Wednesday, June 10, 2026

archivekahale news

ರಾಜಕೀಯಸುದ್ದಿ

ಮಲೆನಾಡಿಗೆ ಎಂಟ್ರಿ: ಕುಮಾರ ಪರ್ವಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ನಡುವಿನ ಕದನ ಎಂದೇ ಬಿಂಬಿಸಲಾಗುತ್ತಿದೆ. ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪ್ರಚಾರದ ನಿಮಿತ್ತ ಮಲೆನಾಡಿಗೆ ಎಂಟ್ರಿ ಕೊಟ್ಟಿದ್ದು ಕುಮಾರ ಪರ್ವಕ್ಕೆ ಚಾಲನೆ ನೀಡಿದ್ದಾರೆ. ಬಿಜೆಪಿ 2ನೇ ಸುತ್ತಿನ ಪ್ರಚಾರ ಮುಗಿಸಿದರೂ ಕಾಂಗ್ರೆಸ್-ಜೆಡಿಎಸ್ ಇನ್ನೂ ನಾಯಕರ ಮಟ್ಟದ ಪ್ರಚಾರ,ಸಭೆಗೆ ಮಾತ್ರ ಸೀಮಿತವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಹೆಸರು ಇನ್ನು...
ಸುದ್ದಿ

ಏಕಾಏಕಿ ಏರಿಕೆಯಾದ ಕೋಳಿ ಮಾಂಸದ ಬೆಲೆ – ಕಹಳೆ ನ್ಯೂಸ್

ಕಳೆದ ಮೂರ್ನಾಲ್ಕು ದಿನಗಳಲ್ಲಿ ಕೋಳಿ ಮಾಂಸದ ಬೆಲೆ ಏಕಾಏಕಿ ಪ್ರತಿ ಕೆಜಿಗೆ 30 ರಿಂದ 40 ರೂ. ಹೆಚ್ಚಾಗಿದ್ದು, ಕೋಳಿ ಮಾಂಸ ಪ್ರಿಯರು ಖರೀದಿ ಮಾಡಲು ಹಿಂದೇಟು ಹಾಕುವಂತಾಗಿದೆ. ಕಳೆದ ವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾಂಸದ ಬ್ರಾಯ್ಲರ್ ಕೋಳಿ ಕೆ.ಜಿಗೆ 120 ರೂ. ಫಾರಂ ಕೋಳಿ ಕೆಜಿಗೆ 115 ರಿಂದ 125 ರೂ. ನಾಟಿ ಕೋಳಿ ಕೆಜಿಗೆ 350, ಗೆ ಇತ್ತು. ಆದರೆ ಇದೀಗ ಪ್ರತಿ ಕೆಜಿಗೆ 40 ರಿಂದ...
ಸುದ್ದಿ

ವನ್ಯಜೀವಿಗಳ ಬೇಟೆ: ಅರಣ್ಯಾಧಿಕಾರಿಗಳಿಂದ ಬೇಟೇಗಾರರ ಬಂಧನ – ಕಹಳೆ ನ್ಯೂಸ್

ಉತ್ತರ ಕನ್ನಡ: ಜಿಲ್ಲೆಯ ಅರಣ್ಯದಲ್ಲಿ ವನ್ಯಜೀವಿ ಬೇಟೆಯಾಡಿ ಅವುಗಳ ಚರ್ಮ, ಮಾಂಸವನ್ನು ಮಾರಾಟ ಮಾಡುತಿದ್ದ ಆರು ಜನ ಕುಮಟಾ ಮೂಲದ ವನ್ಯಜೀವಿ ಕಳ್ಳ ಬೇಟೇಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ತಿಂಗಳ 3 ನೇ ತಾರೀಕಿನಂದು ಕುಮಟಾ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿ ಚಿರತೆ ಚರ್ಮ ಹಾಗೂ ಉಗುರುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈತನ ಮಾಹಿತಿ ಆಧಾರದಲ್ಲಿ ನಿನ್ನೆ ಅಂಕೋಲದಲ್ಲಿ ಅಭಿಷೇಕ್ ದಿನಕರ್ ನಾಯಕ್ ಎಂಬುವವನನ್ನು ಕುಮಟಾ...
ಸುದ್ದಿ

