‘ ತಾಯಿ ಭಾರತಿ ‘ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 33
ತಾಯೆ ಬಾರೆ ಮೊಗವ ತೋರೆ ಭವ್ಯ ಭಾರತಿ| ಇಡಿಯ ಜಗಕೆ ವಿಶ್ವ ಗುರುವು ದಿವ್ಯ ಸಂಸ್ಕೃತಿ|| ಜಾತಿ ಮತದ ಭೇಧಭಾವ ಇರದ ಮಾತೆಯೆ| ಮಕ್ಕಳೆಲ್ಲ ಸರಿಸಮಾನ ಅದೆಂಥ ಮಮತೆಯೆ|| ಸಪ್ತಸಾಗರದೊಡತಿ ನೀನು ಸುಪ್ತ ಜಗದೊಳು| ಸಪ್ತಮಾತೃಕೆಯಂತೆ ಇಹರು ಗುಪ್ತಗಾಮಿನಿಯರು|| ಅಂಗವಂಗ ನಂದ ಕದಂಬ ಚಾಲುಕ್ಯರಧಿಪತಿ| ಸೂರ್ಯವಂಶ ಚಂದ್ರ ವಂಶಕೆ ಕಲಶಕೀರುತಿ|| ಕಂಗು ತೆಂಗು ತಾಳೆ ಬಾಳೆ ಮರುಗ ಮಲ್ಲಗೆ| ಅತ್ತಿ ಇತ್ತಿ ಬಿಲ್ಪ ಪತ್ರೆ ಕೃಷ್ಣ ತುಳಸಿ ಸಂಪಿಗೆ|| ತಿಳಿಗೊಳದಾ...







