ಆಳ್ವಾಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ’ಗೆ ಅಂತಿಮ ತೆರೆ | ವಿಶ್ವ ಜಾಂಬೂರಿ ಸಾಂಸ್ಕೃತಿಕ ಸಿರಿ ಸಂಭ್ರಮದ ಗರಿ ; ವಿಶಿಷ್ಟ ಉತ್ಸವಕ್ಕೆ ಸೊಗಸಿನ ಸಮಾಪನ – ಕಹಳೆ ನ್ಯೂಸ್
ಮೂಡುಬಿದಿರೆ: ಸಾಂಸ್ಕೃತಿಕ ಕಾರ್ಯಕಲಾಪ, ಸಾಹಸ- ವಿನೋದಾವಳಿಯ ಸಂಗಮ ವಾಗಿ ಆರು ದಿನಗಳಿಂದ ಆವರಣದ 150 ಎಕ್ರೆ ಪ್ರದೇಶದಲ್ಲಿ ಮೂಡಿಬಂದ “ವಿಶ್ವ ಜಾಂಬೂರಿ’ಯು ವಿಶ್ವದ “ಸಾಂಸ್ಕೃತಿಕ ಚಳವಳಿ’ಗೆ ರಾಜ್ಯದ ಕರಾವಳಿ ಭಾಗದ ಹೊಸ ಅಧ್ಯಾಯ ಸೇರಿದಂತಾಗಿದೆ. ದೇಶೀಯ ಮಟ್ಟದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿ -ಸಂಭ್ರಮಿಸಿದ ಮೊದಲ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಾಂಬೂರಿ ಇದಾಗಿದೆ. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಆಟೋಟ-ಚಟುವಟಿಕೆಗಳ ವಿಧ್ಯುಕ್ತ ಕಾರ್ಯಕ್ರಮಗಳಿಗೆ ಸೋಮವಾರ ಅಂತಿಮ ತೆರೆ ಎಳೆಯಲಾಯಿತು. ಆದರೆ ಪಂಚ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಂಗಳವಾರ ರಾತ್ರಿಯವರೆಗೂ...







