Monday, April 27, 2026

ಪ್ರಾದೇಶಿಕ

ಬೆಳ್ತಂಗಡಿ

ಕುಡಿದ ಮತ್ತಿನಲ್ಲಿ ಪತ್ನಿಯನ್ನು ಮರದ ತುಂಡಿನಿಂದ ಹುಬ್ಬಿನ ಮೇಲೆ ಹೊಡೆದು ಕೊಂದ ಪತಿ-ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಗಂಡನೆ ಹೆಂಡತಿಯನ್ನು ಕೊಂದ ಘಟನೆ ನಿನ್ನೆ ರಾತ್ರಿ ನಡೆದಿದೆ. ಈ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿ ಬಾಗಿಲಿನ ಕುಟ್ಟಿಚ್ಛಾರು ಮನೆ ಎಂಬಲ್ಲಿ ನಡೆದಿದ್ದು, ಆರೋಪಿ ಜಾನ್ಸನ್ ಎಂದು ಗುರುತಿಸಲಾಗಿದೆ. ಆರೋಪಿ ಜಾನ್ಸನ್ನು ಕೇರಳ ಮೂಲದ ಇರುಟ್ಟಿ ಎಂಬಲ್ಲಿಯ ತನ್ನ ಪತ್ನಿ ಸೌಮ್ಯಾ ಜಾನ್ಸನ್‍ನನ್ನು ಕೊಲೆ ಮಾಡಿದ್ದಾನೆ ಎಂದು ಆಕೆಯ ಸಹೋದರ ಸನೋಜ್ ಫ್ರಾನ್ಸಿಸ್ ಕುತ್ರೊಟ್ಟು ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ....
ಪುತ್ತೂರು

ಸಾಫ್ಟ್ ವೇರ್ ಉದ್ಯೋಗಿಯಾಗಬೇಕಾದರೆ ವೃತ್ತಿ ಕೌಶಲ್ಯ ಅತೀ ಮುಖ್ಯ ; ನಂದನ್ ಜಿ.ಆರ್.-ಕಹಳೆ ನ್ಯೂಸ್

ಪುತ್ತೂರು : ಪ್ರಸ್ತುತ ಕಾಲಘಟ್ಟದಲ್ಲಿ ಐಟಿ ಕ್ಷೇತ್ರಗಳಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ವಿಫುಲವಾದ ಅವಕಾಶಗಳಿವೆ. ಆದರೆ ವೃತ್ತಿ ಕೌಶಲ್ಯದ ಅಗತ್ಯತೆಯು ಕೂಡಾ ಬಹಳಷ್ಟಿದೆ ಎಂದು ವಿಪ್ರೋ ಸಂಸ್ಥೆಯ ಉದ್ಯೋಗಿ ಹಾಗೂ ಕಾಲೇಜಿನ ಬಿಸಿಎ ವಿಭಾಗದ ಹಳೆ ವಿದ್ಯಾರ್ಥಿ ನಂದನ್ ಜಿ.ಆರ್. ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಗಣಕ ಶಾಸ್ತ್ರ ವಿಭಾಗ ಹಾಗೂ ಉದ್ಯೋಗ ಹಾಗೂ ತರಬೇತಿ ವಿಭಾಗ ಜಂಟಿಯಾಗಿ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ...
ಪುತ್ತೂರು

ಪ್ರತಿ ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯ ಉಪಯೋಗವಾಗುತ್ತಿದೆ: ಡಾ ಹರಿವಿನೋದ್-ಕಹಳೆ ನ್ಯೂಸ್

ಪುತ್ತೂರು : ಮನುಷ್ಯ ತನ್ನ ಸ್ವಂತಿಕೆ ಹಾಗೂ ಆಲೋಚನೆಗಳನ್ನು ಆಧುನಿಕ ತಂತ್ರಜ್ಞಾನಗಳಿಗೆ ನೀಡಿದ್ದಾನೆ. ತನಗೆ ಅರಿವಿಲ್ಲದೆಯೇ ತಾನು ತಂತ್ರಜ್ಞಾನಕ್ಕೆ ಅವಲಂಬಿತನಾಗಿದ್ದಾನೆ. ಪ್ರತಿಯೊಂದು ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದಾನೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಹರಿವಿನೋದ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯುಎಸಿ ವತಿಯಿಂದ ಆಯೋಜಿಸಿದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಷಯದ...
ಪುತ್ತೂರು

ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಆ್ಯಮ್ ಜರ್ನಲಿಸಂ’ ಫೇಸ್‍ಬುಕ್ ಪುಟ ಬಿಡುಗಡೆ, ಭಾಷಾಶುದ್ಧತೆಯುಳ್ಳ ಪತ್ರಕರ್ತರು ಸಮಾಜಕ್ಕೆ ಅಗತ್ಯ; ರಾಜಶ್ರೀ ನಟ್ಟೋಜ-ಕಹಳೆ ನ್ಯೂಸ್

ಪುತ್ತೂರು: ನಮ್ಮ ಸಮಾಜಕ್ಕಿಂದು ಅತ್ಯುತ್ತಮ ಪತ್ರಕರ್ತರು ಬೇಕಾಗಿದ್ದಾರೆ. ಭಾಷಾ ಶುದ್ಧತೆಯಳ್ಳ, ಸಾಕಷ್ಟು ಜ್ಞಾನ ಹೊಂದಿರುವ ವ್ಯಕ್ತಿಗಳು ಪತ್ರಿಕೋದ್ಯಮದಲ್ಲಿದ್ದಾಗ ಒಳ್ಳೆಯ ಮಾಧ್ಯಮ ವ್ಯವಸ್ಥೆ ರೂಪುಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳಿಗೂ, ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೂ ಬಹುದೊಡ್ಡ ಜವಾಬ್ಧಾರಿ ಇದೆ ಎಂದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಹೇಳಿದರು. ಅವರು ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ರೂಪಿಸಿರುವ ‘ಆ್ಯಮ್ ಜರ್ನಲಿಸಂ’ ಎಂಬ ಫೇಸ್...
ಬಂಟ್ವಾಳ

ಪಾರಿವಾಳ ಕಳವು ಪ್ರಕರಣ; 24 ಗಂಟೆಯೊಳಗೆ ಮೂವರು ಆರೋಪಿಗಳ ಬಂಧನ-ಕಹಳೆ ನ್ಯೂಸ್

ಬಂಟ್ವಾಳ: ಅಟೋರಿಕ್ಷಾದಲ್ಲಿ ಬಂದು ಸುಮಾರು 20 ಸಾವಿರ ರೂ ಮೌಲ್ಯದ 40 ಪಾರಿವಾಳಗಳನ್ನು ಕಳ್ಳತನ ಮಾಡಿದ ಆರೋಪದಲ್ಲಿ ಮೂವರನ್ನು ದೂರು ನೀಡಿ, 24 ಗಂಟೆಯೊಳಗೆ ವಿಟ್ಲ ಪೊಲೀಸರ ತಂಡ ಪತ್ತೆಹಚ್ಚಿದ್ದಾರೆ. ಬಂಧಿತ ಆರೋಪಿಗಳು ದೇರಳಕಟ್ಟೆ ಪನೀರ್ ಮೂಲದ ಕುಂಪಳ ಚಿತ್ರಾಂಜಲಿ ನಗರ ನಿವಾಸಿ 24 ವರ್ಷದ ಮಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ಕರಡಿ ನಾಸಿರ್, ಮತ್ತು 19 ವರ್ಷದ ಕಾವಲಕಟ್ಟೆ ಮೂಲದ ಪಾತ್ರತೋಟ ನಿವಾಸಿ ರಿಝ್ವಾನ್, ಹಾಗೂ 18...
ದಕ್ಷಿಣ ಕನ್ನಡಪುತ್ತೂರುಬಂಟ್ವಾಳ

ಪೆರುವಾಯಿ: ಬೈಕ್ ಅಪಘಾತಕ್ಕೀಡಾದ ವಿವೇಕಾನಂದ ಕಾಲೇಜು ಹಳೆ ವಿದ್ಯಾರ್ಥಿ ಶಿವಪ್ರಸಾದ್ ರವರ ಚಿಕಿತ್ಸೆಗಾಗಿ ಅರ್ಥಿಕ ನೆರವಿಗೆ ಮನವಿ-ಕಹಳೆ ನ್ಯೂಸ್

