Monday, April 27, 2026

ಪ್ರಾದೇಶಿಕ

ಬಂಟ್ವಾಳ

ಬಿಸಿರೋಡಿನ ಹೃದಯ ಭಾಗದಲ್ಲಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆ; ನಾಲ್ವರು ಯುವಕರ ಬಂಧನ-ಕಹಳೆ ನ್ಯೂಸ್

ಬಂಟ್ವಾಳ : ಬಿಸಿರೋಡಿನ ಹೃದಯ ಭಾಗದಲ್ಲಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ ಬಳಿಕ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ನೇತ್ರತ್ವದ ತಂಡ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ನಾಲ್ವರು ಯುವಕರನ್ನು ವಶಕ್ಕೆ ಪಡೆದುಕೊಂಡು, ಐದು ಮಂದಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಹಾಗೆ ಇನ್ನು ಒಟ್ಟು ಒಂಬತ್ತು ಮಂದಿಯನ್ನು ಠಾಣೆಗೆ ಕರದೊಯ್ಯಲಾಗಿದ್ದು ತನಿಖೆ ಮುಂದುವರಿದಿದೆ....
ಪುತ್ತೂರು

ಇಂದು ಸಂಜೆ ಮುಂಡೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಿಜೆಪಿ ವಿಜಯೋತ್ಸವ ; ಅಭಿನಂದನಾ ಸಮಾರಂಭದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಭಾಗಿ – ಕಹಳೆ ನ್ಯೂಸ್

ಪುತ್ತೂರು : ತಾಲೂಕಿನ ಮುಂಡೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ‌ ಬಿಜೆಪಿ ಜಯ ದಾಖಲಿಸಿದ ಬಳಿಕ, ಇಂದು ಸಂಜೆ ಮುಂಡೂರಿನಲ್ಲಿ ಬಿಜೆಪಿ ವಿಜಯೋತ್ಸವ ನಡೆಯಲಿದ್ದು, ಗೆದ್ದು‌ ಬೀಗಿದ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸಂಜೀವ ಮಠಂದೂರು, ಮೀನಾಕ್ಷಿ ಶಾಂತಿಗೋಡು, ರಾಧಾಕೃಷ್ಣ ಬೋರ್ಕರ್, ಸಾಜ ರಾಧಾಕೃಷ್ಣ ಆಳ್ವ, ಜೀವಂಧರ್ ಜೈನ್, ಚನಿಲ ತಿಮ್ಮಪ್ಪ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ...
ಬದಿಯಡ್ಕ

ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಉಚಿತ ವೈದ್ಯಕೀಯ ಶಿಬಿರ-ಕಹಳೆ ನ್ಯೂಸ್

ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಶುಕ್ರವಾರ ಜನಮೈತ್ರಿ ಪೊಲೀಸ್ ಸಹಕಾರದೊಂದಿಗೆ ಟ್ರೂ ಲೈಫ್ ಕೇರ್ ಕಾಸರಗೋಡು ಇವರ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಈ ಕಾರ್ಯಕ್ರಮವನ್ನು ಡಾ. ಅನೂಪ್ ವಾರ್ಯರ್ ಆಶ್ರಮವಾಸಿಗಳ ತಪಾಸಣೆಯನ್ನು ನಡೆಸಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರೈಂ ದಾಖಲಾತಿ ಬ್ಯುರೋ ಪ್ರಧಾನ ಅಧಿಕಾರಿ ಲತೀಶ್, ಜನಮೈತ್ರಿ ಪೊಲೀಸ್ ವಿಭಾಗದ ಅನೂಪ್, ಮಹೇಶ್, ಆಶ್ರಮದ ಟ್ರಸ್ಟಿಗಳಾದ ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶ್ ಕೃಷ್ಣ ಆಳಕ್ಕೆ, ಎಎಸ್‍ಐ...
ಬೆಳ್ತಂಗಡಿ

ಬೆಳ್ತಂಗಡಿಯಲ್ಲಿ 11 ಕೆ.ವಿ ಕೊಲ್ಲಿ ಫೀಡರ್ ನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ-ಕಹಳೆ ನ್ಯೂಸ್

