ಭೂಮಿ ಮತ್ತು ಕೈಗಾರಿಕೆಗಳು ರಾಷ್ಟ್ರೀಕರಣ ಮಾಡುವುದು ಅಂಬೇಡ್ಕರ್ ರವರ ಕನಸಾಗಿತ್ತು ; ಡಾ.ಅನಿಲ್ ಕುಮಾರ್ ಆವುಲಪ್ಪ-ಕಹಳೆ ನ್ಯೂಸ್
ಬಾಗೇಪಲ್ಲಿ : ಇಂದು ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ಪಟ್ಟಣದ ಸುಂದರಯ್ಯ ಭವನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್ಐ ನ ಜಿಲ್ಲಾ ಸಂಚಾಲಕ ಡಾ.ಅನಿಲ್ ಕುಮಾರ್ ರವರು ಡಾ.ಅಂಬೇಡ್ಕರ್ ದೂರದೃಷ್ಟಿತ್ವದ ಮಹಾನಾಯಕ, ಅವರು ಪ್ರಜಾಪ್ರಭುತ್ವ ಭಾರತವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲು ಸಂವಿಧಾನವನ್ನು ರಚಿಸುವಲ್ಲಿ ಪ್ರಧಾನವಾದ ಪಾತ್ರ ವಹಿಸಿದರು. ಇಂತಹವರ ಬಾಲ್ಯವೂ ಹಲವಾರು ಅಹಿತಕರ ಅನುಭವಗಳ ಪಯಣವಾಗಿತ್ತು. ಎಲ್ಲವನ್ನು ಮೀರಿ ಜಗದ್ವಿಖ್ಯಾತ ಪಡೆದರು. ಇವರ...







