Monday, April 27, 2026

ಪ್ರಾದೇಶಿಕ

ಪುತ್ತೂರು

ಸುಳ್ಯ:ಮದುವೆ ದಿಬ್ಬಣದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಪುತ್ತೂರು ಬಲ್ನಾಡ್‍ನ ಐದು ಮಂದಿ ದುರ್ಮರಣ-ಕಹಳೆ ನ್ಯೂಸ್

ಪುತ್ತೂರು: ಕೇರಳದ ಪಾಣತ್ತೂರು ಎಂಬಲ್ಲಿ ಮದುವೆ ದಿಬ್ಬಣದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಪುತ್ತೂರು ಬಲ್ನಾಡ್ ನ ಐದು ಮಂದಿ ಮೃತ ಪಟ್ಟಿರುವ ಘಟನೆ ನಿನ್ನೆ ನಡೆದಿದೆ. ಬಲ್ನಾಡ್ ಗ್ರಾಮದ ಚನಿಲ ನಿವಾಸಿ ಕೊಗ್ಗು ನಾಯ್ಕ ರವರ ಪುತ್ರಿಯ ವಿವಾಹ ಕರಿಕಲ ಎಂಬಲ್ಲಿ ನಡೆಯುತ್ತಿದ್ದು, ಮದುವೆಗೆ ಹೋಗುತ್ತಿದ್ದ ವಧುವಿನ ದಿಬ್ಬಣದ ಬಸ್ ಪಾಣತ್ತೂರು ಎಂಬಲ್ಲಿ ಪಲ್ಟಿಯಾಗಿ 5 ಮಂದಿ ಮೃತಪಟ್ಟು, 3 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ಬಸ್‍ನಲ್ಲಿ ಭರ್ತಿ 60...
ಮೂಡಬಿದಿರೆ

ಸಾವಿತ್ರಿ ಬಾಯಿ ಫುಲೆಯ ಜನ್ಮದಿನವನ್ನು ಸ್ಮರಿಸಿದ ಮುಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಎ ಕೋಟ್ಯಾನ್- ಕಹಳೆ ನ್ಯೂಸ್

ಮೂಡಬಿದಿರೆ: ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ ಸಮಾಜಕ್ಕೆ ಎದುರಾಗಿ, ನೋವು ಅವಮಾನಗಳನ್ನು ಮೆಟ್ಟಿನಿಂತು, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವಾದ ಇಂದು, ಮುಲ್ಕಿ-ಮೂಡಬಿದಿರೆ ಶಾಸಕರಾದ ಉಮಾನಾಥ ಎ ಕೋಟ್ಯಾನ್‌ರವರು ಅಕ್ಷರಮಾತೆಯನ್ನ ಸ್ಮರಿಸಿ ನಮನಗಳನ್ನು ಅರ್ಪಿಸಿದ್ದಾರೆ. ಹೆಣ್ಣಿಗೆ ಶಿಕ್ಷಣ ನೀಡದ ಅಂದಿನ ಕಾಲದ ಸಮಾಜದಲ್ಲಿ, ಶಿಕ್ಷಣದೆಡೆ ಒಲವನ್ನು ಹೊಂದಿದ್ದ ಸಾವಿತ್ರಿಬಾಯಿ ಫುಲೆ ಮನೆಯನ್ನೇ ಪಾಠಶಾಲೆಯನ್ನಾಗಿಸಿ, ತಮ್ಮ ಪತಿ ಜ್ಯೋತಿ ಬಾ ಫುಲೆಯಿಂದ...
ಬಂಟ್ವಾಳ

ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ ಬಂಟ್ವಾಳ ಘಟಕ ಮತ್ತು ಬಂಟ್ವಾಳ ವಕೀಲರ ಸಂಘದ ಸಹಯೋಗದಲ್ಲಿ ಕಾನೂನು ಕಾರ್ಯಾಗಾರ-ಕಹಳೆ ನ್ಯೂಸ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ ಬಂಟ್ವಾಳ ಘಟಕ ಮತ್ತು ಬಂಟ್ವಾಳ ವಕೀಲರ ಸಂಘದ ಸಹಯೋಗದಲ್ಲಿ ಕಾನೂನು ಕಾರ್ಯಾಗಾರ ನಿನ್ನೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಕಾನೂನು ಕಾರ್ಯಗಾರದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಕೈಯೂರು ಉದ್ಘಾಟಿಸಿ ಶುಭಹಾರೈಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆಯ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಅವರು ಕಾನೂನು ವೇದಿಕೆಯು ಜಿಲ್ಲೆಯ ಎಲ್ಲಾ ವಕೀಲರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ರಚನೆಯಾದ...
ಬೆಳ್ತಂಗಡಿ

