ಸಿದ್ದರಾಮಯ್ಯ ಮುಸ್ಲಿಮರ ಓಲೈಕೆ ಈ ಮಟ್ಟಕ್ಕೆ ಮಾಡುತ್ತಿರೋದು ಅತಿರೇಕ ಆಗ್ತಿದೆ – ಯತ್ನಾಳ್ -ಕಹಳೆ ನ್ಯೂಸ್
ವಿಜಯಪುರ: ಮುಸ್ಲಿಮರ ಓಲೈಕೆ ಈ ಮಟ್ಟಕ್ಕೆ ಮಾಡುತ್ತಿರುವುದು ತಪ್ಪು, ಸಿದ್ದರಾಮಯ್ಯ ಅವರದ್ದು ಅತಿರೇಕ ಆಯ್ತು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರದ್ದು ಅತಿರೇಕ ಆಯ್ತು. ಮುಸ್ಲಿಮರ ಓಲೈಕೆ ಈ ಮಟ್ಟಕ್ಕೆ ಮಾಡುತ್ತಿರುವುದು ತಪ್ಪು. ಮಾಜಿ ಸಂಸದರ ಮೇಲೆ ಕಲ್ಲು ತೂರಾಟ ಮಾಡಿದವರು, ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಗಲಾಟೆ ಮಾಡಿದವರು, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ...