ಕ್ಯಾಟ್ ವಾಕ್ ಶೋ: ಮಾಡೆಲ್‌ಗಳಿಗೆ ತೊಂದರೆ ಕೊಟ್ಟ ಬೆಕ್ಕು – ಕಹಳೆ ನ್ಯೂಸ್

ಕ್ಯಾಟ್ ವಾಕ್ ಗೆ ಬೆಕ್ಕೇ ಕಂಟಕವಾದ ಸ್ವಾರಸ್ಯಕರ ಘಟನೆ ಇದು. ಬೆಕ್ಕಿನ ಹಾಗೆ ವೈಯ್ಯಾರದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಯಾಟ್ ವಾಕ್ ಎನ್ನುತ್ತೇವೆ. ಆದರಿಲ್ಲಿ ನಿಜವಾಗಿಯೂ ಕ್ಯಾಟ್ ವಾಕ್ ಶೋನಲ್ಲಿ ಬೆಕ್ಕು ಅಡ್ಡ ಬಂದು ತೊಂದರೆ ಕೊಡುತ್ತಾ ಕುಳಿತಿತ್ತು. ಇಸ್ತಾನ್ ಬುಲ್ ನಲ್ಲಿ ನಡೆದ ಫ್ಯಾಶನ್ ಶೋನಲ್ಲೇ ಬೆಕ್ಕು ಅಟಕಾಯಿಸಿಕೊಂಡಿದ್ದು, ಅತ್ತ ಮಾಡೆಲ್‌ಗಳು ರಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ, ಬೆಕ್ಕು ಸಹ ಮಧ್ಯೆ ಮಧ್ಯೆ ಅಡ್ಡ ಬಂದು ತೊಂದರೆ ಕೊಡುತ್ತಿತ್ತು. ಕೊನೆಗೆ...
ಸುದ್ದಿ

ಹೊಸ ವಿವಾದಕ್ಕೆ ಕಾರಣವಾದ ಅಮಿತ್ ಶಾ ಹೇಳಿಕೆ – ಕಹಳೆ ನ್ಯೂಸ್

ದೆಹಲಿ: ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡುವ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಭಕ್ತರಿಂದ ನಡೆಯುತ್ತಿರುವ ಪ್ರತಿಭಟನೆ ಪರವಾಗಿ ಬಿಜೆಪಿ ಬಂಡೆಕಲ್ಲಿನಂತೆ ನಿಲ್ಲಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. "ದೇಶದ ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ಬಗ್ಗೆ ಆರೆಸ್ಸೆಸ್-ಬಿಜೆಪಿಗೆ ಗೌರವ ಇಲ್ಲ ಎನ್ನುವುದನ್ನು ಇದು ಸಾಬೀತುಪಡಿಸಿದೆ" ಎಂದು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ....
ಸುದ್ದಿ

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದೂಡಿಕೆ – ಕಹಳೆ ನ್ಯೂಸ್

ಬೆಂಗಳೂರು: ಬಹು ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದರೂ ಇದೀಗ ಮತ್ತೊಮ್ಮೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದರಿಂದಾಗಿ 2017 ರ ನವೆಂಬರ್ ನಿಂದ ಈವರೆಗೆ ಒಟ್ಟು ಆರು ಬಾರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಮುಂದೂಡಿದಂತಾಗಿದ್ದು, ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವರ್ಗಾವಣೆಗೆ ಅನುಸರಿಸಬೇಕಾದ ಮಾನದಂಡಗಳ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಯಾವುದೇ ಸ್ಪಷ್ಟತೆ ಹೊಂದಿಲ್ಲದಿರುವುದು, ಸಾಫ್ಟ್ವೇರ್‌ನಲ್ಲಿನ ದೋಷ ಸೇರಿದಂತೆ...
ಸುದ್ದಿ

