ಮೇ.1ರಿಂದ 10ರ ತನಕ ಕುಂದಾಪುರ ಮತ್ತು ಮಂಗಳೂರಿನಲ್ಲಿ ಕ್ರೀಡಾ ಹಬ್ಬ ನಡೆಯಲಿದೆ ; ಟಾರ್ಪೆಡೊಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ-ಕಹಳೆ ನ್ಯೂಸ್
ಕುಂದಾಪುರ : ಕರ್ನಾಟಕ ಕ್ರೀಡಾ ಇತಿಹಾಸದಲ್ಲೇ ಅಪೂರ್ವವೆನಿಸಿರುವ ಕ್ರೀಡಾ ಹಬ್ಬವೊಂದನ್ನು ಆಯೋಜಿಸಲು ರಾಜ್ಯದ ಅತ್ಯಂತ ಜನಪ್ರಿಯ ಸ್ಪೋಟ್ರ್ಸ್ ಕ್ಲಬ್‍ಗಳಲ್ಲಿ ಒಂದಾಗಿರುವ ಟಾರ್ಪೆಡೊಸ್ ಸ್ಪೋಟ್ರ್ಸ್ ಕ್ಲಬ್ ನೇತೃತ್ವದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 10 ದಿನಗಳ ಕಾಲ ಹೊನಲು ಬೆಳಕಿನ ಕ್ರೀಡಾ ಹಬ್ಬವನ್ನು ಆಯೋಜಿಸಿದೆ. ಇದೇ ಮೇ.1ರಿಂದ 10ರ ತನಕ ಕುಂದಾಪುರ ಮತ್ತು ಮಂಗಳೂರಿನಲ್ಲಿ ಕ್ರೀಡಾ ಹಬ್ಬ ನಡೆಯಲಿದೆ ಎಂದು ಟಾರ್ಪೆಡೊಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ತಿಳಿಸಿದ್ದಾರೆ....





