಂದಲೇ ಸನ್ನಿಧಾನಂ, ಪಂಪಾ, ನೀಲಕ್ಕಲ್ ಮತ್ತು ಎಲಾವಂಗಲ್ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಿದೆ.ಸೆಕ್ಷನ್ 144 (ಅಪರಾಧ ದಂಡಸಂಹಿತೆ) ಕಾಯ್ದೆ ಪ್ರಕಾರ ನಾಲ್ಕು ಪ್ರದೇಶಗಳಲ್ಲಿ ನಾಲ್ಕು ಜನರಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ. ನಿನ್ನೆಯಷ್ಟೇ...
ಸುದ್ದಿ

ಬೈಕ್ ತೊಳಯಲು ಹೋಗಿದ್ದ ಮೂವರು ಯುವಕರು ನೀರುಪಾಲು – ಕಹಳೆ ನ್ಯೂಸ್

ಚಿಕ್ಕಮಗಳೂರು: ಆಯುಧ ಪೂಜೆಯಂದು ಹುಲಿತಿಮ್ಮಾಪುರದಲ್ಲಿ ಸೂತಿಕ ಛಾಯೆ ಆವರಿಸಿಕೊಂಡಿದೆ.ದೇಶದಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದ್ದು, 9 ನೇ ದಿನದ ಆಯುಧ ಪೂಜೆಯ ಸಡಗರದಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರದಲ್ಲಿ ಕರಾಳ ಘಟನೆ ನಡೆದಿದೆ. ಆಯುದ ಪೂಜೆಗೆ ಕೆರೆಯ ಸಮೀಪ ಬೈಕ್ ತೊಳಯಲು ಹೋಗಿದ್ದ ಮೂವರು ಯುವಕರು ಸಾವನಪ್ಪಿದ್ದಾರೆ.ಮೃತರು 18 ವರುಷದ ಹೇಮಂತ್ 21 ವರ್ಷದ ವಿಜಯ್ ಹಾಗೂ 14 ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ. ಮೂವರಿಗೂ ಈಜು ಬರದ...
1 1,331 1,332 1,333 1,334 1,335 1,459
Page 1333 of 1459