Wednesday, June 17, 2026

ರಾಷ್ಟ್ರೀಯ

ದೆಹಲಿಬೆಂಗಳೂರುರಾಜ್ಯರಾಷ್ಟ್ರೀಯಸುದ್ದಿ

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ :ಮೃತರ ಕುಟುಂಬಕ್ಕೆ 2 ಲಕ್ಷ: ಮೋದಿ ಸಂತಾಪ – ಕಹಳೆ ನ್ಯೂಸ್

ನವದೆಹಲಿ/ಬೆಂಗಳೂರು: ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತರ ಕುಟುಂಬದವರಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (PNRF) 2 ಲಕ್ಷ ರೂ. ತಾತ್ಕಾಲಿಕ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಪ್ರಧಾನಿ ಮೋದಿ ಹೇಳಿದ್ದಾರೆ. ಈಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿದೆ ಎಂದು ತಿಳಿದು ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ...
ದೆಹಲಿರಾಜ್ಯರಾಷ್ಟ್ರೀಯಶುಭಾಶಯಸುದ್ದಿ

ದೆಹಲಿಯ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥಿಸಿದ ಮೋದಿ – ಕಹಳೆ ನ್ಯೂಸ್

ನವದೆಹಲಿ: ಕ್ರಿಸ್ಮಸ್‌ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆ ದೆಹಲಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್‌ ಭೇಟಿ ನೀಡಿ ಪ್ರಾರ್ಥನೆ ಮಾಡಿದರು. ದೆಹಲಿಯ ಬಿಷಪ್ ರೆವರೆಂಡ್ ಡಾ. ಪಾಲ್ ಸ್ವರೂಪ್ ಅವರು ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಮೋದಿ ಭೇಟಿಯ ಸಂದರ್ಭದಲ್ಲಿ ದೆಹಲಿ ಮತ್ತು ಉತ್ತರ ಭಾರತದ ಹಲವು ಕ್ರಿಶ್ಚಿಯನ್‌ ಬಾಂಧವರು ಭಾಗಿಯಾಗಿದ್ದರು. ಭೇಟಿಯ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಮೋದಿ, ದೆಹಲಿಯ ಕ್ಯಾಥೆಡ್ರಲ್...
ಬೆಂಗಳೂರುರಾಜ್ಯಸುದ್ದಿ

ಬೆಂಗಳೂರಿನ ಮಹಿಳೆಯಿಂದ ಅಯೋಧ್ಯೆಗೆ ₹2.5 ಕೋಟಿ ಬೆಲೆಯ ಶ್ರೀರಾಮನ ಚಿನ್ನದ ಕಲಾಕೃತಿ ಅರ್ಪಣೆ – ಕಹಳೆ ನ್ಯೂಸ್

ಬೆಂಗಳೂರಿನ ಮಹಿಳೆಯೊಬ್ಬರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭವ್ಯವಾದ ಬಾಲ ರಾಮನ ಕಲಾಕೃತಿಯನ್ನು ಅರ್ಪಿಸಿದ್ದಾರೆ. ಅಯೋಧ್ಯೆಯ ರಾಮಲಲ್ಲಾ ದೇವಾಲಯ ಆವರಣದಲ್ಲಿ ಚಿನ್ನ, ಬೆಳ್ಳಿ ಮತ್ತು ವಜ್ರಗಳಿಂದ ಕೂಡಿದ ಈ ಭವ್ಯವಾದ ಪ್ರತಿಮೆಯ ಪ್ರತಿಷ್ಠಾಪನೆ ನೆರವೇರಲಿದೆ. ವಜ್ರಗಳು, ಪಚ್ಚೆಗಳು ಮತ್ತು ಇತರ ಅಮೂಲ್ಯ ರತ್ನಗಳಿಂದ ಕೂಡಿದ 12 ಅಡಿ ಎತ್ತರ 8 ಅಡಿ ಅಗಲ ಅಳತೆ ಮತ್ತು ಸುಮಾರು 800 ಕಿಲೋಗ್ರಾಂಗಳಷ್ಟು ತೂಕದ ಈ ಪ್ರತಿಮೆ ಕರ್ನಾಟಕದಿಂದ ಅಯೋಧ್ಯೆ ತಲುಪಿದೆ. ಇದರ ಅಂದಾಜು...
ಬೆಂಗಳೂರುರಾಜ್ಯಸುದ್ದಿ

ಡಿವೋರ್ಸ್ ಕೊಟ್ಟಿದ್ದಕ್ಕೆ ಪತ್ನಿಯನ್ನು ನಡುರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆಗೈದ ಪತಿ.-ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಡಿವೋರ್ಸ್ ಕೊಟ್ಟಿದ್ದಕ್ಕೆ ಪತ್ನಿಯನ್ನು ಪತಿ ನಡುರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ. ಬೆಂಗಳೂರಿನ ಬಸವೇಶ್ವರನಗರದ ವೇಸ್ಟಿನ್ ಹೋಟೆಲ್ ಬಳಿ ಈ ಘಟನೆ ನಡೆದಿದೆ.ಬಾಲಮುರುಗನ್ ಪತ್ನಿ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆಂದು ಶಂಕಿಸಿದ ಪತಿ ಆಕೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದನು. ಆದ್ದರಿಂದ ಪತ್ನಿ ಡಿವೋರ್ಸ್ ಕೊಟ್ಟಿದ್ದಾಳೆ. ಇದರಿಂದ ರೊಚ್ಚಿಗೆದ್ದ ಪತಿ ನಡುರಸ್ತೆಯಲ್ಲೇ ಏಕಾಏಕಿ ಗನ್ ತೆಗೆದು ಪತ್ನಿಯ...
ರಾಜ್ಯರಾಷ್ಟ್ರೀಯಸುದ್ದಿ