ಬೆಳ್ತಂಗಡಿ: ಮೆಸ್ಕಾಂ ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ನಿರ್ಮಿಸಲಾದ ನೂತನ 11ಕೆ ವಿ ಕೊಲ್ಲಿ ಫೀಡರ್ ನ್ನು ಶಾಸಕ ಹರೀಶ್ ಪೂಂಜ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್, ನಗರ ಪಂಚಾಯತ್ ಅಧ್ಯಕ್ಷ ರಜನಿ ಕುಡ್ವ ,ಉಪಾಧ್ಯಕ್ಷ ಜಯಾನಂದ ಗೌಡ, ನಗರ ಪಂಚಾಯತ್ ಸದಸ್ಯರಾದ ಲೋಕೇಶ್, ಶರತ್ ಕುಮಾರ್ ಶೆಟ್ಟಿ, ತಾಲೂಕು ಪಂಚಾಯತ್ ಉಪಾಧ್ಯಕ್ಷ ವೇದಾವತಿ, ಸ.ಕಾ.ಅಭಿಯಂತರ ಶಿವಶಂಕರ್ ಉಪಸ್ಥಿತರಿದ್ದರು....
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶೇಷ ವಿಜ್ಞಾನ ಉಪನ್ಯಾಸ ಮಾಲಿಕೆ-ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗವು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಜನವರಿ 18ರಿಂದ 22ರ ವರೆಗೆ ಸಂಜೆ ಘಂಟೆ 3 ರಿಂದ 4ರವರೆಗೆ ಐದು ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮವನ್ನುಹಮ್ಮಿಕೊಂಡಿದೆ. ವಿದ್ಯಾರ್ಥಿಗಳು, ಜನಸಾಮಾನ್ಯರು ಹಾಗೂ ವಿಜ್ಞಾನ ಆಸಕ್ತರಿಗಾಗಿ ಹಮ್ಮಿಕೊಂಡಿರುವ ಈ ಉಪನ್ಯಾಸ ಸರಣಿಯು ಕೋವಿಡ್‍ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆನ್ಲೈನ್...
ಪುತ್ತೂರು

ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ‘ಆಮ್ನಾಯಃ’ ದಿನದರ್ಶಿಕೆ ತಯಾರಿಗೆ ಚಾಲನೆ ವಿಜ್ಞಾನದ ಮೂಲಕ ಭಗವಂತನನ್ನು ಕಾಣುವುದು ಅಗತ್ಯ ; ರಾಜಶ್ರೀ ನಟ್ಟೋಜ-ಕಹಳೆ ನ್ಯೂಸ್

ಪುತ್ತೂರು: ದೇವರು ಮತ್ತು ವಿಜ್ಞಾನ ಪರಸ್ಪರ ವಿರುದ್ಧಾರ್ಥಕ ವಿಷಯವೆಂಬಂತೆ ಭಾವನೆಯಿದೆ. ಆದರೆ ವಿಜ್ಞಾನದ ಮೂಲಕ ಭಗವಂತನನ್ನು ಕಾಣಬಹುದೆಂಬ ಕಲ್ಪನೆ ಇದೀಗ ಬೆಳೆಯುತ್ತಿದೆ. ಭೌತವಿಜ್ಞಾನ ಇಂತಹ ಪ್ರಯತ್ನಕ್ಕೆ ಮಾಧ್ಯಮವಾಗಬಲ್ಲುದು. ಈ ರೀತಿಯ ಚಿಂತನೆಗಳು ಸಮಾಜದಲ್ಲಿ ಬೆಳವಣಿಗೆಯಾಗಿ ವಿಜ್ಞಾನದ ಮೂಲಕ ಭಗವಂತನನ್ನು ಕಾಣುವ ಪ್ರಯತ್ನ ಹೆಚ್ಚಾಗಬೇಕು ಎಂದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಹೇಳಿದರು. ಅವರು ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಪದವಿ ಮಹಾವಿದ್ಯಾಲಯಸ ತತ್ವಶಾಸ್ತ್ರ ಹಾಗೂ...
ಬಂಟ್ವಾಳ

