ಸೈಂಟ್ ಮೇರಿಸ್ ಪ್ರೌಢಶಾಲೆ ತೆರೆದ ಮನೆ ಯೋಜನೆಯಡಿ ಪೋಲಿಸರ ಕಾರ್ಯ ವೈಖರಿ ತಿಳಿದುಕೊಂಡ ವಿದ್ಯಾರ್ಥಿಗಳು-ಕಹಳೆ ನ್ಯೂಸ್
ಕುಂದಾಪುರ: ಪ್ರತಿದಿನ ಪಾಠ ಆಟದ ನಡುವೆ ಶಾಲೆಯಲ್ಲೇ ಕಳೆಯುತ್ತಿದ್ದ ವಿದ್ಯಾರ್ಥಿಗಳು ಗಾಂಧಿ ಜಯಂತಿಯ ಪ್ರಯುಕ್ತ ಹತ್ತಾರು ವಿದ್ಯಾರ್ಥಿಗಳು ಪೋಲಿಸ್ ಠಾಣೆಯ ಮೆಟ್ಟಿಲೇರಿ ಪೋಲಿಸರನ್ನೇ ಪ್ರಶ್ನಿಸಿದರು. ಇದು ಬುಧವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ ನ ವಿದ್ಯಾರ್ಥಿಗಳು ಕುಂದಾಪುರ ನಗರ ಠಾಣೆ ಮತ್ತು ಸಂಚಾರಿ ಠಾಣೆಗೆ “ತೆರೆದ ಮನೆ” ಯೋಜನೆಯಡಿ ಭೇಟಿ ನೀಡಿ ಪೋಲಿಸ್ ಠಾಣೆಯ ಕಾರ್ಯ ವೈಖರಿಯ ಬಗ್ಗೆ ತಿಳಿದುಕೊಂಡರು. ವಿದ್ಯಾರ್ಥಿಗಳು ಪೋಲಿಸರಿಗೆ ಪ್ರಶ್ನೆಯ ಮೇಲೆ ಪ್ರಶ್ನೆಗಳನ್ನು...







