ಪುತ್ತೂರು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಕಾರ್ಕಳದ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆ-ಕಹಳೆ ನ್ಯೂಸ್
ಪುತ್ತೂರು: ಸುದೀರ್ಘ ನಾಲ್ಕೂವರೆ ವರ್ಷ ಪುತ್ತೂರು ನಗರಸಭೆಯಲ್ಲಿ ಪೌರಾಯುಕ್ತರಾಗಿರುವ ರೂಪಾ ಶೆಟ್ಟಿಯವರಿಗೆ ಕಾರ್ಕಳದ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆ ಆದೇಶ ಬಂದಿದ್ದು, ಪುತ್ತೂರಿಗೆ ಚಿಕ್ಕಮಗಳೂರು ನಗರಸಭೆ ಪೌರಾಯುಕ್ತ ಮಧುಮನೋಹರ್ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 2016ರಲ್ಲಿ ಆಗಸ್ಟ್ 27ರಂದು ಪುತ್ತೂರಿಗೆ ವರ್ಗಾವಣೆಗೊಂಡಿದ್ದ ರೂಪಾ ಶೆಟ್ಟಿಯವರು ಸುಧೀರ್ಘ ನಾಲ್ಕೂವರೆ ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿಂದೆ ಪುರಸಭೆಯಾಗಿದ್ದ ಸಂದರ್ಭದಲ್ಲಿ 1991ರಲ್ಲಿಲ ರಮೇಶ್ ಪಿ.ಜಿ ಎಂಬವರು ನಾಲ್ಕು ವರ್ಷ ಮುಖ್ಯಾಧಿಕಾರಿಯಾಗಿ ಕರ್ತವ್ಯ...