ಸತೀಶ್ ರವರ ವಾರದ ಮೂರು ಬಾರಿಯ ಡಯಾಲೀಸ್ ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ನೆರವು – ಕಹಳೆ ನ್ಯೂಸ್

ಬಂಟ್ವಾಳ: ಪಾಣೆಮಂಗಳೂರಿನ ಮೊಗರ್ನಾಡು ನಿವಾಸಿ 47 ವರ್ಷದ ಸತೀಶ್ ಅವರ ಕುಟುಂಬವು ಚಿಂತಾಜನಕ ಸ್ಥಿತಿಯಲ್ಲಿದೆ. ಮೆಲ್ಕಾರಿನ ಹೋಟೆಲೊಂದರಲ್ಲಿ ದುಡಿಯುತ್ತಿದ್ದ ಇವರು ಸುಖೀ ಜೀವನ ನಡೆಸುತ್ತಿದ್ದರು. ವಿಧಿಯಾಟವೋ ಏನೋ ಎಂಬ೦ತೆ ಏಕಾಏಕಿ ಇವರ ಎರಡು ಕಿಡ್ನಿ ವೈಫಲ್ಯದಿಂದ ಖಾಯಿಲೆಗೆ ತುತ್ತಾಗಿ ಇಡೀ ಕುಟುಂಬದ ಆಧಾರವೇ ನೆಲಕ್ಕುರುಳಿದಂತಾಗಿದೆ. ವಾರಕ್ಕೆ ಮೂರು ಬಾರಿ ಡಯಾಲಿಸೀಸ್ ಚಿಕಿತ್ಸೆ ಮಾಡಬೇಕಾಗಿದೆ. ಈ ಪರಿಸ್ಥಿತಿಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಇವರ ಕುಂಟು೦ಬ, ದುಬಾರಿ ಖರ್ಚಿನ ಈ ಡಯಾಲಿಸೀಸ್...
ಬೆಳ್ತಂಗಡಿ

ಎಲ್.ಐ.ಸಿ ಗೋಲ್ಡನ್ ಜುಬ್ಲೀ ಫೌಂಡೇಶನ್ ವತಿಯಿಂದ ನಡೆಯುತ್ತಿರುವ 101 ಕೋಟಿ ರೂಪಾಯಿಗಳ ಸೇವಾಕಾರ್ಯ ಚಟುವಟಿಕೆಗಳನ್ನು ವಿವರಿಸಿದ ಎಲ್.ಐ.ಸಿಯ ರೀಜನಲ್ ಮ್ಯಾನೇಜರ್ ಎಮ್. ಜಗನ್ನಾಥ್ – ಕಹಳೆ ನ್ಯೂಸ್

ಸೌತಡ್ಕ : ಸೇವಾಭಾರತೀಯ ಅಂಗಸಂಸ್ಥೆಯಾದ ಸೇವಾಧಾಮದಲ್ಲಿ ಎಲ್.ಐ.ಸಿ ಗೋಲ್ಡನ್ ಜುಬ್ಲೀ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಸೋಲಾರ್ ಪ್ಯಾನಲ್ ಹಾಗೂ ವಾಟರ್ ಹೀಟರ್ ಉದ್ಘಾಟನ ಸಮಾರಂಭವು ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕರ್ನಾಟಕದ ಎಲ್.ಐ.ಸಿಯ ರೀಜನಲ್ ಮ್ಯಾನೇಜರ್ ಎಮ್.ಜಗನ್ನಾಥ್ ಅವರು ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ಎಮ್. ಜಗನ್ನಾಥ್ ಎಲ್.ಐ.ಸಿ ಗೋಲ್ಡನ್ ಜುಬ್ಲೀ ಫೌಂಡೇಶನ್ ವತಿಯಿಂದ ನಡೆಯುತ್ತಿರುವ 101 ಕೋಟಿ ರೂಪಾಯಿಗಳ ಸೇವಾಕಾರ್ಯ ಚಟುವಟಿಕೆಗಳನ್ನು ವಿವರಿಸಿದರು....
1 818 819 820 821 822 872
Page 820 of 872