ಪುತ್ತೂರು: ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಕನ್ನರಡ್ಕ ನಿವಾಸಿ ಕೆ.ಆರ್. ಶಿವಪ್ರಸಾದ್ (22 ವರ್ಷ) ರವರಿಗೆ ಜ.5ರಂದು ಮಂಗಳೂರಿನ ಕೊಟ್ಟಾರ ಚೌಕಿ ಬಳಿ ಬೈಕ್ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡು ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಪುತ್ತೂರು ವಿವೇಕಾನಂದ ಕಾಲೇಜಿನ ಹಳೆವಿದ್ಯಾರ್ಥಿಯಾಗಿದ್ದು ಎಬಿವಿಪಿಯಲ್ಲಿ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದರು.ಬೈಕ್ ಬಿದ್ದ ರಭಸಕ್ಕೆ ಅವರ ತಲೆಯ ಭಾಗಕ್ಕೆ ಬಲವಾದ ಏಟು ಬಿದ್ದಿದ್ದು, ದೇಹದ ಹಲವು ಭಾಗಗಳಲ್ಲಿ ತೀವ್ರವಾಗಿ ಗಾಯಗೊಂಡು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಇದೀಗ ವೈದ್ಯರು ಚಿಕಿತ್ಸೆಗಾಗಿ...
ಪುತ್ತೂರು

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲಿನಲ್ಲಿ ಪ್ರಥಮ ವರ್ಷದ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ- ಕಹಳೆ ನ್ಯೂಸ್

ಇತಿಹಾಸದಲ್ಲಿ ತನ್ನದೇ ಆದ ದಾಖಲೆ ನಿರ್ಮಿಸಿದ ಐತಿಹಾಸಿಕ ಪುಣ್ಯ ಕ್ಷೇತ್ರ ತುಳುನಾಡಿನ ವೀರಪುತ್ರರಾದ ಕೋಟಿ-ಚೆನ್ನಯ್ಯರ ಜನ್ಮಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್.ಕಳೆದ ವರ್ಷವಷ್ಟೇ ಅತ್ಯಂತ ವೈಭವಯುತವಾಗಿ ಕಂಗೊಳಿಸಿ ಲಕ್ಷಾಂತರಗಟ್ಟಲೆ ಜನ ಸಮೂಹವನ್ನು ತನ್ನತ್ತ ಸೆಳೆದುಕೊಂಡು "ಭೂತೋನ ಭವಿಷ್ಯತಿ" ಎಂಬ0ತೆ ಬ್ರಹ್ಮಕಲಶೋತ್ಸವ ಆಚರಿಸಿಕೊಂಡ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್, ಇದೀಗ ಪ್ರಥಮ ವರ್ಷದ ಜಾತ್ರಾ ಮಹೋತ್ಸವದ ವೈಭವದ ಆಚರಣೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಹಿನ್ನಲೆ ಜಾತ್ರ ಮಹೋತ್ಸವದ ಸಂಚಾಲಕರಾಗಿ ಶ್ರೀ...
ಪುತ್ತೂರು

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ- ಕಹಳೆ ನ್ಯೂಸ್

ನಮ್ಮೊಂದಿಗೆ ಸಮಾಜವನ್ನೂ ಬೆಳೆಸುವ ಸಂಕಲ್ಪ ಹುಟ್ಟಲಿ: ಮುರಳಿಕೃಷ್ಣ ಕೆ. ಎನ್. ಪುತ್ತೂರು: ಲಾಕ್‍ಡೌನ್ ಎಂಬುವುದು ಅನೇಕ ನಕಾರಾತ್ಮಕ ವಿಚಾರಗಳ ನಡುವೆಯೂ ಹಲವು ಧನಾತ್ಮಕ ವಿಷಯಗಳಿಗೂ ಕಾರಣವಾಗಿದೆ. ಯುವಜನತೆ ಸಮಾಜಮುಖಿಯಾಗಿ ಕಾರ್ಯಾರಂಭ ಮಾಡಲು ಮುನ್ನುಡಿಯಾಗಿದೆ. ಸೇವಾ ಭಾವನೆ ಬೆಳೆಯತೊಡಗಿದೆ. ನಾನೂ ಬದುಕಬೇಕು ನನ್ನೊಂದಿಗೆ ಸಮಾಜವೂ ಉಸಿರಾಡಬೇಕು ಎನ್ನುವ ಮನೋಭಾವ ಬೆಳೆಯುತ್ತಿದೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಚಳ್ಳಂಗಾರು ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಮಾನವಿಕ ವಿಭಾಗಗಳು...
1 821 822 823 824 825 872
Page 823 of 872