ಕುಂದಾಪುರದ ಮೊಗವೀರ ಭವನದಲ್ಲಿ ನಡೆದ ‘ಜನತಾ ನವನೀತ-2024’ ಕಾರ್ಯಕ್ರಮ – ಕಹಳೆ ನ್ಯೂಸ್
ಕುಂದಾಪುರ: ಗೆದ್ದವರ ಕಥೆಗಳಿಗಿಂತಲೂ ಅತೀ ಹೆಚ್ಚು ಸೋತವರ ಕಥೆಗಳನ್ನು ಓದಬೇಕು. ಗೆದ್ದವರ ಕಥೆಗಳು ಅಹಂಕಾರವನ್ನು ಕಲಿಸಿದರೆ ಸೋತವರ ಕಥೆಗಳು ನಮಗೆ ಬದುಕುವುದನ್ನು ಕಲಿಸುತ್ತವೆ. ಯಶೋಗಾಥೆಗಳು ಆರಂಭವಾಗುವುದೇ ಬಡತನ ಹಾಗೂ ಹಸಿವಿನಿಂದ ಎಂದು ಶಿಕ್ಷಕ, ವ್ಯಕ್ತಿತ್ವ ವಿಕಸನ ತರಬೇತುದಾರ ರಾಜೇಂದ್ರ ಭಟ್ ಕೆ ಅಭಿಮತ ವ್ಯಕ್ತಪಡಿಸಿದರು. ಕುಂದಾಪುರದ ಮೊಗವೀರ ಭವನದಲ್ಲಿ ಜರುಗಿದ ವಿವಿವಿ ಮಂಡಳಿ (ರಿ) ಹೆಮ್ಮಾಡಿ, ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ (ರಿ) ಆಡಳಿತಕ್ಕೊಳಪಟ್ಟ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ...







