Monday, April 27, 2026

ಪ್ರಾದೇಶಿಕ

ಬೆಳ್ತಂಗಡಿ

ನಾಳೆ ಬೆಳ್ತಂಗಡಿ ಬಾಳಿಗಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ಚಾಮುಂಡೇಶ್ವರಿ ಸೂಪರ್ ಬಜಾರ್ ಉದ್ಘಾಟನಾ ಸಮಾರಂಭ-ಕಹಳೆ ನ್ಯೂಸ್

ಬೆಳ್ತಂಗಡಿ: ರಖಂ ಮತ್ತು ಚಿಲ್ಲರೆ ವ್ಯಾಪಾರಸ್ಥರ ಶ್ರೀ ಚಾಮುಂಡೇಶ್ವರಿ ಸೂಪರ್ ಬಜಾರ್ ಉದ್ಘಾಟನಾ ಸಮಾರಂಭ ನಾಳೆ ಬೆಳ್ತಂಗಡಿ ಮುಖ್ಯ ರಸ್ತೆಯ ಹನುಮಾನ್ ಕಾಂಪ್ಲೆಕ್ಸ್ ಬಾಳಿಗಾ ಬಿಲ್ಡಿಂಗ್‍ನಲ್ಲಿ ಶುಭಾರಂಭಗೊಳ್ಳಲಿದೆ. ನೂತನ ಸೂಪರ್ ಬಜಾರ್ ಅನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅರಿಕೋಡಿ ಬೆಳಾಲು ಮೊಕೇಸರರಾದ ಡೊಂಬಯ್ಯ ಗೌಡ ಅರಿಕೋಡಿ, ವಿಕಾರ್ ಜನರಲ್ ಡಯೋಸಿಸ್ ಆಫ್ ಬೆಳ್ತಂಗಡಿಯ ರೇ.ಫಾ.ಜೋಸ್ ವಲಿಯಪರಂಬಿಲ್, ಬೆಳ್ತಂಗಡಿ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಮತ್ತು ಅಧ್ಯಕ್ಷರಾದ ಜ.ಯಮನುಲ್ ಅಬಿದೀನ್ ಜೆಫ್ರಿ ತಂಙಳ್...
ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಬ್ರಹ್ಮರಥೋತ್ಸವ ಸಂಪನ್ನ – ಕಹಳೆ ನ್ಯೂಸ್

ಮಂಗಳೂರು: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಚಂಪಾಷಷ್ಠಿ ಬ್ರಹ್ಮರಥೋತ್ಸವ ಸಂಪನ್ನಗೊಂಡಿತು. ಐತಿಹಾಸಿಕ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಭಾನುವಾರ ಬೆಳಗ್ಗೆ 7.25ರ ಧನುರ್ ಲಗ್ನದಲ್ಲಿ ರಥಾರೂಢನಾದ ಸುಬ್ರಹ್ಮಣ್ಯ ಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ತುಂಬಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.ಕೋವಿಡ್ ಹಿನ್ನಲೆ ಅನ್ಯ ಜಿಲ್ಲೆ ಮತ್ತು ಅನ್ಯ ರಾಜ್ಯದ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಪಾಸ್ ಇದ್ದವರಿಗೆ ಮಾತ್ರ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಜಿಲ್ಲಾಡಳಿತ ನಿಯಮಕ್ಕೂ ಕ್ಯಾರೆ ಅನ್ನದೆ ಕುಕ್ಕೆ ದೇವಳದ...
ಸುಳ್ಯ

ತಹಶೀಲ್ದಾರ್ ಅನಿತಾಲಕ್ಷ್ಮಿಯವರಿಗೆ ವಾರದಲ್ಲೇ ವರ್ಗಾವಣೆ – ಹೊಸ ತಹಶೀಲ್ದಾರ್ ವೇದವ್ಯಾಸ್ ಮುತಾಲಿಕ್-ಕಹಳೆ ನ್ಯೂಸ್

ಸುಳ್ಯ: ಸುಳ್ಯಕ್ಕೆ ತಹಶೀಲ್ದಾರ್ ಆಗಿ ಬಂದು ಒಂದು ವಾರವಷ್ಟೇ ಆಗಿದ್ದ ಅನಿತಾಲಕ್ಷ್ಮಿಯವರಿಗೆ ಬಂಟ್ವಾಳ ತಹಶೀಲ್ದಾರ್ ಆಗಿ ವರ್ಗಾವಣೆಯಾಗಿದ್ದು, ಸುಳ್ಯಕ್ಕೆ ವೇದವ್ಯಾಸ ಮುತಾಲಿಕ್ ಎಂಬವರು ಬರಲಿದ್ದಾರೆ. ಸರಕಾರ ಡಿ..17 ರಂದು ಮಾಡಿದ ಆದೇಶದಲ್ಲಿ ಈ ವರ್ಗಾವಣೆಯ ವಿಚಾರವಿದ್ದು, ತಕ್ಷಣವೇ ಹೊಸ ಪ್ರಭಾರವನ್ನು ವಹಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ....
ಮೂಡಬಿದಿರೆ

ಡಿ. 20 ಕ್ಕೆ ನಡೆಯುವ ಅಂತರಾಷ್ಟ್ರೀಯ ಮಟ್ಟದ ಜಿನ ಸಮ್ಮಿಲನ -2020 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ– ಕಹಳೆ ನ್ಯೂಸ್

