ಗೋ ಪೂಜೆ ದಿನದಂದೇ ಗೋಕಳ್ಳರ ಪಾಲಿಗೆ ಸಿಂಹಸ್ವಪ್ನರಾದ ದಕ್ಷಿಣ ಕನ್ನಡದ ಪೋಲೀಸರು ; ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿ ಅಬ್ದುಲ್ಲಾನ ಕಾಲಿಗೆ ಗುಂಡು – ಕಹಳೆ ನ್ಯೂಸ್
ಪುತ್ತೂರು : ಗೋ ಪೂಜೆ ದಿನದಂದೇ ಗೋಕಳ್ಳರ ಪಾಲಿಗೆ ದಕ್ಷಿಣ ಕನ್ನಡದ ಪೋಲೀಸರು ಸಿಂಹಸ್ವಪ್ನರಾದ ಘಟನೆ ವರದಿಯಾಗಿದೆ. ಆರೋಪಿ ಅಬ್ದುಲ್ಲಾ (40 ವರ್ಷ), ಐಚರ್ ವಾಹನದಲ್ಲಿ 10 ಜಾನುವಾರಗಳನ್ನು ಸಾಗಿಸುತ್ತಿದ್ದನು ಆತನೇ ಚಾಲಕನಾಗಿದ್ದು, ಇನ್ನೊಬ್ಬ ಆರೋಪಿಯೂ ವಾಹನದಲ್ಲಿದ್ದ. ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದಾಗ ಆತನು ನಿಲ್ಲಿಸದೆ ಇದ್ದು ಪೊಲೀಸ್‌ರು ಸುಮಾರು 10 ಕಿಮೀ ದೂರ ವಾಹನವನ್ನು ಬೆನ್ನಟ್ಟಿದರು, ಆರೋಪಿಯು ಪೊಲೀಸ್ ಜೀಪಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿರುತ್ತಾನೆ. ಆಗ ಪಿಎಸ್ಐ ರವರು...