ಶಾಂತಿಯುತ ಮುಕ್ತಾಯ ಹೊಂದಿದ ಸಂಗಬೆಟ್ಟು ತಾಲೂಕು ಪಂಚಾಯತ್‌ ಉಪ ಚುನಾವಣೆ – ಕಹಳೆ ನ್ಯೂಸ್

ಬಂಟ್ವಾಳ: ವಿವಿಧ ಕಾರಣಗಳಿಂದ ತೆರವಾಗಿದ್ದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಂಗಬೆಟ್ಟು ತಾಲೂಕು ಪಂಚಾಯತ್‌ನ ಉಪ ಚುನಾವಣೆ ಮತದಾನದ ಪ್ರಕ್ರಿಯೆಯು ಮುಕ್ತಾಯವಾಗಿದ್ದು, ಶೇ. 73.14ರಷ್ಟು ಮತದಾನವಾಗಿದೆ. ಉಪುಚುನಾವಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಂತಿಯುತವಾಗಿತ್ತು. ಬೆಳಿಗ್ಗೆ 10:30 ಕ್ಕೆ ಸುಮಾರಿಗೆ ಶೇ. 25ರಷ್ಟು ಮತದಾನವಾಗಿದ್ದು, ಹಲವು ಶುಭ ಕಾರ್ಯಕ್ರಮಗಳಿದ್ದ ಕಾರಣ ಮಧ್ಯಾಹ್ನದವರೆಗೆ ಮತದಾನ ವಿರಳವಾಗಿತ್ತು. ಒಟ್ಟು 10 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಒಟ್ಟು 6840 ಮತದಾರರಿದ್ದು 3293 ಗಂಡಸರು, 3547 ಹೆಂಗಸರು...
ಸಿನಿಮಾಸುದ್ದಿ

ರಜನೀಕಾಂತ್ ಮುಖ್ಯ ಭೂಮಿಕೆಯ 2.0 ಚಿತ್ರ ನವೆಂಬರ್ 29 ರಂದು ತೆರೆಗೆ – ಕಹಳೆ ನ್ಯೂಸ್

ಬೆಂಗಳೂರು: ಬಹು ನಿರೀಕ್ಷಿತ ರಜನೀಕಾಂತ್ ಮುಖ್ಯ ಭೂಮಿಕೆಯ 2.0 ಚಿತ್ರ ತೆರೆ ಮೇಲೆ ಅಪ್ಪಳಿಸುವ ದಿನಾಂಕ ನಿಶ್ಚಯವಾಗಿದೆ. ನವೆಂಬರ್ 29 ರಂದು ಪ್ರೇಕ್ಷಕರ ಮುಂದೆ ಬರುವ ಚಿತ್ರದ ಬಜೆಟ್ ಬಗ್ಗೆ ಸಾಕಷ್ಟು ಊಹಾಪೋಹ ಚರ್ಚೆಗಳು ನಡೆದಿವೆ. ಈ ಚಿತ್ರಕ್ಕೆ ಸಂಬಂಧಪಟ್ಟವರೇ ಈ ಸಂಗತಿಯನ್ನು ಬಹಿರಂಗಪಡಿಸಿದ್ದು, ಸರಿ ಸುಮಾರು 500 ಕೋಟಿ ವೆಚ್ಚದಲ್ಲಿ ಚಿತ್ರ ತಯಾರಾಗಿದೆ ಎಂದು ಹೇಳಿದ್ದಾರೆ. 2.0 ಚಿತ್ರದ ವಿಎಫ್‌ಎಕ್ಸ್ ಸರಿ ಬಾರದ ಕಾರಣ ಮತ್ತೆ ಆ ಕೆಲಸ...
1 1,311 1,312 1,313 1,314 1,315 1,459
Page 1313 of 1459