ಪುತ್ತೂರಿನ ವಿವೇಕಾನಂದ ಸ್ನಾತಕೋತ್ತರ ಕಾಲೇಜಿನಲ್ಲಿ “ಕಲೆಕ್ಷನ್ ಅಫ್ ಥಾಟ್ಫಾರ್ದಿ ಡೇ” ಅನಾವರಣ-ಕಹಳೆ ನ್ಯೂಸ್
ಪುತ್ತೂರು: ಸಕಾರಾತ್ಮಕ ಸಂದೇಶಗಳನ್ನು ರೂಪಿಸುವುದು ಉತ್ತಮ ಅಭ್ಯಾಸ. ಇದು ಜೀವನಕ್ಕೆ ಹೊಸ ಹುರುಪನ್ನು ಸದಾ ಬಿತ್ತುತ್ತದೆ. ಅದರಲ್ಲೂ ಕರೋನ ಮಹಾಮಾರಿಯ ನಡುವೆ ಏಕತಾನತೆಗೆ ಒಳಗಾಗದೆ ಮಾಡುವಂತಹ ಪ್ರಯೋಗಗಳು ಗಮನಾರ್ಹ ಎಂದು ವಿವೇಕಾನಂದ ಕಾಲೇಜಿನ ಸಂಚಾಲಕ ಮುರಳಿ ಕೃಷ್ಣಕೆ.ಎನ್ ಹೇಳಿದ್ದಾರೆ. ಸೆಪ್ಟೆಂಬರ್ 5.ರಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ "ಕಲೆಕ್ಷನ್ ಅಫ್ ಥಾಟ್ಫಾರ್ದಿ ಡೇ "ಎಂಬ ಕೋರೋನ ಪಿಡುಗಿನ ಸಮಯದಲ್ಲಿ ವಿದ್ಯಾರ್ಥಿಗಳೇ ಸೃಷ್ಟಿಸಿದ ಸಕಾರಾತ್ಮಕ ಸಂದೇಶಗಳ ಪ್ರತಿಯನ್ನು...