 ಇಸ್ರೋದ ‘ಬ್ಲೂಬರ್ಡ್ ಬ್ಲಾಕ್-2’ ಉಪಗ್ರಹ ಯಶಸ್ವಿ ಉಡಾವಣೆ -ಕಹಳೆ ನ್ಯೂಸ್

ಶ್ರೀಹರಿಕೋಟಾ: ಇಸ್ರೋದ ಅತ್ಯಂತ ಭಾರದ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬ್ಲೂಬರ್ಡ್‌-2 ಉಪಗ್ರಹವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ(ಡಿ24) ಬೆಳಗ್ಗೆ 8.45ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿ ಕಕ್ಷೆಗೆ ಸೇರಿಸಲಾಗಿದೆ. ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ಬೇರ್ಪಡಿಸಿ ಕಕ್ಷೆಯಲ್ಲಿ ಇರಿಸಲಾಗಿದೆ. ಇದರೊಂದಿಗೆ, ಈ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಕಾರ್ಯಾಚರಣಾ ಹಾರಾಟವು ಇಸ್ರೋದ 101 ನೇ ಕಕ್ಷೆಯ ಯಶಸ್ಸನ್ನು ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮೂಲಕ ವಾಣಿಜ್ಯ ಕ್ರಾಂತಿಗೆ ಸಾಕ್ಷಿಯಾಗಿದೆ. 'LVM3-M6...
ದೆಹಲಿರಾಜ್ಯಸುದ್ದಿ

ಬೆಂಗಳೂರು & ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಆರಂಭಕ್ಕೆ ಹೆಚ್‌.ಡಿ.ಕುಮಾರಸ್ವಾಮಿ ಮನವಿ – ಕಹಳೆ ನ್ಯೂಸ್

ನವದೆಹಲಿ : ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್ ಪ್ರೆಸ್‌‍ ರೈಲು ಸೇವೆ ಆರಂಭಿಸುವಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ ಅವರು; ಬೆಂಗಳೂರು ನಗರದಿಂದ ಹಾಸನ- ಮಂಗಳೂರು...
ಬೆಂಗಳೂರುರಾಜ್ಯಸುದ್ದಿ

ಬ್ರೆಡ್‌ನಲ್ಲಿಟ್ಟು ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ ನೈಜೀರಿಯಾ ಮಹಿಳೆ ಬಂಧನ – ಕಹಳೆ ನ್ಯೂಸ್

ಬೆಂಗಳೂರು :  ಬ್ರೆಡ್‌ ಒಳಗೆ ಮಾದಕ ವಸ್ತುವನ್ನು ಪ್ಯಾಕ್‌ಮಾಡಿ ಯಾರಿಗೂ ಅನುಮಾನ ಬಾರದಂತೆ ಮುಂಬೈನಿಂದ ಸಾಗಣೆ ಮಾಡಿಕೊಂಡು ಖಾಸಗಿ ಟ್ರಾವೆಲ್ಸ್ ಬಸ್‌‍ನಲ್ಲಿ ನಗರಕ್ಕೆ ಬಂದಿದ್ದ ನೈಜೀರಿಯಾ ದೇಶದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 1.20 ಕೋಟಿ ರೂ. ಮೌಲ್ಯದ ಕೊಕೇನ್‌ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾದ ಓಲಜೈಡ್‌ ಎಸ್ತರ್‌ ಇಯಾನುವೊಲುವಾ (29) ಬಂಧಿತ ಮಹಿಳೆ. 2024 ರಲ್ಲಿ ದೆಹಲಿಯ ಯೂನಿವರ್ಸಿಟಿಯೊಂದರಲ್ಲಿ ವ್ಯಾಸಂಗ ಮಾಡುವುದಾಗಿ ವಿದ್ಯಾರ್ಥಿ ವೀಸಾ ಪಡೆದು ದೆಹಲಿಗೆ ಬಂದಿರುವ ಈ ಮಹಿಳೆ,...
ಬೆಂಗಳೂರುರಾಜ್ಯಸುದ್ದಿ

21 ದಿನದೊಳಗೆ ಉಚಿತವಾಗಿ ಜನನ-ಮರಣ ಪ್ರಮಾಣ ಪತ್ರ ನೀಡಿ : ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರ ಆದೇಶ.!- ಕಹಳೆ ನ್ಯೂಸ್

ಬೆಂಗಳೂರು : 21 ದಿನದೊಳಗೆ ಉಚಿತವಾಗಿ ಜನನ-ಮರಣ ಪ್ರಮಾಣ ಪತ್ರ ನೀಡುವುದು ಕಡ್ಡಾಯ ಎಂದು ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಜನನ ಹಾಗೂ ಮರಣ ಘಟನೆಗಳನ್ನು 21 ದಿನಗಳೊಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿ ಉಚಿತ ಪ್ರಮಾಣ ಪತ್ರವನ್ನು ನೀಡುವ ಕುರಿತು ಸರ್ಕಾರ ಆದೇಶಿಸಿದೆ. 2025ನೇ ಸಾಲಿನಲ್ಲಿ ರಾಜ್ಯದಲ್ಲಿ (ದಿನಾಂಕ: 28/11/2025 ರವರೆಗೆ) ನೋಂದಣಿಯಾಗಿರುವ ಜನನ ಮತ್ತು ಮರಣ ಘಟನೆಗಳ ಶೇಕಡವಾರು ವಿವರಗಳು...
1 46 47 48 49 50 346
Page 48 of 346