ಬೆಳ್ತಂಗಡಿ: ಕುಪ್ಪೆಟ್ಟಿ- ಬಂದಾರು ಪ್ರಯಾಣಿಸುವ ಸಾರ್ವಜನಿಕರ ಗಮನಕ್ಕೆ: ಮುಂದಿನ 20 ದಿನಗಳವರೆಗೆ ರಸ್ತೆಯನ್ನು ಸಂಪೂರ್ಣ ಬಂದ್-ಕಹಳೆ ನ್ಯೂಸ್

ಕುಪ್ಪೆಟ್ಟಿ : ಸಾರ್ವಜನಿಕರ ಗಮನಕ್ಕೆ ಕುಪ್ಪೆಟ್ಟಿಯಿಂದ ಉರುವಾಲು ಪದವಿನವರೆಗೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಕುಪ್ಪೆಟ್ಟಿಯಿಂದ ಉರುವಲುಪದವು ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು ಇಂದಿನಿಂದ ಮುಂದಿನ 20 ದಿನಗಳವರೆಗೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಟೆಂಡರ್ ನವರು ಪ್ರಕಟಣೆ ತಿಳಿಸಿದ್ದಾರೆ. ಆದ್ದರಿಂದ ಉಪ್ಪಿನಂಗಡಿ ಪ್ರಯಾಣಿಸುವ ಪ್ರಯಾಣಿಕರು, ಪದವು-ಅಂಡೆತ್ತಡ್ಕ-ಇಳಂತಿಳ ಮಾರ್ಗವಾಗಿ ಸಂಚರಿಸಬೇಕಾಗಿ. ಇನ್ನು ಬೆಳ್ತಂಗಡಿ ಪ್ರಯಾಣಿಸುವ ಸಾರ್ವಜನಿಕರು ಪದ್ಮುಂಜ-ಬೊಲ್ಲರಮಜಲು-ಕಣಿಯೂರು-ಪಿಲಿಗೂಡು ಮಾರ್ಗವಾಗಿ ಸಂಚರಿಸಬೇಕಾಗಿ. ಕಾಮಗಾರಿ ಉದ್ದೇಶದಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಮಾದ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ....
ಪುತ್ತೂರು

