ರಾಜ್ಯ ಹೆದ್ದಾರಿಯಲ್ಲಿ ಅಗಲಕ್ಕೆ ಹನ್ನೆರಡು ಫೀಟ್ ಆಳಕ್ಕೆ ಮೂರು ಫೀಟ್ ಹೊಂಡ : ವಾಹನ ಸವಾರರೇ ಟೇಪ್ ಹಿಡಿದು ಅಳತೆ – ಕಹಳೆ ನ್ಯೂಸ್
ಕುಕ್ಕೆಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ರಾಜ್ಯ ರಸ್ತೆ ಕುಮಾರಧಾರ ಸೇತುವೆಯಿಂದ ಕೈಕಂಬವರೆಗೆ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ಎಂತ ಪರಿಣತಿ ಪಡೆದ ಚಾಲಕನಿಗೂ ಈ ಹೊಂಡ ತಪ್ಪಿಸಲು ಸಾಧ್ಯವೇ ಇಲ್ಲ ಅಂತ ಹೊಂಡಗಳು ಸೃಷ್ಟಿಯಾಗಿದೆ. ಬೆಂಗಳೂರು, ಧರ್ಮಸ್ಥಳ, ಉಪ್ಪಿನಂಗಡಿ ಕಡೆಯಿಂದ ಕುಕ್ಕೆಗೆ ಬರುವ ಭಕ್ತರು,ಸಾರ್ವಜನಿಕರು,ಇದೆ ರಸ್ತೆಯಲ್ಲಿ ತಮ್ಮ ವಾಹನಗಳನ್ನು ಹರಿಸಿ ಕೊಂಡೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಅಧಿಕಾರಿಗಳು ಇದೆ ರಸ್ತೆಯಲ್ಲಿ ಸಂಚಾರಿಸುತ್ತಾರೆ,ಪಾಪ ಹೊಂಡ ಇದೆ ವಾಹನ ಸವಾರರಿಗೆ...