ಮೂಡುಬಿದಿರೆ : ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಶುಕ್ರವಾರ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನಧರ್ಮ ಪೇಸ್ಬುಕ್ ಪುಟದ ಸಹಭಾಗಿತ್ವದೊಂದಿಗೆ, ಡಿ 20. ಕ್ಕೆ ನಡೆಯುವ ಅಂತರಾಷ್ಟ್ರೀಯ ಮಟ್ಟದ ಜಿನ ಸಮ್ಮಿಲನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಯನ್ನು ಭಗವಾನ್ ಚಂದ್ರನಾಥ ಸ್ವಾಮಿಯ ಸನ್ನಿಧಿಯಲ್ಲಿ ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ಬಿಡುಗಡೆ...
ಬಂಟ್ವಾಳ

ಬಂಟ್ವಾಳದ ವಗ್ಗದಲ್ಲಿ ಚುನಾವಣೆ ಬಹಿಷ್ಕಾರ ಮಾಡಲು ಮುಂದಾದ ಗ್ರಾಮಸ್ಥರು-ಕಹಳೆ ನ್ಯೂಸ್

ಬಂಟ್ವಾಳ: ರಾಜ್ಯದ ಹಲವೆಡೆ ಗ್ರಾಮ‌ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತಿರುವ ಸುದ್ಧಿ ಕೇಳಿಬರುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ಕೂಡ ಚುನಾವಣಾ ಬಹಿಷ್ಕಾರ ಬ್ಯಾನರ್ ಕಂಡು ಬಂದಿದೆ. ಈ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರವನ್ನು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮ‌ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ವಗ್ಗದ ಗ್ರಾಮಸ್ಥರು ಕೈಗೊಂಡಿದ್ದಾರೆ. ತಲೆ ತಲಾಂತರಗಳಿಂದ ಸುಮಾರು 12 ರಷ್ಟು ಮನೆಗಳಿಗೆ ಸಂಪರ್ಕಿಸುತ್ತಿದ್ದ ದಾರಿಗೆ ಅಡ್ಡಲಾಗಿ ಮಾಜಿ‌ ಪಂಚಾಯತ್ ಉಪಾಧ್ಯಕ್ಷರು ತಡೆಗೋಡೆ...
ಬೆಳ್ತಂಗಡಿ

ಉಜಿರೆ ಸಮೀಪದ ಮೈದಾನದಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕನ ಅಪಹರಣ-ಕಹಳೆ ನ್ಯೂಸ್

ಬೆಳ್ತಂಗಡಿ : ಬಿಳಿ ಬಣ್ಣದ ಇಂಡಿಕಾ ಕಾರ್ ಒಂದರಲ್ಲಿ ಬಂದ ಅನಾಮಿಕರ ತಂಡ ಉಜಿರೆ ಸಮೀಪದ ಮೈದಾನವೊಂದರಲ್ಲಿ ಆಟವಾಡುತ್ತಿದ್ದ 8 ವರ್ಷದ ಪುಟ್ಟ ಬಾಲಕನೋರ್ವನನ್ನು ಅಪಹರಿಸಿ ಸುದ್ಧಿ ಕೇಳಿಬಂದಿದೆ. ಈ ಇಂಡಿಕಾ ವಾಹನವು ಚಾರ್ಮಾಡಿ ಕಡೆಗೆ ಚಲಿಸಿದ್ದಾಗಿ‌ ಮಾಹಿತಿ ವ್ಯಕ್ತವಾಗಿದ್ದು, ಈ ಅಪಹರಣದ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ‌ಲಭ್ಯಿಸಿಲ್ಲ. ಹಾಗೆಯೇ ಚಾರ್ಮಾಡಿ, ಧರ್ಮಸ್ಥಳ, ಮಂಗಳೂರು ಈ ಮೇಲ್ಕಂಡ ಯಾವುದೇ ಭಾಗದಲ್ಲಿಯಾದರೂ ಬಿಳಿ ಬಣ್ಣದ ಅನಾಮಿಕ ಕಾರು ಕಾಣಿಸಿದ್ದಲ್ಲಿ ಮಾಹಿತಿ...
ಪುತ್ತೂರು

ಪುತ್ತೂರಿನಲ್ಲಿ ನಾಳೆ ಜರ್ಮನ್ ಟೆಕ್ನಾಲಜಿಯ ಇಂಜಿನ್ ಕಾರ್ ಡೀಕಾರ್ಬನೈಸಿಂಗ್ ಸೆಂಟರ್ ಶುಭಾರಂಭ-ಕಹಳೆ ನ್ಯೂಸ್

ಪುತ್ತೂರು: ಪ್ರಪಂಚದ ಅತ್ಯುತ್ತಮ ಜರ್ಮನ್ ಟೆಕ್ನಾಲಜಿಯ ಇಂಜಿನ್ ಕಾರ್ ಡೀಕಾರ್ಬನೈಸಿಂಗ್ ಸೆಂಟರ್ ನಾಳೆ ಮಹಾಲಸಾ ಬಿಲ್ಡಿಂಗ್, ಉರ್ಲಾಂಡಿ ಬೈಪಾಸ್ ರಸ್ತೆ ಪುತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ. ನಾಳೆ ಮದ್ಯಾಹ್ನ ೧೨ಗಂಟೆಗೆ ಶುಭಾರಂಭಗೊಳ್ಳುತ್ತಿರುವ ಈ ಇಂಜಿನ್ ಕಾರ್ ಡೀಕಾರ್ಬನೈಸಿಂಗ್ ಸೆಂಟರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಈ ವೇಳೆ ಮುಖ್ಯ ಅತಿಥಿಯಾಗಿ ದೆಹಲಿ ವ್ಯವಸ್ಥಾಪಕ ನಿರ್ದೇಶಕರು, ಡಿಕ್ಯಾಬೋ ರಾಜ್ ಅವರು ಆಗಮಿಸಲಿದ್ದಾರೆ....
1 830 831 832 833 834 872
Page 832 of 872