ಲಕ್ಷದೀಪೋತ್ಸವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ – ಶ್ರೀ.ಡಿ. ಹರ್ಷೇಂದ್ರ ಕುಮಾರ್ ಹೆಗ್ಗಡೆಯವರಿಂದ ಶಿಬಿರದ ಉದ್ಘಾಟನೆ – ಕಹಳೆ ನ್ಯೂಸ್
ಶ್ರೀ ಕ್ಷೇತ್ರ ಧರ್ಮಸ್ಧಳದ ಮಂಜುನಾಥ ದೇವರ ಸನ್ನಧಿಯಲ್ಲಿ ಲಕ್ಷದೀಪೋತ್ಸವ ನಡೆಯುತ್ತಿದ್ದು. ಈ ಲಕ್ಷದೀಪೋತ್ಸವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತೆರೆಯಲಾಗಿದೆ. ಸಿನರ್ಜಿ ಇನ್ಸೂರೆನ್ಸ್ ಬ್ರೋಕರ್ಸ್ ಮುಂಬಯಿ, ಎಡಲ್‌ವೈಸ್ ಗಾಲಿಗರ್ ಇನ್ಸೂರೆನ್ಸ್ ಬ್ರೋಕರ್ಸ್ ಮುಂಬಯಿ ಇವರ ಸಹಕಾರದೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾದ್ವಾರದ ಬಳಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತೆರೆಯಲಾಗಿದ್ದು, ಇಂದು ಹರ್ಷೇಂದ್ರ ಹೆಗ್ಗಡೆಯರು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಹರ್ಷೇಂದ್ರ ಹೆಗ್ಗಡೆಯರು, ‘ಭಕ್ತಾದಿಗಳು, ಯಾತ್ರೆ...






