Wednesday, June 10, 2026

archivekahale news

ಸುದ್ದಿ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗೆ ಅಭಿನಂದನಾ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಬಿಜೆಪಿ ಸಜೀಪಮುನ್ನೂರು ಮತ್ತು ಸಜೀಪಮೂಡ ಗ್ರಾಮ ಸಮಿತಿ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿ, ಪರಿಚಯವಿಲ್ಲದ ತನ್ನನ್ನು ಬಂಟ್ವಾಳ ಕ್ಷೇತ್ರದಲ್ಲಿ ಗೆಲ್ಲುವಂತೆ ಶ್ರಮಿಸಿದ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ...
ಸುದ್ದಿ

ಮೋದಿ ಅತೀ ಹೆಚ್ಚು ವಿಶ್ವಾಸವನ್ನಿರಿಸಬಹುದಾದ ಗೆಳೆಯರಲ್ಲಿ ಒಬ್ಬರು: ಜಪಾನ್‍ ಪ್ರಧಾನಿ – ಕಹಳೆ ನ್ಯೂಸ್

ದೆಹಲಿ: ಭಾರತದ ಪ್ರಧಾನ ಮಂತ್ರಿ ಜಾಪಾನ್‍ಗೆ ಭೇಟಿ ನೀಡಿದ್ದು ಈ ವೇಳೆಯಲ್ಲಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ದಾರೆ. ಮೋದಿ ಅತೀ ಹೆಚ್ಚು ವಿಶ್ವಾಸವನ್ನಿರಿಸಬಹುದಾದ ಗೆಳೆಯರಲ್ಲಿ ಒಬ್ಬರು ಎಂದು ಪ್ರಧಾನಿ ಶಿಂರೊ ಅಬೆ ರವಿವಾರ ಅಭಿಪ್ರಾಯಿಸಿದ್ದಾರೆ. ಮುಕ್ತ ಮತ್ತು ತೆರೆದ ಇಂಡೊ-ಪೆಸಿಫಿಕ್ ಅನ್ನು ಸೃಷ್ಟಿಸುವ ಸಲುವಾಗಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಇಂಗಿತವನ್ನು ಅಬೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ಶಕ್ತಿಯಾಗಿ ಭಾರತ ಇಡೀ ಪ್ರದೇಶವನ್ನು ಮತ್ತು ಜಗತ್ತಿನ ಸಮೃದ್ಧಿಯನ್ನು ಮುನ್ನಡೆಸುತ್ತಿದೆ. ಪ್ರಧಾನಿ ಮೋದಿ ಒಂದು...
ಸುದ್ದಿ

ಆಪರೇಷನ್‌ಗೆ ಒಳಗಾಗಿ ಕರ್ನಾಟಕದಲ್ಲಿ ಕಮಲ ಕೋಮಾದಲ್ಲಿದೆ: ಸಿದ್ದರಾಮಯ್ಯ ಟ್ವೀಟ್ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಮತ್ತು ಬಿಜೆಪಿ ನಡುವಣ ಆಗಾಗ ಚರ್ಚೆಯಾಗ್ತಾ ಇದ್ದು ಒಂದರ ಮೇಲೆ ಒಂದು ವಾಕ್ ಅಸ್ತ್ರಗಳನ್ನು ಪ್ರಯೋಗಿಸ್ತಾ ಇದ್ದಾರೆ. ಈಗಾಗಲೇ ಹಲವಾರು ಬಾರಿ ಆಪರೇಷನ್‌ಗೆ ಒಳಗಾಗಿ ಕರ್ನಾಟಕದಲ್ಲಿ ಕಮಲ ಕೋಮಾದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಲೇವಡಿ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಸರಕಾರ ಬೀಳುತ್ತೆ ಎಂಬ...
ಸುದ್ದಿ

ವಿಜಯ್ ಪತ್ನಿ ನಾಗರತ್ನ ವಿರುದ್ಧ ಎರಡನೇ ಪತ್ನಿಯಿಂದ ದೂರು ದಾಖಲು – ಕಹಳೆ ನ್ಯೂಸ್

ಬೆಂಗಳೂರು: ದುನಿಯಾ ವಿಜಯ್ ಪತ್ನಿಯರು ದಿನಕ್ಕೊಂದರಂತೆ ಜಗಳ ಮಾಡುತ್ತಿದ್ದು ಈಗ ಮೊದಲ ಪತ್ನಿ ನಾಗರತ್ನ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ, ನಾಗರತ್ನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದುನಿಯಾ ವಿಜಿ ಜೈಲಿನಲ್ಲಿದ್ದಾಗ ನಾಗರತ್ನ ಅವರು ಕೀರ್ತಿಗೌಡರ ಮನೆಗೆ ಬಂದು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಕೀರ್ತಿಗೌಡರ ಆರೋಪ. ಹಾಗೇ ಅತ್ತೆ - ಮಾವರ...
ಕ್ರೀಡೆಸುದ್ದಿ

ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯವನ್ನಾಡಲಿರುವ ಭಾರತ – ಕಹಳೆ ನ್ಯೂಸ್

ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಇಂದು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ನಾಲ್ಕನೇ ಏಕದಿನ ಪಂದ್ಯವನ್ನಾಡಲಿದೆ. ವೆಸ್ಟ್ ಇಂಡೀಸ್ ವಿರುದ್ದದ 3 ನೇ ಪಂದ್ಯದಲ್ಲಿ ಭಾರತ ತಂಡ ಅನಿರೀಕ್ಷಿತ ಆಘಾತ ಎದುರಿಸಿತು. ಇದರಿಂದ 1-1 ರಿಂದ ಸಮಬಲದಲ್ಲಿರುವ ಭಾರತ, ಬ್ಯಾಟಿಂಗ್ ವಿಭಾಗದ ಸದೃಢತೆಯೊಂದಿಗೆ 5 ಪಂದ್ಯಗಳ ಸರಣಿಯನ್ನು ವಶಪಡಿಸಿಕೊಳ್ಳುವ ಆಸೆಯನ್ನು ಜೀವಂತವಾಗಿಸಿಕೊಳ್ಳಲು ಗೆಲ್ಲಲೇಬೇಕಾಗಿದೆ. ವಿಂಡೀಸ್ ತಂಡ ಈಗ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಸದೃಢಗೊಂಡಿದೆ. ಇನ್ನೂ ಧೋನಿ...
ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್ – ಕಹಳೆ ನ್ಯೂಸ್

ದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವಾರು ತಕರಾರು ವಾದಗಳು ಸೃಷ್ಟಿಯಾಗ್ತಾ ಇದ್ದು, ಸಾಮರಸ್ಯದ ಸ್ಥಳವಾಗಬೇಕಾಗಿದ್ದ ಜಗಳದ ಗೂಡಾಗಿದೆ. ಈ ಹಿನ್ನಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. 2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ....
ಸುದ್ದಿ

ನೇರ ಹಣ ವರ್ಗಾವಣೆ ಮಾಡಲು ಆಧಾರ್ ಇ-ಕೆವೈಸಿ ಬಳಸುವಂತೆ ಬ್ಯಾಂಕ್ ಗಳಿಗೆ ಸೂಚನೆ – ಕಹಳೆ ನ್ಯೂಸ್

ಬೆಂಗಳೂರು: ಸರ್ಕಾರದ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು ಆಧಾರ್ ಇ-ಕೆವೈಸಿ ಬಳಸುವಂತೆ ಬ್ಯಾಂಕ್ ಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಹೇಳಿದೆ. ಸರ್ಕಾರದ ಕಲ್ಯಾಣ ಯೋಜನೆಗಳನ್ನು ಹೊರತುಪಡಿಸಿ ಇತರೆ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದ ನಂತರ ಬ್ಯಾಂಕ್ ಗಳು ಕಾನೂನು ಸಲಹೆ ಕೇಳಿ ಯುಐಡಿಎಐಗೆ ಪತ್ರ ಬರೆದಿದ್ದವು. ಈ ಸಂಬಂಧ ಕಳೆದ ವಾರ...
ಸುದ್ದಿ

ಎಟಿಎಂಗಳಿಗೂ ಕ್ಯೂಆರ್ ಕೋಡ್ ಅಳವಡಿಸಲು ಸಿದ್ದತೆ – ಕಹಳೆ ನ್ಯೂಸ್

ದೆಹಲಿ: ದೇಶದಲ್ಲಿ ನೋಟ್ ಬ್ಯಾನ್ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲೀಕರಣದ ಯುಗ ಆರಂಭವಾಯಿತು ಎಂದರೆ ತಪ್ಪಿಲ್ಲ. ಡಿಜಿಟಲ್ ಕ್ರಾಂತಿಯ ಮುಂದುವರಿದ ಭಾಗವಾಗಿ ಎಟಿಎಂಗಳಿಗೂ ಕ್ಯೂಆರ್ ಕೋಡ್ ಅಳವಡಿಸಲು ಸಿದ್ದತೆ ನಡೆದಿದೆ. ಇಷ್ಟು ದಿನ ಎಟಿಎಂಗಳಿಂದ ಹಣ ಬಿಡಿಸಲು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಎಟಿಎಂ ಯಂತ್ರಗಳಲ್ಲಿ ಸ್ವೈಪ್ ಮಾಡಿ ಹಣ ಬಿಡಿಸಬೇಕಿತ್ತು. ಆದರೆ ಇದೀಗ ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ಬಿಡಿಸಿಕೊಳ್ಳುವ ತಂತ್ರಾಂಶ...
1 1,312 1,313 1,314 1,315 1,316 1,459
Page 1314 of 1459