Sunday, June 14, 2026

ಪ್ರಾದೇಶಿಕ

ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಪ್ರಚೋದನಾಕಾರಿ ಭಾಷಣ ಆರೋಪ | ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಹಿಂದೂ ಜಾಗರಣ ವೇದಿಕೆ ಸಂಘಟಕರ ವಿರುದ್ಧವೂ ಪುತ್ತೂರಿನಲ್ಲಿ ಎಫ್.ಐ.ಆರ್…!! – ಕಹಳೆ ನ್ಯೂಸ್

ಪುತ್ತೂರು: ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದ ಹಿನ್ನೆಲೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತು ಹಿಂದೂ ಜಾಗರಣ ವೇದಿಕೆ ಸಂಘಟಿಕರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಪುತ್ತೂರಿನ ನಟರಾಜ ವೇದಿಕೆಯಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಉಮ್ಮರ್ ಎಂಬವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ವಿಷಯ...
ಪುತ್ತೂರು

ಪುತ್ತೂರು: ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ಹಲ್ಲೆ ಪ್ರಕರಣ: ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿದ್ಯಾರ್ಥಿಗಳನ್ನು ಅವರವರ ಮನೆಗೆ ತಲುಪಿಸಿದ ಪೊಲೀಸರು- ಕಹಳೆ ನ್ಯೂಸ್

ಪುತ್ತೂರು: ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿದ್ಯಾರ್ಥಿಗಳನ್ನು ಪೊಲೀಸರು ಅವರವರ ಮನೆಗೆ ತಲುಪಿಸಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳನ್ನು ಅಪ್ರಾಪ್ತರೆಂಬ ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಮಕ್ಕಳ ಮತ್ತು ಮಹಿಳೆಯರ ಅಪ್ತ ಸಮಾಲೋಚನಾ ಆಸರೆ ಎಂಬ ವಿಭಾಗಕ್ಕೆ 7 ಮಂದಿ ನಗರ ಪೊಲೀಸ್ ಠಾಣೆಯ ಕರೆತಂದಿದ್ದ ಪೊಲೀಸರು ವಿದ್ಯಾರ್ಥಿಗಳ ಮನ ಪರಿವರ್ತನ ಕಾರ್ಯದ ಬಳಿಕ ಅವರವರ ಮನೆಗೆ ಸುರಕ್ಷಿತವಾಗಿ ಕಳುಹಿಸಿದರು....
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಕೊಂಬೆಟ್ಟು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ | ಹಿಂದೂ ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದ ಪೋಲೀಸರು, ಪುತ್ತೂರು ಪೋಲೀಸ್ ಠಾಣೆಗೆ ಹಿಂದೂ ಜಾಗರಣಾ ವೇದಿಕೆ ಮುತ್ತಿಗೆ ; ಡಿವೈಎಸ್ಪಿ ಮತ್ತು ಮುಖಂಡರ ನಡುವೆ ಮಾತುಕತೆ – ಪ್ರತಿಭಟನೆ ಕೈ ಬಿಟ್ಟ ಹಿಂ.ಜಾ.ವೇ – ಕಹಳೆ ನ್ಯೂಸ್

ಪುತ್ತೂರು: ಕೊಂಬೆಟ್ಟು ವಿದ್ಯಾರ್ಥಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ವಿದ್ಯಾರ್ಥಿಗಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು‌ ಮಹಿಳಾ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದು, ಈ ಸಂದರ್ಭದಲ್ಲಿ ಆಗಮಿಸಿದ ಡಿವೈಎಸ್ ಪಿ ರವರು ಹಿಂದೂ ಜಾಗರಣ ವೇದಿಕೆ ಮುಖಂಡರು ಮತ್ತು ಕಾಲೇಜು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಜಗನ್ನಿವಾಸ್ ರಾವ್ ಮಾತುಕತೆ ನಡೆಸಿದರು. ಮಾತುಕತೆ ಮುಗಿದ ಬಳಿಕ ಮಾತನಾಡಿದ ಕಾಲೇಜು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಜಗನ್ನಿವಾಸ್ ರಾವ್,...
ಬಂಟ್ವಾಳ

ಬಂಟ್ವಾಳ: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಮೃತ್ಯು – ಕಹಳೆ ನ್ಯೂಸ್

ಬಂಟ್ವಾಳ: ಯುವತಿಯೋರ್ವಳು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕಾರಾಜೆಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಾಜೆ ನಿವಾಸಿ ಲಿಂಗಪ್ಪ ಮೂಲ್ಯರ ಪುತ್ರಿ ರಶ್ಮಿತ (24) ಬೆಳಿಗ್ಗೆ ದೇವರಿಗೆ ಪೂಜೆಗಾಗಿ ಹೂ ಕೊಯ್ಯಲು ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಪುತ್ತೂರು

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಆಶ್ರಯದಲ್ಲಿ ಶ್ರೀರಾಮ ಸಭಾ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತಾಡಿದ ಬಿಇಎಲ್ ಸಂಸ್ಥೆಯ ವಿಶ್ರಾಂತ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಟಿ. ಎನ್. ಸಿ. ಲಕ್ಷ್ಮಿನರಸಿಂಹನ್ ಸರ್ಕಾರವು ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರ ವ್ಯಾಪ್ತಿಯನ್ನು ವ್ಯಾಖ್ಯಾನಿಸುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ಧರಿಸುತ್ತದೆ. ಹೀಗಾಗಿ ಸಂವಿಧಾನವು ಎಲ್ಲಾ ಕಾನೂನುಗಳಿಗಿಂತ ಮಿಗಿಲಾದುದು...
ಬಂಟ್ವಾಳ