ಅಂಬಿಕಾ ಪದವಿ ಪೂರ್ವ ಕಾಲೇಜು ನಿನ್ನೆ ಪುನರಾರಂಭ – ಕಹಳೆ ನ್ಯೂಸ್

ಕೋವಿಡ್-19ರ ಎಲ್ಲ ಶಿಸ್ತು, ನಿಯಮಾವಳಿಗಳಂತೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ, ಒಂದು ಬೆಂಚಿನಲ್ಲಿ ಮೂವರೇ ವಿದ್ಯಾರ್ಥಿಗಳು, ದಿನದಲ್ಲಿ ನಲವತ್ತೈದು ನಿಮಿಷಗಳ ನಾಲ್ಕು ತರಗತಿಗಳು, ತರಗತಿ ಮುಗಿದ ನಂತರ ಮತ್ತೆ ತರಗತಿ ಕೋಣೆಗಳನ್ನು ಸ್ವಚ್ಛಗೊಳಿಸುವಿಕೆ, ಕಾಟನ್ ಮಾಸ್ಕ್ ಕಡ್ಡಾಯ ಈ ಎಲ್ಲಾ ನಿಯಮಗಳಂತೆ, ಪಿ.ಯು.ಸಿ. ತರಗತಿಗಳನ್ನು ಆರಂಭಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಸಂಸ್ಕೃತಿಯ ರಾಯಭಾರಿಗಳಾಗಿ, ಸಂಸ್ಕಾರ ಸಂಸ್ಕೃತಿಯಿಂದ ಭಾರತದ ಹಿರಿತನವನ್ನು ಉಳಿಸಿ ಮತ್ತೊಮ್ಮೆ ಭಾರತ ವಿಶ್ವಗುರುವಾಗುವಂತೆ ಶ್ರಮಿಸೋಣ. ಅದಕ್ಕೆ ಪೂರಕ...
ಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಪಾಕ್‌ಪರ ಘೋಷಣೆ ಕೂಗಿದ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಕೂಡಲೇ ಅಪರಾಧಿಗಳನ್ನು ಬಂಧಿಸಿ ಎಂದು ಪ್ರಕಟಣೆ ಹೊರಡಿಸಿದ ಹಿಂದೂ ಜನಜಾಗೃತಿ ಸಮಿತಿ – ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ತಂಗಡಿಯ ಉಜಿರೆಯಲ್ಲಿ ಇಂದು ಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ಸಮಯದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪಾಕಿಸ್ತಾನಪರ ಘೋಷಣೆ ಕೂಗಿರುವ ಘಟನೆ ನಡೆದಿರುವುದು ದೇಶದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಘಟನೆಯಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಕೋಮುಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಭಯೋತ್ಪಾದನಾ ಚಟುವಟಿಕೆಗೆ ಪ್ರೇರಣೆ ನೀಡುವ ಗೋಡೆ ಬರಹಗಳನ್ನು ಬರೆದಿರುವ ಘಟನೆಗಳು ಜರುಗಿತ್ತು. ಇದಲ್ಲದೆ ಇದೇ ಜಿಲ್ಲೆಯಲ್ಲಿ ಅನೇಕ ಭಯೋತ್ಪಾದನಾ...
ಪುತ್ತೂರು

ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿ ಸರಸ್ವತಿ ಪೂಜಾ ಮತ್ತು ಗಣಹೋಮ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ ಬದಲಿಗೆ ವಿವೇಕ, ಪ್ರಜ್ಞೆ, ಬುದ್ದಿವಂತಿಕೆ ,ಜ್ಞಾನ ತಿಳುವಳಿಕೆಗಳನ್ನು ಒಳಗೊಂಡಿದೆ. ವಿದ್ಯೆ, ಬುದ್ಧಿ, ಸಂಗೀತ ಮತ್ತು ಕಲೆ ಸಂಸ್ಕøತಿಯ ಪ್ರತೀಕವಾಗಿರುವ ಭಾರತೀಯ ದೇವತೆ ಸರಸ್ವತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಪೂಜಿಸಬೇಕು ಎಂದು ಕಶೆಕೋಡಿ ಕಾರ್ತಿಕ್ ಶಾಸ್ತ್ರೀ ಹೇಳಿದರು. ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವದ ಅಂಗವಾಗಿ ಆಯೋಜಿಸಲಾದ ಸರಸ್ವತಿ ಪೂಜಾ ಮತ್ತು ಗಣಹೋಮ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು. ಯಾವುದೇ ಒಂದು...
ಪುತ್ತೂರು

ಪುತ್ತೂರು; ಪಾದಚಾರಿ ಮಹಿಳೆಗೆ ಬೈಕ್ ಸವಾರ ಡಿಕ್ಕಿ ಹೊಡೆದು ಪರಾರಿ- ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ತಾಲೂಕಿನ ಕೋಡಿಂಬಾಡಿ ಬಳಿ ಇಂದು ಬೆಳಿಗ್ಗೆ ಪಾದಚಾರಿ ಮಹಿಳೆಯೊಬ್ಬರಿಗೆ ದ್ವಿಚಕ್ರ ವಾಹನ ಸವಾರನೊಬ್ಬ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ. ಅಪಘಾತಕ್ಕೆ ಒಳಗಾದ ಮಹಿಳೆಯೂ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರು ಸೇಡಿಯಾಪು ನಿವಾಸಿ ದಿ.ದೇವಣ್ಣ ಎಂಬವರ ಪತ್ನಿ ಲಕ್ಷ್ಮೀ ಎಂದು ತಿಳಿದುಬಂದಿದೆ. ಈ ಅಪಘಾತವು ಕೋಡಿಂಬಾಡಿಯ ಉಮ್ಮರ್ ಎಂಬವರ ಅಡಿಕೆ ಗಾರ್ಬಲ್ ಎದುರು ಸಂಭವಿಸಿದೆ....
1 823 824 825 826 827 872
Page 825 of 872