ಕಲ್ಲಡ್ಕ ವಲಯದ ಸ್ವಸಾಯ ಸಂಘಗಳ ಗೋಳ್ತಮಜಲು-ಸಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಮತಾ ಎಸ್ ಶೆಟ್ಟಿ ಆಯ್ಕೆ- ಕಹಳೆ ನ್ಯೂಸ್

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಸ್ವಸಾಯ ಸಂಘಗಳ ಗೋಳ್ತಮಜಲು- ಸಿ ಒಕ್ಕೂಟದ ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಕಲ್ಲಡ್ಕ ವಲಯದ ಮಾಜಿ ಅಧ್ಯಕ್ಷರಾದ ಶ್ರೀಯುತ ಶೇಖರ್ ಪೂಜಾರಿ, ಮೇಲ್ವಿಚಾರಕರಾದ ಶ್ರೀಮತಿ ಸುಗುಣಾ ಶೆಟ್ಟಿ , ಮತ್ತು ಸೇವಾ ಪ್ರತಿನಿಧಿ ಶ್ರೀಮತಿ ಗಿರಿಜಾ ಇವರ ಉಪಸ್ಥಿತಿಯಲ್ಲಿ ರಾಜೀವ್ ಯುವಕ ಮಂಡಲ ಬಾಯಿಲ ವೀರಕಂಬದಲ್ಲಿ...
ಪುತ್ತೂರು

ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ‘ಮಣಿಕರ್ಣಿಕ’ ವೇದಿಕೆಯಲ್ಲಿ ನಡೆದ ಬಾಲ್ಯದ ಮೆಲುಕು ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು : ವ್ಯಕ್ತಿಯ ಜೀವನದಲ್ಲಿ ಬಾಲ್ಯವೆಂಬುದು ಒಂದು ಮರೆಯಲಾಗದ ಅಧ್ಯಾಯ. ಬಾಲ್ಯದಲ್ಲಿ ಜಂಗಮವಾಣಿ ಇಲ್ಲದ ಜೀವನ ಮೈದಾನದತ್ತ ಸೆಳೆಯುತ್ತಿತ್ತು. ಆದರೆ ಬದಲಾದ ಕಾಲದೊಂದಿಗೆ ಜೀವನ ಕ್ರಮವನ್ನೂ ಬದಲಾಯಿಸಿಕೊಂಡಿದ್ದೇವೆ. ಇಂದಿನ ಮಕ್ಕಳಿಗೆ ಅಂದಿನ ಬಾಲ್ಯದ ಸೊಗಡು ಲಭ್ಯವಿಲ್ಲ. ಬಾಲ್ಯದ ನೆನಪುಗಳನ್ನು ಹಸಿರಾಗಿಸಿಕೊಳ್ಳಲು ವಯಸ್ಸಿನ ಹಂಗಿಲ್ಲ. ಬಾಲ್ಯ ಕಳೆದರೂ ಬಾಲ್ಯದ ಗೆಳೆಯರ ಒಡಗೂಡಿ ಅಂದು ಮಾಡುತ್ತಿದ್ದ ಚಟುವಟಿಕೆಗಳನ್ನು ಇಂದಿಗೂ ಹಮ್ಮಿಕೊಳ್ಳಲು ಸಾಧ್ಯ. ಅದಕ್ಕಾಗಿ ನಾವು ಮನಸ್ಸು ಮಾಡಬೇಕು ಎಂದು ವಿವೇಕಾನಂದ ಮಹಾವಿದ್ಯಾಲಯದ ಭೌತಶಾಸ್ತ್ರ...
ಪುತ್ತೂರು

ವಿವೇಕಾನಂದ ಮಹಾವಿದ್ಯಾಲಯದ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕ ಇದರ ಜಂಟಿ ಆಶ್ರಯದಲ್ಲಿ ನಡೆದ ಡಾ. ಸಿ. ಎಸ್ ಶಾಸ್ತ್ರಿ ಅವರ “ಸಂಚಾರ ವಿಚಾರ” ಕೃತಿ ಬಿಡುಗಡೆ ಸಮಾರಂಭ – ಕಹಳೆ ನ್ಯೂಸ್

ಪುತ್ತೂರು : ಪ್ರಯಾಣವು ನಮಗೆ ಹೊಸತನ ಹಾಗೂ ವಿಭಿನ್ನ ಅನುಭವಗಳನ್ನು ನೀಡುತ್ತದೆ. ಇಂತಹ ಪ್ರಯಾಣದ ಅನುಭವಗಳನ್ನು ಒಳಗೊಂಡಿರುವAತಹ ಪುಸ್ತಕ ಸಂಚಾರ ವಿಚಾರ ಈ ಪುಸ್ತಕವು ಸಕರಾತ್ಮಕವಾದ ಭಾವನೆಗಳಿಂದ ತುಂಬಿದ್ದು, ಸರಳ ಸಾಹಿತ್ಯವನ್ನು ಬಳಸಿಕೊಂಡು ಪ್ರಸ್ತುತ ಸಾಮಾಜಿಕ ಕಾಳಜಿ, ಮೌಲ್ಯಗಳ ಕಾಳಜಿಯನ್ನು ಸೂಕ್ಷ್ಮವಾಗಿ ಗುರುತಿಸುವಂತಹ ಪುಸ್ತಕವಾಗಿದೆ. ಭಾವುಕ ಮನಸುಗಳಿಗೆ ಸಾಹಿತ್ಯರೂಪದಲ್ಲಿ ಮನ ಮುಟ್ಟುವಂತೆ ಮಾಡುವ ಪುಸ್ತಕ ‘ಸಂಚಾರ ವಿಚಾರ’ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ...
1 690 691 692 693 694 887
Page 692 of 887